ಬೈಕ್​ ಸಾಗಿಸುತ್ತಿದ್ದ ಕಂಟೇನರ್‌ ಲಾರಿ ಧಗಧಗ: ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಹಾನಿ

ಚಿತ್ತೂರಿನಿಂದ ಕಕಿನದಗೆ ಕಂಟೇನರ್​ನಲ್ಲಿ‌ ಹೀರೋ‌ ಹೊಂಡ ವಾಹನಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಇಂದ್ರಪಾಲೆಂ‌ ಬಳಿ ವಾಹನಗಳನ್ನು‌ ಸಾಗಿಸುತ್ತಿದ್ದ ಕಂಟೇನರ್‌ ಲಾರಿಗೆ‌ ಬೆಂಕಿ ಹೊತ್ತಿಕೊಂಡಿದ್ದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿದೆ.

ಬೈಕ್​ ಸಾಗಿಸುತ್ತಿದ್ದ ಕಂಟೇನರ್‌ ಲಾರಿ ಧಗಧಗ: ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಹಾನಿ
ವಾಹನಗಳನ್ನು‌ ಸಾಗಿಸುತ್ತಿದ್ದ ಕಂಟೇನರ್‌ ಲಾರಿಗೆ‌ ಬೆಂಕಿ
ಆಯೇಷಾ ಬಾನು

Updated on: Dec 21, 2020 | 9:31 AM

ಹೈದರಾಬಾದ್: ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಕಂಟೇನರ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಆಂಧ್ರಪ್ರದೇಶದ ಮುಖ್ಯ ಹೆದ್ದಾರಿಯಲ್ಲಿ‌ ನಡೆದಿದೆ.

ಚಿತ್ತೂರಿನಿಂದ ಕಕಿನದಗೆ ಕಂಟೇನರ್​ನಲ್ಲಿ‌ ಹೀರೋ‌ ಹೊಂಡ ವಾಹನಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಇಂದ್ರಪಾಲೆಂ‌ ಬಳಿ ವಾಹನಗಳನ್ನು‌ ಸಾಗಿಸುತ್ತಿದ್ದ ಕಂಟೇನರ್‌ ಲಾರಿಗೆ‌ ಬೆಂಕಿ ಹೊತ್ತಿಕೊಂಡಿದ್ದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿದೆ.

ಕಂಟೇನರ್​ನಲ್ಲಿ ಸುಮಾರು 40ಕ್ಕೂ ಹೆಚ್ಚು ವಾಹನಗಳಿದ್ದವು ಎಂದು ಮೂಲಗಳಿಂದ ತಿಳಿಸು ಬಂದಿದೆ. ಈ ಪೈಕಿ ಅನೇಕ ದ್ವಿಚಕ್ರ ವಾಹನಗಳು ಬೆಂಕಿಗೆ‌ ಸಂಪೂರ್ಣ ಆಹುತಿಯಾಗಿದ್ದು ಕೆಲವು ವಾಹನಗಳು ಅರ್ಧಂಬರ್ಧ ಸುಟ್ಟು ಹೋಗಿವೆ. ಸದ್ಯ ಚಾಲಕನಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಮದ್ಯ ಸರಬರಾಜು ಟ್ರಕ್​ಗೆ ಕ್ರೇನ್​ ಡಿಕ್ಕಿ: ಉರುಳಿಬಿದ್ದ ಟ್ರಕ್​ನಿಂದ ಮದ್ಯದ ಬಾಟಲಿಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನರು

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us