ನವದೆಹಲಿ: ಯುಪಿಎಸ್‌ಸಿ ಕೋಚಿಂಗ್ ಸೆಂಟರ್ನಲ್ಲಿ ತರಗತಿಯಲ್ಲಿ ಪಾಠ ಮಾಡುವಾಗ ರಾಮಾಯಣದ ಬಗ್ಗೆ ಆಕ್ಷೇಪಾರ್ಹ ವಿವರ ನೀಡಿದ್ದ ಯುಪಿಎಸ್‌ಸಿ ತರಬೇತುದಾರ ವಿಕಾಸ್ ದಿವ್ಯಕೃತಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದೆಹಲಿಯ ಜನಪ್ರಿಯ ಯುಪಿಎಸ್‌ಸಿ ಕೋಚಿಂಗ್ ಸೆಂಟರ್ ‘ದೃಷ್ಟಿ ಐಎಎಸ್’ ವಿರುದ್ಧ ಶುಕ್ರವಾರ ಬೆಳಗ್ಗೆಯಿಂದ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ರಾವಣ ಅಪಹರಿಸಿದ ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ. ನಾನು ಸೀತೆಗಾಗಿ ರಾವಣನೊಂದಿಗೆ ಯುದ್ಧ ಮಾಡಲಿಲ್ಲ ಎಂದು ಶ್ರೀರಾಮ ಸೀತೆಗೆ ಹೇಳಿದ್ದ ಎಂದು ರಾಮಾಯಣದ ಉಲ್ಲೇಖ ಮಾಡಿ ಯುಪಿಎಸ್‌ಸಿ ತರಬೇತುದಾರ ಡಾ. ವಿಕಾಸ್ ದಿವ್ಯಕೃತಿ ಹೇಳಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು.
ಯುಪಿಎಸ್‌ಸಿ ತರಬೇತುದಾರ ವಿಕಾಸ್ ದಿವ್ಯಕೃತಿ ಎಂಬುವವರ ಉಪನ್ಯಾಸದ ವಿಡಿಯೋ ವೈರಲ್ ಆದ ನಂತರ #BanDrishtiIAS ಎಂಬ ಹ್ಯಾಷ್ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಈ ವಿಡಿಯೋದಲ್ಲಿ ವಿಕಾಸ್ ದಿವ್ಯಕೃತಿ ಅವರು ತಮ್ಮ ಯುಪಿಎಸ್‌ಸಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಮಹಾಕಾವ್ಯ ರಾಮಾಯಣವನ್ನು ಬೋಧಿಸುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ದೃಶ್ಯ ಕಂಡುಬಂದಿತ್ತು.
ಇದನ್ನೂ ಓದಿ: Shri Ramayana Yatra Train: ಭಾರತೀಯ ರೈಲ್ವೆ ಇಲಾಖೆಯಿಂದ ಶ್ರೀ ರಾಮಾಯಣ ಯಾತ್ರಾ ರೈಲು ಸಂಚಾರ ಆರಂಭ
ಇದರಿಂದ ಆಕ್ರೋಶಗೊಂಡ ಟ್ವಿಟ್ಟರ್ ಬಳಕೆದಾರರು ಕೋಚಿಂಗ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿದ್ದರು. ಅನೇಕ ಟ್ವಿಟ್ಟರ್ ಬಳಕೆದಾರರು ವಿಕಾಸ್ ಹೇಳಿಕೆಯಿಂದ ಮನನೊಂದು ಯುಪಿಎಸ್‌ಸಿ ತರಬೇತುದಾರ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಐಎಎಸ್ ಆಕಾಂಕ್ಷಿಗಳಿಗೆ ಟ್ಯೂಷನ್ ನೀಡುವ ದೃಷ್ಟಿ ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕ ಮತ್ತು ನಿರ್ದೇಶಕರೂ ಆಗಿರುವ ಡಾ. ವಿಕಾಸ್ ದಿವ್ಯಕೃತಿ ಅವರು ಶಿಕ್ಷಣತಜ್ಞರಾಗಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಡಾ. ದಿವ್ಯಕೃತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಗೇ, ಕೋಚಿಂಗ್ ಸಂಸ್ಥೆಯನ್ನು ಬ್ಯಾನ್ ಮಾಡಲು ಒತ್ತಾಯಿಸಿದ್ದಾರೆ.
Retweet If You Want . #BanDrishtiIAS pic.twitter.com/1yeLcZ9cHK
— Dr. Prachi Sadhvi (@Sadhvi_prachi) November 11, 2022
ಸಾಧ್ವಿ ಪ್ರಾಚಿಯಂತಹ ಹಿಂದುತ್ವವಾದಿ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಟ್ವಿಟ್ಟರ್ ಅಭಿಯಾನವು ಬಲಗೊಳ್ಳುತ್ತಿದ್ದಂತೆ, ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಬೆಂಬಲವಾಗಿ ಬಂದು ಪೂರ್ಣ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಡಾ ದಿವ್ಯಕೃತಿ ಈ ಪೂರ್ಣ ವಿಡಿಯೋದಲ್ಲಿ “ಹಿಂದಿ ಚಲನಚಿತ್ರಗಳಲ್ಲಿ ನಾಯಕ ಮತ್ತು ನಾಯಕಿ ಕೊನೆಯಲ್ಲಿ ಭೇಟಿಯಾದಾಗ ಅವರು ಎದುರು ಬದುರಿನಿಂದ ಓಡಿ ಬರುತ್ತಾರೆ. ಆದರೆ, ಇಲ್ಲಿ ರಾಮನು ರಾವಣನನ್ನು ಸೋಲಿಸಿದನೆಂದು ಸೀತೆ ಸಂತೋಷಪಟ್ಟಳು. ಅದಾದ ಬಳಿಕ ಅವಳು ತುಂಬಾ ದಿನಗಳ ನಂತರ ಮನೆಗೆ ಹೋಗುತ್ತಾಳೆ. ರಾಮನಿಗೆ ಸೀತೆಯನ್ನು ನೋಡಿ ತುಂಬಾ ಸಂತೋಷವಾಗುತ್ತದೆ ಎಂದು ಆಕೆ ಭಾವಿಸಿದ್ದಳು. ಆದರೆ, ರಾಮ ಅವಳನ್ನು ತಡೆದು ನನಗೆ ಈ ಮಾತುಗಳನ್ನು ಹೇಳಲು ತುಂಬ ಕಷ್ಟವಾಗುತ್ತಿದೆ. ಆ ಮಾತುಗಳನ್ನು ಹೇಳಿದರೆ ನನ್ನ ನಾಲಿಗೆ ಉದುರುತ್ತದೆ. ಆದರೆ ನಾನು ಹೇಳಲೇಬೇಕಾಗಿದೆ. ಏನು ಮಾಡಲಿ? ಎಂದು ರಾಮ ಸೀತೆಯನ್ನು ಕೇಳಿದನು ಎಂದು ವಿಕಾಸ್ ದಿವ್ಯಕೃತಿ ಹೇಳಿದ್ದಾರೆ.
पहले पूरा देखो उसके बाद आंकलन किया करो
हम सनातनी है मूर्ख नही
गंदी राजनीति व @Sadhvi_prachi जैसे
कम समझदार लोगो के चक्कर मे न पड़े।शिक्षा के मंदिरों को इससे दूर रखें
कुते वाला कथन .. किसी ग्रन्थ में कवि द्वारा कहा गया है
Say no to #BanDrishtiIAS #ISupportDrishtiIAS pic.twitter.com/Jhk8K5Rzh5
— Lekhraj Sarva (@LekhrajSarva) November 11, 2022
ಇದನ್ನೂ ಓದಿ: ರಾಮ ದೇವರಲ್ಲ, ಆತ ರಾಮಾಯಣದ ಒಂದು ಪಾತ್ರವಷ್ಟೇ; ಬಿಹಾರದ ಬಿಜೆಪಿ ಮಿತ್ರಪಕ್ಷದ ನಾಯಕನ ಅಚ್ಚರಿಯ ಹೇಳಿಕೆ
ಆಗ ಅವನು “ರಾಮನಾದ ನಾನು ಸೀತೆಗಾಗಿ ಯುದ್ಧ ಮಾಡಿಲ್ಲ. ನಾನು ನನ್ನ ವಂಶಕ್ಕಾಗಿ ಯುದ್ಧ ಮಾಡಿದೆ. ನಾಯಿಯಿಂದ ನೆಕ್ಕಲ್ಪಟ್ಟ ನಂತರ ತುಪ್ಪವು ಸೇವನೆಗೆ ಅನರ್ಹವಾಗುತ್ತದೆ. ನೀನು ಈಗ ನನಗೆ ಅರ್ಹರಲ್ಲ.” ಎಂದು ಸೀತೆಗೆ ಹೇಳಿದನು. ರಾಮನ ಮಾತನ್ನು ಕೇಳಿ ಸೀತೆ ನೊಂದುಕೊಂಡಳು ಎಂದು ವಿಕಾಸ್ ದಿವ್ಯಕೃತಿ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟಪನೆ ನೀಡಿರುವ ಡಾ. ವಿಕಾಸ್ ದಿವ್ಯಕೃತಿ, ನಾನು ಹೇಳಿರುವ ಮಾಹಿತಿಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದಾರೆ.
ಸಂದರ್ಶನದಲ್ಲಿ ಡಾ. ವಿಕಾಸ್ ದಿವ್ಯಕೃತಿ ಅವರು ಪುರುಷೋತ್ತಮ್ ಅಗರ್ವಾಲ್ ಅವರ ಪುಸ್ತಕದಿಂದ ಈ ಮಾಹಿತಿ ಪಡೆದಿದ್ದಾಗಿ ಉಲ್ಲೇಖಿಸಿದ್ದಾರೆ. “ನಾನು ಸಾಕ್ಷಿಗಳಿಲ್ಲದೆ ಮಾತನಾಡುವುದಿಲ್ಲ. ಪುರುಷೋತ್ತಮ್ ಅವರು UPSC ಸದಸ್ಯರಾಗಿದ್ದಾರೆ. ಅಂದರೆ ನಾವು ನಮ್ಮ ಅಧ್ಯಯನದಲ್ಲಿ ಅವರನ್ನು ಉಲ್ಲೇಖಿಸಬಹುದು. ನಾನು ಸಂಸ್ಕೃತದಲ್ಲಿ ರಾಮಾಯಣ ಅಥವಾ ಮಹಾಭಾರತವನ್ನು ಓದಿಲ್ಲ. ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸುವ ಈ ಪುಸ್ತಕದಲ್ಲಿ ನಾನು ಈ ಮಾಹಿತಿಯನ್ನು ನೋಡಿದ್ದೇನೆ. ಅದನ್ನೇ ನಾನು ಹೇಳಿದ್ದೇನೆ” ಎಂದು ಡಾ. ದಿವ್ಯಾಕೃತಿ ಹೇಳಿದ್ದಾರೆ.