ಚಂಡೀಗಢ: ಪಂಜಾಬ್ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂವನ್ನು ಜ.1ರವರೆಗೆ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಇದರಿಂದ ಹೊಸ ವರ್ಷದ ಸಂಭ್ರಮಾಚರಣೆಗೂ ಬ್ರೇಕ್ ಬಿದ್ದಂತಾಗಿದೆ.
ಕೊರೊನಾ ವೈರಸ್ ಸೋಂಕು ನಿಯಂತ್ರಣ ಮಾಡಲು ಈ ಮೊದಲು ಡಿ.15ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ, ಈಗ ಕೊರೊನಾ ಕಡಿಮೆ ಆಗದ ಕಾರಣ ಹೊಸ ವರ್ಷದವರೆಗೂ ರಾತ್ರಿ ಕರ್ಫ್ಯೂ ವಿಸ್ತರಣೆ ಆಗಿದೆ. ಹೀಗಾಗಿ, ಜನರು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಓಡಾಟ ನಡೆಸಬಹುದಾಗಿದೆ.
ಮದುವೆ ಮನೆಯ ಮೇಲೆ ಕಣ್ಣು: ಮನೆ ಅಥವಾ ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆದರೆ 100 ಜನ ಹಾಗೂ ತೆರೆದ ಪ್ರದೇಶದಲ್ಲಿ ಮದುವೆ ಮಾಡಿದರೆ 250 ಜನರು ಸೇರಬಹುದು ಎಂದು ಪಂಜಾಬ್ ಸರ್ಕಾರ ಹೇಳಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೂಚಿಸಿದ್ದಾರೆ. ನಿಯಮ ಮೀರುವವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
Punjab CM Captain Amarinder Singh orders extension of night curfew & curbs on number of people at gatherings till January 1, 2021, with directives to the state police to ensure strict compliance, especially at marriage palaces: Punjab Chief Minister’s Office (CMO)
— ANI (@ANI) December 11, 2020
ಪಂಜಾಬ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದಿಂದಾಗಿ ಪಂಜಾಬ್ನಲ್ಲಿ ಗುರುವಾರ 28 ಸಾವು ಸಂಭವಿಸಿದೆ. ಈವರೆಗೆ ಸತ್ತವರ ಸಂಖ್ಯೆ 5 ಸಾವಿರಕ್ಕೆ ಏರಿಕೆ ಆಗಿದೆ. 635 ಹೊಸ ಪ್ರಕರಣ ದಾಖಲಾಗಿದೆ. ಸೋಂಕಿತರ ಒಟ್ಟು ಸಂಖ್ಯೆ 1,58,556 ಆಗಿದೆ.
ಕೊರೊನಾ ಲಸಿಕೆಗೂ ತಪ್ಪಲಿಲ್ಲ ಹ್ಯಾಕರ್ಸ್ ಕಾಟ; ಸೈಬರ್ ಅಟ್ಯಾಕ್ಗೆ ಬೆದರಿದ ಫೈಜರ್, ಬಯೋಎನ್ಟೆಕ್