14 ಸಾವಿರ ಗಡಿಯತ್ತ ಸೋಂಕಿನ ಸುಳಿಗಾಳಿ, ಕೊರೊನಾ ಹೊಡೆತಕ್ಕೆ ಪತರಗುಟ್ಟಿದ ಭಾರತ!
ದೆಹಲಿ: ಭಾರತದಲ್ಲಿ ಬೆನ್ನು ಬಿದ್ದ ಬೇತಾಳದಂತೆ ಕಾಡ್ತಿರೋ ಕೊರೊನಾ ಹೆಮ್ಮಾರಿ ಕಂಡ ಕಂಡವರನ್ನ ಕೊಂದು ಕೆಡವ್ತಿದೆ. ಸೋಂಕಿತರು ಸುಳಿದಾಡಿದ ಕಡೆ ಎಲ್ಲಾ ನಂಜು ದೇಹಕ್ಕೆ ವಕ್ಕರಿಸಿಕೊಳ್ತಿದೆ. ದೇಶದಲ್ಲಿ ಒಂದಲ್ಲ ಕೊರೊನಾ 14 ಸಾವಿರದ ಗಡಿಯತ್ತ ಮುನ್ನುಗ್ತಿದ್ರೆ, 452 ಬಲಿ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ದೊಡ್ಡ ದೊಡ್ಡ ರಾಜ್ಯಗಳೇ ಪತರಗುಟ್ಟಿ ಹೋಗಿವೆ. ಕಂಡ ಕಂಡ ಕಡೆ ಎಲ್ಲಾ ವೈರಸ್ ಬಾಂಗ್ ವಿಸ್ಫೋಟಗೊಳ್ತಿದೆ. ಸೋಂಕಿನ ಕ್ಷಿಪಣಿಗಳನ್ನೇ ಸಿಕ್ಕ ಸಿಕ್ಕ ಕಡೆಗೆಲ್ಲಾ ಎಸೆದು ಹೋಗ್ತಿದೆ. ಮಾರಿಯ ವಿಷಜಾಲ ಬಳ್ಳಿಯಂತೆ ಬಲವಾಗ್ತಿದೆ. […]
ದೆಹಲಿ: ಭಾರತದಲ್ಲಿ ಬೆನ್ನು ಬಿದ್ದ ಬೇತಾಳದಂತೆ ಕಾಡ್ತಿರೋ ಕೊರೊನಾ ಹೆಮ್ಮಾರಿ ಕಂಡ ಕಂಡವರನ್ನ ಕೊಂದು ಕೆಡವ್ತಿದೆ. ಸೋಂಕಿತರು ಸುಳಿದಾಡಿದ ಕಡೆ ಎಲ್ಲಾ ನಂಜು ದೇಹಕ್ಕೆ ವಕ್ಕರಿಸಿಕೊಳ್ತಿದೆ. ದೇಶದಲ್ಲಿ ಒಂದಲ್ಲ ಕೊರೊನಾ 14 ಸಾವಿರದ ಗಡಿಯತ್ತ ಮುನ್ನುಗ್ತಿದ್ರೆ, 452 ಬಲಿ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ದೊಡ್ಡ ದೊಡ್ಡ ರಾಜ್ಯಗಳೇ ಪತರಗುಟ್ಟಿ ಹೋಗಿವೆ.
ಕಂಡ ಕಂಡ ಕಡೆ ಎಲ್ಲಾ ವೈರಸ್ ಬಾಂಗ್ ವಿಸ್ಫೋಟಗೊಳ್ತಿದೆ. ಸೋಂಕಿನ ಕ್ಷಿಪಣಿಗಳನ್ನೇ ಸಿಕ್ಕ ಸಿಕ್ಕ ಕಡೆಗೆಲ್ಲಾ ಎಸೆದು ಹೋಗ್ತಿದೆ. ಮಾರಿಯ ವಿಷಜಾಲ ಬಳ್ಳಿಯಂತೆ ಬಲವಾಗ್ತಿದೆ. ಕೊಲೆಪಾತಕ ಕೊರೊನಾ ಸಾವಿನ ನಗಾರಿಗೆ ಊರೇ ದಂಗೆದ್ದು ಕೂತಿದೆ. ದೇಶದೆಲ್ಲೆಡೆ ಕ್ರೂರಿ ಸದ್ದಿಲ್ಲದೇ ಬೇರುಬಿಡ್ತಿದೆ. ಕಡು ಕಠೋರ ನಂಜಿನ ನಂಟು ದಿಲ್ಲಿಯಿಂದ ಹಳ್ಳಿಯವರೆಗೂ ಕತ್ತಿಗೆ ಸುತ್ತಿಕೊಳ್ತಿದೆ. ಕೊರೊನಾ ಕಣಗಳು ವಕ್ಕರಿಸಿಕೊಳ್ತಿರೋ ಏಟಿಗೆ ದೇಶವೇ ಕಂಪಿಸಿಬಿಟ್ಟಿದೆ.
ಯೆಸ್.. ಕಾಶ್ಮೀರದಿಂದ ಕನ್ಯಾಕುಮಾರವರೆಗೂ.. ಪೂರ್ವದಿಂದ ಪಶ್ಚಿಮದವರೆಗೂ.. ಊರಿನೆದುರಿಗಿರೊ ಹೆಬ್ಬಾಗಿಲು.. ಮನೆ ಮುಂದಿರೊ ಹೊಸ್ತಿಲನ್ನೇ ದಾಟಿ ಕೊರೊನಾ ವಕ್ಕರಿಸಿಕೊಳ್ತಿದೆ. ದೇಶದದಲ್ಲಿ ನಿಮಿಷಕೊಬ್ಬರ ಉಸಿರು ನಿಲ್ಲಿಸ್ತಿರೋ ಯಮದೂತ ಸಾವಿನ ಡೋಲು ಬಾರಿಸ್ತಿದೆ. ಲಾಕ್ಡೌನ್ ಜಾರಿಯಾಗಿದ್ರೂ.. ರೆಡ್ಜೋನ್ ಘೋಷಿಸಿದ್ರು ಜನರು ಡೋಂಟ್ಕೇರ್ ಅಂತಿದ್ದಾರೆ. ಭಾರತದಲ್ಲಿ ಒಂದಲ್ಲ.. ಎರಡಲ್ಲ ಸೋಂಕಿತರ ಸಂಖ್ಯೆ 14 ಸಾವಿರದ ಗಡಿಯತ್ತ ಮುನ್ನುಗ್ತಿದೆ.
ದೇಶದಲ್ಲಿ ಒಟ್ಟು 452 ಮಂದಿ ಕೊರೊನಾಗೆ ಬಲಿ..! ಒಂದು ಎರಡಾಗ್ತಿದೆ.. ಎರಡು ಇಪ್ಪಾತ್ತಾಗಿದೆ.. ಇಪ್ಪತ್ತು ಇನ್ನೂರ ಗಡಿದಾಟಿ ಸಾವಿರ ಸಾವಿರ ಸುಳಿಯಾಗಿ ಎಲ್ಲೆಲ್ಲೂ ಹಬ್ಬಿದೆ. ಕರ್ನಾಟಕದಲ್ಲಿ ಕ್ರೌರ್ಯ ಮೆರೆದು.. ಮಹಾರಾಷ್ಟ್ರಕ್ಕೆ ಮರ್ಮಾಘಾತ ನೀಡಿ.. ಕೇರಳದಲ್ಲಿ ಕಠೋರ ರೂಪ ತೋರಿ.. ರಾಜಸ್ಥಾನದಲ್ಲಿ ರಾಜ್ಯಾಭಾರ ಮಾಡಿ.. ಮಧ್ಯಪ್ರದೇಶದಲ್ಲಿ ಮರಣಮೃದಂಗ ಬಾರಿಸ್ತಾ.. ಆಂಧ್ರದಲ್ಲಿ ಅಟ್ಟಹಾಸ ಮೆರೆಯುತ್ತಾ.. ತೆಲಂಗಾಣದಲ್ಲಿ ಸಾವಿನ ತಂಬೂರಿ ಬಾರಿಸ್ತಿರೊ ಕೊರೊನಾ ಎಲ್ಲೆ ಮೀರಿ ಸಾಗ್ತಿದೆ. ಇದೀಗ ದೇಶಲದಲ್ಲಿ ಒಟ್ಟು 13,835 ಜನರಿಗೆ ಕೊರೊನಾ ದಾಳಿ ಇಟ್ಟಿದೆ. ಅದ್ರಲ್ಲೂ 452 ಮಂದಿ ಕ್ರೂರಿ ವೈರಸ್ ದಾಳಿಗೆ ಪ್ರಾಣ ಕಳೆದ್ಕೊಂಡಿದ್ದಾರೆ. ದೇಶದಲ್ಲಿ 14 ಸಾವಿರದ ಗಡಿಯತ್ತ ಸೋಂಕಿನ ಸುನಾಮಿ ಮುನ್ನುಗ್ತಿದೆ. 500ರ ಗಡಿಯತ್ತ ಸಾವಿನ ಅಟ್ಟಹಾಸ ಮೆರೆಯೋಕೆ ಕೊರೊನಾ ಕಾದು ಕುಳಿತಿದೆ.
ಮಹಾರಾಷ್ಟ್ರದಲ್ಲಿ 3 ಸಾವಿರದ ಗಡಿದಾಟಿದ ವಿಷಜಾಲ..! ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದೆ. ಕ್ರೂರಿ ಕೂಪಕ್ಕೆ ಸಿಲುಕಿರೋ ಶಿವಾಜಿ ನಾಡಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ದಾಳಿ ಇಟ್ಟಿದೆ. ನಿನ್ನೆ ಒಂದೇ ದಿನ 118 ಹೊಸ ಸೋಂಕಿತರು ಹುಟ್ಟಿಕೊಂಡಿರೋದು ಎಲ್ಲರ ನಿದ್ದೆಗೆಡಿಸಿದೆ. ಅದ್ರಲ್ಲೂ ಮುಂಬೈನ ಸ್ಲಂ ಪ್ರದೇಶ ಧಾರಾವಿಯಲ್ಲಿ ಸೋಂಕಿತರ ಸಂಖ್ಯೆ 100ರ ಗಡಿದಾಟಿದ್ರೆ, ಈವರೆಗೆ 10 ಬಲಿ ಬಿದ್ದಿದೆ. 8 ಲಕ್ಷ ಮಂದಿ ತಂಗಿರೋ ಕೊಳಗೇರಿ ಪ್ರದೇಶದಲ್ಲಿ ವೈರಸ್ ಬಾಂಬ್ ಬಿದ್ದಿರೋದು ಎಲ್ರೂ ಅದುರಿ ಹೋಗಿದ್ದಾರೆ.
ಕೊರೊನಾ ವಿಷವ್ಯೂಹ..! ದೆಹಲಿ- 1640 ಮಧ್ಯಪ್ರದೇಶ- 1308 ತಮಿಳುನಾಡು- 1267 ರಾಜಸ್ಥಾನ- 1131 ಗುಜರಾತ್- 1021 ಉತ್ತರಪ್ರದೇಶ- 846 ತೆಲಂಗಾಣ- 743 ಆಂಧ್ರಪ್ರದೇಶ- 572 ಕೇರಳ- 395 ಜಮ್ಮು-ಕಾಶ್ಮೀರ- 314
ಮೇ ತಿಂಗಳಲ್ಲಿ ಗರಿಷ್ಟ ಮಟ್ಟಕ್ಕೆ ತಲುಪಲಿದೆ ಸೋಂಕು..!? ಇನ್ನು ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ರೂ ಒಟ್ಟು 6 ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಇನ್ನೊಂದು ಆತಂಕಕಾರಿ ವಿಷ್ಯ ಅಂದ್ರೆ, ಭಾರತದಲ್ಲಿ ಮೇ ತಿಂಗಳಲ್ಲಿ ಸೋಂಕಿತ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಬೋದು ಅಂತ ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ಹೇಳ್ತಿವೆ. ಅದ್ರಲ್ಲೂ ಒಮ್ಮೆ ಗರಿಷ್ಠ ಮಟ್ಟಕ್ಕೆ ತಲುಪಿದ ಬಳಿಕ ಸೋಂಕಿತರ ಸಂಖ್ಯೆ ಇಳಿಕೆಯಾಗಲಿದೆ ಅಂತ ಕೇಂದ್ರ ಸರ್ಕಾರದ ಕೆಲ ತಜ್ಞರು ಅಂದಾಜಿಸಿದ್ದಾರಂತೆ.
ಕೊರೊನಾ ಪತ್ತೆಗೆ ಕೇರಳದಲ್ಲಿ ಕಡಿಮೆ ವೆಚ್ಚದ ಕಿಟ್ ರೆಡಿ..! ಕೊರೊನಾ ವಿರುದ್ಧ ಸಮರಕ್ಕೆ ಕೇರಳ ಮತ್ತೆ ಸಜ್ಜಾಗಿದೆ. ತಿರುವನಂತಪುರಂನಲ್ಲಿ ಕಡಿಮೆ ವೆಚ್ಚದ ಟೆಸ್ಟಿಂಗ್ ಕಿಟ್ ಅಭಿವೃದ್ಧಿಪಡಿಸಿದೆ. ಕೇವಲ 2 ಗಂಟೆಗಳಲ್ಲಿ ಕೊರೊನಾ ಸೋಂಕನ್ನು ಪತ್ತೆ ಹಚ್ಚಬೋದಾಗಿದೆ. ಒಂದು ಮಷಿನ್ನಲ್ಲಿ ಒಂದೇ ಬ್ಯಾಚ್‌ನಲ್ಲಿ ಒಟ್ಟು 30 ಮಾದರಿ ಪರೀಕ್ಷಿಸೋ ಸೌಲಭ್ಯವಿದೆಯಂತೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದ ಪತಿಗೆ ಮನೆಗಿಲ್ಲ ಪ್ರವೇಶ..! ಇನ್ನು ಆಂಧ್ರಪ್ರದೇಶದಲ್ಲಿ ಕೊರೊನಾ ಭೀತಿ ದಿಗಿಲು ಬಡಿಸಿದೆ. ನೆಲ್ಲೂರಿ ಜಿಲ್ಲೆಯ ವೆಂಕಟಗಿರಿಯಲ್ಲಿ ಕೊರೊನಾ ಪರೀಕ್ಷೆಗೆ ಮಾಡಿಸಿಕೊಳ್ಳದ ಪತಿಗೆ ಮನೆಯೊಳಕ್ಕೆ ಹೆಜ್ಜೆಯೂರಲು ಪತ್ನಿ ನಿರಾಸಿಕರಿಸಿದ ಘಟನೆ ನಡೆದಿದೆ.
ಕೈಗಳಿಲ್ಲದ ಕೋತಿಗೆ ಬಾಳೆಹಣ್ಣು ತಿನ್ನಿಸಿದ ಪೊಲೀಸ್..! ಇನ್ನು, ದೇಶದಲ್ಲಿ ಲಾಕ್ಡೌನ್ ಜಾರಿಯಿಂದಾಗಿ ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಾಣಿಗಳು ಆಹಾರಕ್ಕಾಗಿ ಪಡಿಪಾಠಲು ಅನುಭವಿಸ್ತಿವೆ. ಆದ್ರೆ, ದೆಹಲಿಯಲ್ಲಿ ಪೊಲೀಸ್ ಪೇದೆಯೊಬ್ಬರು ಕೈಗಳಿಲ್ಲದ ಮಂಗಕ್ಕೆ ಬಾಳೆಹಣ್ಣು ತಿನ್ನಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ.
ಒಟ್ನಲ್ಲಿ ಕೊರೊನಾ ಅನ್ನೋ ಕಪಿಮುಷ್ಟಿಗೆ ಸಿಲುಕಿರೋ ಭಾರತ ಪತ್ರುಗುಟ್ಟಿ ಹೋಗಿದೆ. ದಶದಿಕ್ಕುಗಳಲ್ಲೂ ಕೊರೊನಾ ವೈರಸ್ ಅಟ್ಯಾಕ್ ಮಾಡ್ತಿದ್ದು ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದೆ. ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಿದ್ರು ಕೆಲ ರಾಜ್ಯಗಳಲ್ಲಂತೂ ಕೊರೊನಾ ಕಂಟ್ರೋಲ್ಗೆ ಸಿಗ್ತಿಲ್ಲ. ಊರಿಂದ ಊರಿಗೆ ವಿಷವ್ಯೂಹ ಸುತ್ತಿಕೊಳ್ತಿರೋದು ದೇಶಕ್ಕೆ ದೇಶವನ್ನೇ ಕಂಗೆಡಿಸಿದೆ.