ದೇಶದ್ರೋಹ ಪ್ರಕರಣ: ಶಾರ್ಜೀಲ್ ಇಮಾಮ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ದೇಶದ್ರೋಹ ಪ್ರಕರಣ: ಶಾರ್ಜೀಲ್ ಇಮಾಮ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ದೆಹಲಿ: ದೇಶದ್ರೋಹ ಪ್ರಕರಣವನ್ನು ಎದುರಿಸುತ್ತಿರುವ ಜೆಎನ್​ಯು ಹಳೆಯ ವಿದ್ಯಾರ್ಥಿ ಶಾರ್ಜೀಲ್ ಇಮಾಮ್​ ವಿರುದ್ಧ ದೆಹಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. 2019ರ ಡಿಸೆಂಬರ್ 15ರಂದು ಜಾಮಿಯಾದಲ್ಲಿ ದೇಶದ್ರೋಹಿ ಭಾಷಣ ಹಾಗೂ ಗಲಭೆಗಳನ್ನ ಪ್ರಚೋಧಿಸಿದ್ದಕ್ಕಾಗಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಶಾರ್ಜೀಲ್ ಇಮಾಮ್ ವಿರುದ್ಧ ಇಂದು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. 2019ರ ಡಿಸೆಂಬರ್ 13ರಂದು ದೇಶದ್ರೋಹಿ ಹೇಳಿಕೆ ಹಾಗೂ ಜಾಮಿಯಾ ಗಲಭೆಗೆ ಉತ್ತೇಜಿಸಿದ್ದಕ್ಕಾಗಿ ಶಾರ್ಜೀಲ್ ಇಮಾಮ್​ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ದೇಶದ್ರೋಹಿ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಚಾರ್ಜ್​ಶೀಟ್ ಸಲ್ಲಿಸಲಾಗಿದೆ […]

sadhu srinath

|

Apr 18, 2020 | 12:02 PM

ದೆಹಲಿ: ದೇಶದ್ರೋಹ ಪ್ರಕರಣವನ್ನು ಎದುರಿಸುತ್ತಿರುವ ಜೆಎನ್​ಯು ಹಳೆಯ ವಿದ್ಯಾರ್ಥಿ ಶಾರ್ಜೀಲ್ ಇಮಾಮ್​ ವಿರುದ್ಧ ದೆಹಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. 2019ರ ಡಿಸೆಂಬರ್ 15ರಂದು ಜಾಮಿಯಾದಲ್ಲಿ ದೇಶದ್ರೋಹಿ ಭಾಷಣ ಹಾಗೂ ಗಲಭೆಗಳನ್ನ ಪ್ರಚೋಧಿಸಿದ್ದಕ್ಕಾಗಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಶಾರ್ಜೀಲ್ ಇಮಾಮ್ ವಿರುದ್ಧ ಇಂದು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

2019ರ ಡಿಸೆಂಬರ್ 13ರಂದು ದೇಶದ್ರೋಹಿ ಹೇಳಿಕೆ ಹಾಗೂ ಜಾಮಿಯಾ ಗಲಭೆಗೆ ಉತ್ತೇಜಿಸಿದ್ದಕ್ಕಾಗಿ ಶಾರ್ಜೀಲ್ ಇಮಾಮ್​ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ದೇಶದ್ರೋಹಿ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಚಾರ್ಜ್​ಶೀಟ್ ಸಲ್ಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada