ದೆಹಲಿ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ದೇಶದ ಪರಿಸ್ಥಿತಿಯನ್ನು ಆರ್‌ಬಿಐ ಮಾನಿಟರಿಂಗ್ ಮಾಡುತ್ತಿದೆ. RBIನ 150 ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡ್ತಿದ್ದಾರೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1930ರ ನಂತರ ಜಾಗತಿಕ ಆರ್ಥಿಕ ಕುಸಿತ ಆಗಿತ್ತು. ಈಗಲೂ ಅದೇ ರೀತಿ ಆರ್ಥಿಕ ಕುಸಿತದ ಮುನ್ಸೂಚನೆ ಸಿಕ್ಕಿದೆ. ಆದರೆ ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಜಗತ್ತಿನಲ್ಲೇ ಕೆಲವು ವಲಯಗಳಲ್ಲಿ ಉತ್ಪಾದನೆ ಕುಸಿಯುತ್ತಿದೆ. ಈ ಬಾರಿ ಮುಂಗಾರು ಮಳೆ ಸಾಮಾನ್ಯವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರ್ನಷ್ಟು ಕುಸಿತ: ಭಾರತದ ಆರ್ಥಿಕ ಪ್ರಗತಿ ಸದ್ಯ ಶೇಕಡಾ 1.9ರಷ್ಟಿದೆ. ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರ್ನಷ್ಟು ಕುಸಿದಿದೆ. 2021-2022ರಲ್ಲಿ ಶೇ.7.4ರಷ್ಟು ಜಿಡಿಪಿ ವೃದ್ಧಿಯಾಗುವ ನಿರೀಕ್ಷೆ ಇದೆ. ಶೇಕಡಾ 21.3ರಷ್ಟು ಟ್ರ್ಯಾಕ್ಟರ್ ಮಾರಾಟ ಹೆಚ್ಚಳ. ಜಿ20 ರಾಷ್ಟ್ರಗಳಲ್ಲಿ 1.9ರಷ್ಟು ಜಿಡಿಪಿ ಬೆಳವಣಿಗೆಯಾಗಿದೆ. ಇಷ್ಟೊಂದು ಬೆಳವಣಿಗೆ ಭಾರತದ್ದು ಅತಿ ಹೆಚ್ಚು ಬೆಳವಣಿಗೆ. ಈ ಬಗ್ಗೆ ಐಎಂಎಫ್ ತಿಳಿಸಿದೆ.
ದೇಶದಲ್ಲಿ ಎಟಿಎಂಗಳನ್ನ ಶೇಕಡಾ 91ರಷ್ಟು ಬಳಕೆ ಮಾಡುತ್ತಿದ್ದಾರೆ. ಬ್ಯಾಂಕ್‌ಗಳಿಗೆ ಹೊಸದಾಗಿ ಕರೆನ್ಸಿ ಸಹ ಬಿಡುಗಡೆ ಮಾಡಲಾಗಿದೆ. ಉತ್ಪಾದನಾ ವಲಯದಲ್ಲಿ ಕಳೆದ 4 ತಿಂಗಳಿಂದ ಉತ್ಪಾದನೆ ತೀರಾ ಕಡಿಮೆಯಾಗಿದೆ. ಬೇಡಿಕೆ ಸಹ ಶೇಕಡಾ 25ರಿಂದ 30ರಷ್ಟು ಕುಸಿದಿದೆ. ಭಾರತದಲ್ಲಿ ಅಗತ್ಯ ಪ್ರಮಾಣದ ದಿನಸಿ ದಾಸ್ತಾನಿದೆ. ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಳ್ಳುತ್ತೇವೆ ಎಂದರು.