ಲಾಕ್‌ಡೌನ್ ಬಳಿಕ ದಿಢೀರ್ ಅಂತಾ ಏರಿಕೆ ಕಂಡ ಅಡುಗೆ ಎಣ್ಣೆ ರೇಟ್, ಯಾಕೆ?
ದೆಹಲಿ: ಲಾಕ್‌ಡೌನ್ ಬಳಿಕ ದೇಶದಲ್ಲಿ ಅಡುಗೆ ಎಣ್ಣೆ ದರ ಏರಿಕೆ ಕಂಡಿದ್ದು ಕಳೆದ 20 ದಿನದಲ್ಲಿ ಅಡುಗೆ ಎಣ್ಣೆ ದರ ಲೀಟರ್ಗೆ 22 ರೂಪಾಯಿಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಎಣ್ಣೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ ಎಂದು ತಿಳಿದುಬಂದಿದೆ. ಹೌದು, ಕಳೆದ 20 ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಸಗಟು ದರ ಲೀಟರ್ಗೆ 22 ರೂಪಾಯಿ ಏರಿಕೆ ಕಂಡಿದೆ. ಮಾರುಕಟ್ಟೆಗಳಲ್ಲೇ ಇಷ್ಟು ಬೆಲೆಯಾದ್ರೆ ಬೇರೆ ಅಂಗಡಿಗಳಲ್ಲಿ ಇನ್ನೆಷ್ಟು ದುಬಾರಿಯಾಗುತ್ತದೆ ಎಂದು ಸಾರ್ವಜನಿಕರು […]
ದೆಹಲಿ: ಲಾಕ್‌ಡೌನ್ ಬಳಿಕ ದೇಶದಲ್ಲಿ ಅಡುಗೆ ಎಣ್ಣೆ ದರ ಏರಿಕೆ ಕಂಡಿದ್ದು ಕಳೆದ 20 ದಿನದಲ್ಲಿ ಅಡುಗೆ ಎಣ್ಣೆ ದರ ಲೀಟರ್ಗೆ 22 ರೂಪಾಯಿಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಎಣ್ಣೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ ಎಂದು ತಿಳಿದುಬಂದಿದೆ.
ಹೌದು, ಕಳೆದ 20 ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಸಗಟು ದರ ಲೀಟರ್ಗೆ 22 ರೂಪಾಯಿ ಏರಿಕೆ ಕಂಡಿದೆ. ಮಾರುಕಟ್ಟೆಗಳಲ್ಲೇ ಇಷ್ಟು ಬೆಲೆಯಾದ್ರೆ ಬೇರೆ ಅಂಗಡಿಗಳಲ್ಲಿ ಇನ್ನೆಷ್ಟು ದುಬಾರಿಯಾಗುತ್ತದೆ ಎಂದು ಸಾರ್ವಜನಿಕರು ಚಿಂತಿಸುತ್ತಿದ್ದಾರೆ. ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ 20 ದಿನದಲ್ಲಿ ಲೀಟರ್ ಗೆ 22 ರೂಪಾಯಿ ಏರಿಕೆಯಾಗಿದೆ.
ಆಗಸ್ಟ್ ಅಂತ್ಯದಲ್ಲಿ 980 ರೂಪಾಯಿ (ಪ್ರತಿ ಬಾಕ್ಸ್) ಇದ್ದ ದರ ಪ್ರಸ್ತುತ 1,220 ರೂಪಾಯಿಗೆ ಮಾರಾಟವಾಗ್ತಿದೆ. ಅಂದರೆ, 1 ಲೀಟರ್ಗೆ 122ರೂಪಾಯಿ ದರ ನಿಗದಿಯಾಗಿದೆ. ಜೊತೆಗೆ, ತಾಳೆ ಎಣ್ಣೆಯ ಪ್ರತಿ ಬಾಕ್ಸ್ಗೆ 900 ರೂಪಾಯಿ ಇದ್ದರೆ, ಗೋಲ್ಡ್ ವಿನರ್ ಆಯಿಲ್ 1,200 ರೂಪಾಯಿಗೆ (ಪ್ರತಿ ಬಾಕ್ಸ್) ಮಾರಾಟವಾಗುತ್ತಿದೆ.
ಇನ್ನು ಭಾರತದಲ್ಲಿ ಒಟ್ಟು 7.94 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಸಲಾಗುತ್ತದೆ. ಆಂಧ್ರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ ಮತ್ತು ತಮಿಳುನಾಡಿಗೆ ಹೋಲಿಸಿದ್ರೆ ಕರ್ನಾಟಕದಲ್ಲೇ ಅತಿ ಹೆಚ್ಚು ಸೂರ್ಯಕಾಂತಿ ಬೆಳೆಸಲಾಗುತ್ತದೆ.
ಲಾಕ್‌ಡೌನ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಬಳಕೆ ಕಮ್ಮಿಯಾಗಿತ್ತು. ಆದರೆ, ಅನ್ಲಾಕ್ ಬಳಿಕ ಬೇಡಿಕೆ ಹೆಚ್ಚಾಗಿರೋದ್ರಿಂದ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇದೀಗ ದರ ಹೆಚ್ಚಳ ಗ್ರಾಹಕರ ಬಾಯಿ ಸುಡುವಂತೆ ಮಾಡಿದೆ.
ಇನ್ನೂ ಪ್ರತಿ ಲೀಟರ್ಗೆ ಹಿಂದಿನ ಮತ್ತು ಈಗಿನ ದರವನ್ನು ಹೋಲಿಸುವುದಾದರೆ 1. ಗೋಲ್ಡ್ ವಿನ್ನರ್ ಸೂರ್ಯಕಾಂತಿ ಎಣ್ಣೆ : ಹೊಸ ದರ- 130 ರೂ; ಹಳೆಯ ದರ- 98 ರೂ 2. ಫ್ರೀಡಂ ಸೂರ್ಯಕಾಂತಿ ಎಣ್ಣೆ: ಹೊಸ ದರ- 125 ರೂ; ಹಳೆಯ ದರ- 85ರೂ 3. ರುಚಿ ಗೋಲ್ಡ್ ತಾಳೆ ಎಣ್ಣೆ: ಹೊಸ ದರ- 95 ರೂ; ಹಳೆಯ ದರ- 78 ರೂ 4. ಬೆಸ್ಟ್ ಚಾಯಿಸ್ ತಾಳೆ ಎಣ್ಣೆ: ಹೊಸ ದರ- 85ರೂ; ಹಳೆಯ ದರ- 72 ರೂ
Published On - 7:10 pm, Sat, 19 September 20