ಸಾಂಕ್ರಾಮಿಕ ರೋಗ ಮುಗಿದಿಲ್ಲ, ಅಗತ್ಯ ಬೆಂಬಲ ಒದಗಿಸಲು ಸರ್ಕಾರದ ಪ್ರಯತ್ನಗಳಲ್ಲಿ ಸೇನಾಪಡೆ ಜತೆಗಿದೆ: ಸೇನಾ ಮುಖ್ಯಸ್ಥ ನರವಾಣೆ

PANEX-21 ಹವಾಮಾನ ಬದಲಾವಣೆ, ಯೋಜಿತವಲ್ಲದ ನಗರೀಕರಣ, ಅಭಿವೃದ್ಧಿಯಾಗದಿರುವಿಕೆ, ಬಡತನ ಮತ್ತು ಸಾಂಕ್ರಾಮಿಕ ರೋಗಗಳ ಬೆದರಿಕೆಯಂತಹ ಅಂಶಗಳ ಶ್ರೇಣಿಯು ಭವಿಷ್ಯದಲ್ಲಿ ವಿಪತ್ತುಗಳ ಆವರ್ತನ, ಸಂಕೀರ್ಣತೆ ಮತ್ತು ತೀವ್ರತೆಗೆ ಕಾರಣವಾಗುತ್ತದೆ" ಎಂದು ಜನರಲ್ ನರವಾಣೆ ಹೇಳಿದರು.

ಸಾಂಕ್ರಾಮಿಕ ರೋಗ ಮುಗಿದಿಲ್ಲ, ಅಗತ್ಯ ಬೆಂಬಲ ಒದಗಿಸಲು ಸರ್ಕಾರದ ಪ್ರಯತ್ನಗಳಲ್ಲಿ ಸೇನಾಪಡೆ ಜತೆಗಿದೆ: ಸೇನಾ ಮುಖ್ಯಸ್ಥ ನರವಾಣೆ
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ
Edited By:

Updated on: Dec 07, 2021 | 2:15 PM

ದೆಹಲಿ: ಸಾಂಕ್ರಾಮಿಕ ರೋಗದ (coronavirus pandemic) ಸಮಯದಲ್ಲಿ ಭಾರತೀಯ ಪಡೆಗಳು ಎಲ್ಲಾ ಅಗತ್ಯ ಬೆಂಬಲವನ್ನು ಒದಗಿಸಲು ಸರ್ಕಾರದ ಪ್ರಯತ್ನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ನಾವು ನಮ್ಮ ದೇಶದ ದೂರದ ಭಾಗಗಳನ್ನು ತಲುಪಿದ್ದೇವೆ ಮತ್ತು ಸಾಂಕ್ರಾಮಿಕ ರೋಗದ ಪರಿಣಾಮವನ್ನು ಕಡಿಮೆ ಮಾಡಲು ಅವರಿಗೆ ಸಹಾಯವನ್ನು ಒದಗಿಸಿದ್ದೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ (Manoj Mukund Naravane)ಅವರು ಮಂಗಳವಾರ ಹೇಳಿದ್ದಾರೆ. ವಿಪತ್ತು ನಿರ್ವಹಣಾ ಕಸರತ್ತು PANEX-21 ಉದ್ದೇಶಿಸಿ ಮಾತನಾಡುತ್ತಿದ್ದರವರು.  “ಹವಾಮಾನ ಬದಲಾವಣೆ, ಯೋಜಿತವಲ್ಲದ ನಗರೀಕರಣ, ಅಭಿವೃದ್ಧಿಯಾಗದಿರುವಿಕೆ, ಬಡತನ ಮತ್ತು ಸಾಂಕ್ರಾಮಿಕ ರೋಗಗಳ ಬೆದರಿಕೆಯಂತಹ ಅಂಶಗಳ ಶ್ರೇಣಿಯು ಭವಿಷ್ಯದಲ್ಲಿ ವಿಪತ್ತುಗಳ ಆವರ್ತನ, ಸಂಕೀರ್ಣತೆ ಮತ್ತು ತೀವ್ರತೆಗೆ ಕಾರಣವಾಗುತ್ತದೆ” ಎಂದು ಜನರಲ್ ನರವಾಣೆ ಹೇಳಿದರು. ಬಿಮ್‌ಸ್ಟೆಕ್ ದೇಶಗಳಾದ ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ಭಾರತ ಈ ಅಭ್ಯಾಸದಲ್ಲಿ ತೊಡಗಿದ್ದು ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಪರಿಹಾರವನ್ನು ಒದಗಿಸುವುದು ಮತ್ತು ಜಂಟಿ ಯೋಜನೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ನಾನು ಹೈಲೈಟ್ ಮಾಡಲು ಬಯಸುವ ಇನ್ನೊಂದು ಸಮಸ್ಯೆಯ ಎಂದರೆ ಹೊಸ ರೀತಿಯ ಯುದ್ಧ. ಜೈವಿಕ ಯುದ್ಧವು ರೂಪುಗೊಂಡರೆ, ನಮ್ಮ ರಾಷ್ಟ್ರಗಳು ಈ ವೈರಸ್‌ಗಳು ಮತ್ತು ರೋಗಗಳಿಂದ ಪ್ರಭಾವಿತವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯವನ್ನು ಒಟ್ಟಿಗೆ ಸೇರಿಸಿಕೊಳ್ಳಬೇಕು ಮತ್ತು ನಮ್ಮನ್ನು ಬಲಪಡಿಸಿಕೊಳ್ಳಬೇಕು ಎಂದು ನರವಾಣೆ ಹೇಳಿದ್ದಾರೆ.


ಜನರಲ್ ನರವಾಣೆ ಜತೆ ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಬಿಮ್‌ಸ್ಟೆಕ್ ಪ್ರತಿನಿಧಿಗಳು ಡಿಸೆಂಬರ್ 20 -22ರವರೆಗೆ ಪುಣೆಯಲ್ಲಿ ನಡೆಯಲಿರುವ ವಿಪತ್ತು ನಿರ್ವಹಣೆ ಕುರಿತು PANEX-21 ಕಸರತ್ತುನಲ್ಲಿ ಭಾಗವಹಿಸಲಿದ್ದಾರೆ.

ಜನರಲ್ ರಾವತ್ ಅವರು ಯಾವುದೇ ರಾಷ್ಟ್ರಗಳಲ್ಲಿ ವಿಪತ್ತು ಸಂಭವಿಸಿದಲ್ಲಿ ಎಲ್ಲಾ ರಾಷ್ಟ್ರಗಳು ಪರಸ್ಪರ ಬೆಂಬಲಿಸುವುದು ನಿರ್ಣಾಯಕ ಎಂದು ಒತ್ತಿ ಹೇಳಿದರು.

“ಜೈವಿಕ ಯುದ್ಧವು ರೂಪುಗೊಳ್ಳಲು ಪ್ರಾರಂಭಿಸಿದರೆ  ನಮ್ಮ ರಾಷ್ಟ್ರಗಳು ಈ ವೈರಸ್‌ಗಳು ಮತ್ತು ರೋಗಗಳಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳಲು ನಾವು ನಮ್ಮ ಕಾರ್ಯವನ್ನು ಜತೆಯಾಗಿ ಮಾಡಿಕೊಳ್ಳಬೇಕು ಮತ್ತು ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕು” ಎಂದು ರಾವತ್ ಹೇಳಿದ್ದಾರೆ.

ಕೊರೊನಾವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ಹೊರಹೊಮ್ಮುವಿಕೆಯ ಮಧ್ಯೆ ಎಲ್ಲಾ ರಾಷ್ಟ್ರಗಳು ಸಿದ್ಧವಾಗಬೇಕಿದೆ ಎಂದು ಜನರಲ್ ರಾವತ್ ಹೇಳಿದ್ದಾರೆ. “ಈಗ ಒಮಿಕ್ರಾನ್ ಇದೆ ಎಂದು ನಾವು ನೋಡುತ್ತೇವೆ, ಅದು ಇತರ ರೂಪಗಳಲ್ಲಿ ರೂಪಾಂತರಗೊಳ್ಳಲಿ, ನಾವು ಅದಕ್ಕೆ ಸಿದ್ಧರಾಗಿರಬೇಕು” ಎಂದು ರಾವತ್ ಹೇಳಿದರು. PANEX-21 ಅನ್ನು ಒಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯ ಹಿನ್ನೆಲೆಯಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ: ರೈತರಿಗೆ ಪರಿಹಾರ, ಉದ್ಯೋಗ ಸಿಗಬೇಕು: ಲೋಕಸಭೆಯಲ್ಲಿ ಮೃತ ರೈತರ ಪಟ್ಟಿ ತೋರಿಸಿ ಕೇಂದ್ರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ