Narendra Modi in Gorakhpur ಗೋರಖ್​​ಪುರದಲ್ಲಿ 3 ಮೆಗಾ ಪ್ರಾಜೆಕ್ಟ್‌ ಉದ್ಘಾಟಿಸಿದ ಮೋದಿ, ಯೋಗಿ ಸರ್ಕಾರದ ಸಾಧನೆಗೆ ಶ್ಲಾಘನೆ

ಸಮಾಜವಾದಿ ಪಕ್ಷವನ್ನು ಟೀಕಿಸಿದ ಮೋದಿ 'ಕೆಂಪು ಕ್ಯಾಪ್ಸ್' (ಸಮಾಜವಾದಿ ಪಕ್ಷ) ಕೇವಲ 'ಕೆಂಪು ದೀಪಗಳ' ಬಗ್ಗೆ ಕಾಳಜಿ ವಹಿಸುತ್ತದೆ ಎಂಬುದು ಇಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ‘ರೆಡ್ ಕ್ಯಾಪ್ಸ್’ ಯುಪಿಗೆ ರೆಡ್ ಅಲರ್ಟ್ ಎಂಬುದನ್ನು ಯಾವಾಗಲೂ ನೆನಪಿಡಿ ಎಂದಿದ್ದಾರೆ.

Narendra Modi in Gorakhpur ಗೋರಖ್​​ಪುರದಲ್ಲಿ 3 ಮೆಗಾ ಪ್ರಾಜೆಕ್ಟ್‌ ಉದ್ಘಾಟಿಸಿದ ಮೋದಿ, ಯೋಗಿ ಸರ್ಕಾರದ ಸಾಧನೆಗೆ ಶ್ಲಾಘನೆ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 07, 2021 | 3:52 PM

ಗೋರಖ್​​ಪುರ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರ ತವರು ಕ್ಷೇತ್ರವಾಗಿರುವ ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ(Gorakhpur) 10,000 ಕೋಟಿ ರೂಪಾಯಿ ಮೌಲ್ಯದ ಮೂರು ಬೃಹತ್ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಉದ್ಘಾಟಿಸಿದರು. 8,603 ಕೋಟಿ ಮೌಲ್ಯದ ರಸಗೊಬ್ಬರ ಕಾರ್ಖಾನೆ (fertiliser factory), ರೂ 1,011 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ರೀಜನಲ್ ಮೆಡಿಕಲ್ ರಿಸರ್ಚ್ ಸೆಂಟರ್ (ICMR-RMRC) ನ ಹೈಟೆಕ್ ಲ್ಯಾಬ್ ಈ ಯೋಜನೆಗಳಲ್ಲಿ ಸೇರಿವೆ.  ಹೊಸ ಭಾರತ ನಿರ್ಧರಿಸಿದಾಗ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದು ಗೋರಖ್‌ಪುರದ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರತಿಪಕ್ಷಗಳು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿವೆ ಎಂದು ಅವರು ಆರೋಪಿಸಿದರು. ಸಮಾಜವಾದಿ ಪಕ್ಷವನ್ನು ಟೀಕಿಸಿದ ಮೋದಿ ‘ಕೆಂಪು ಕ್ಯಾಪ್ಸ್’ (ಸಮಾಜವಾದಿ ಪಕ್ಷ) ಕೇವಲ ‘ಕೆಂಪು ದೀಪಗಳ’ ಬಗ್ಗೆ ಕಾಳಜಿ ವಹಿಸುತ್ತದೆ ಎಂಬುದು ಇಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ‘ರೆಡ್ ಕ್ಯಾಪ್ಸ್’ ಯುಪಿಗೆ ರೆಡ್ ಅಲರ್ಟ್ ಎಂಬುದನ್ನು ಯಾವಾಗಲೂ ನೆನಪಿಡಿ  ಅವು ಅಪಾಯದ ಗಂಟೆಗಳು ಎಂದು ಮೋದಿ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಗೋರಖ್‌ಪುರದಲ್ಲಿ ನಡೆದ ಅಭಿವೃದ್ಧಿ ಯೋಜನೆಗಳ ಪ್ರದರ್ಶನಕ್ಕೆ ಭೇಟಿ ನೀಡಿದರು.

ಕಾರ್ಖಾನೆ ಆರಂಭಿಸುವ ಧೈರ್ಯ ಬಿಜೆಪಿ ಸರ್ಕಾರಕ್ಕೆ ಮಾತ್ರ ಇದೆ ಎಂದು ಹೇಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು “ಇಂದಿನ ಉದ್ಘಾಟನಾ ಕಾರ್ಯಕ್ರಮದಿಂದ ಪೂರ್ವ ಉತ್ತರ ಪ್ರದೇಶದ ಜನರ ಕನಸು ನನಸಾಗಿದೆ. ರಸಗೊಬ್ಬರ ಕಾರ್ಖಾನೆಯನ್ನು 1990 ರಲ್ಲಿ ಮುಚ್ಚಲಾಯಿತು. 2014 ರವರೆಗೂ ಅದನ್ನು ಪುನರಾರಂಭಿಸಲು ಯಾರೂ ಮುಂದಾಗಲಿಲ್ಲ. ಅದನ್ನು ಆರಂಭಿಸುವ ಧೈರ್ಯ ಬಿಜೆಪಿ ಸರ್ಕಾರಕ್ಕೆ ಮಾತ್ರ ಇತ್ತು ಎಂದಿದ್ದಾರೆ.’

ಸಮಾಜವಾದಿ ಪಕ್ಷವನ್ನು ಟೀಕಿಸಿದ ಮೋದಿ ‘ರೆಡ್ ಕ್ಯಾಪ್ಸ್’ ಕೇವಲ ‘ಕೆಂಪು ದೀಪಗಳ’ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ಅವರಿಗೆ ನಿಮ್ಮ ನೋವು ಮತ್ತು ಸಮಸ್ಯೆಗಳ ಜತೆ ಯಾವುದೇ ಸಂಬಂಧವಿಲ್ಲ. ಹಗರಣಗಳಿಗೆ ಮತ್ತು ತಮ್ಮ ಬೊಕ್ಕಸವನ್ನು ತುಂಬಲು, ಅಕ್ರಮ ಅತಿಕ್ರಮಣಗಳಿಗೆ, ಮಾಫಿಯಾಗಳಿಗೆ ಸ್ವಾತಂತ್ರ್ಯವನ್ನು ಒದಗಿಸಲು ‘ಕೆಂಪು ಟೋಪಿಗಳು’ ಅಧಿಕಾರವನ್ನು ಬಯಸುತ್ತವೆ. ‘ಕೆಂಪು ಟೋಪಿಗಳು’ ಭಯೋತ್ಪಾದಕರ ಬಗ್ಗೆ ಮೃದುತ್ವವನ್ನು ತೋರಿಸಲು, ಅವರನ್ನು ಜೈಲಿನಿಂದ ಹೊರಗೆ ತರಲು ಸರ್ಕಾರವನ್ನು ರಚಿಸಲು ಬಯಸುತ್ತವೆ. ಹಾಗಾಗಿ ‘ಕೆಂಪು ಕ್ಯಾಪ್’ಗಳು ಯುಪಿಗೆ ರೆಡ್ ಅಲರ್ಟ್ ಎಂದು ಯಾವಾಗಲೂ ನೆನಪಿಡಿ ಅವು ಅಪಾಯದ ಗಂಟೆಗಳು, ” ಎಂದು ಪ್ರಧಾನಿ ಮೋದಿ ಹೇಳಿದರು.

ಯೋಜನೆಗಳ ಉದ್ಘಾಟನೆಯ ಸಮಯವನ್ನು ಪ್ರಶ್ನಿಸುವವರಿಗೆ ಯೋಜನೆಗಳನ್ನು ಸ್ಥಾಪಿಸಲು ಪಡುವ ಶ್ರಮ ಮತ್ತು ಸಮಯ ಅರ್ಥವಾಗುವುದಿಲ್ಲ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿಯನ್ನು ಮುಂದುವರೆಸಿದೆ, ಅದು ಕೆಲಸವನ್ನು ನಿಲ್ಲಿಸಲು ಬಿಡಲಿಲ್ಲ ಎಂದು ಈ ಜನರಿಗೆ ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

2014 ರ ಮೊದಲು, ಯೂರಿಯಾದ ಕೊರತೆ ಸುದ್ದಿಯ ಶೀರ್ಷಿಕೆ ಆಗುತ್ತಿತ್ತು. ಪರಿಸ್ಥಿತಿ ಈಗ ಸುಧಾರಿಸಿದೆ. ಶೇ.100ರಷ್ಟು ಬೇವಿನ ಲೇಪನವನ್ನು ಖಾತ್ರಿಪಡಿಸಿಕೊಂಡು ಯೂರಿಯಾ ದುರ್ಬಳಕೆಯನ್ನು ನಿಲ್ಲಿಸಿದ್ದೇವೆ. ನಾವು ಕೋಟಿಗಟ್ಟಲೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಿದ್ದೇವೆ ಇದರಿಂದ ರೈತರಿಗೆ ಯಾವ ರೀತಿಯ ಗೊಬ್ಬರ ಬೇಕು ಎಂದು ತಿಳಿಯುತ್ತದೆ. ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸಲು ನಾವು ಒತ್ತು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

 ಅಭಿವೃದ್ಧಿಗಾಗಿ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಮೋದಿ ಶ್ಲಾಘನೆ ಆರೋಗ್ಯ ಸೇವೆಗಳು ರಾಜ್ಯದ ಎಲ್ಲಾ ನಾಗರಿಕರನ್ನು ತಲುಪಬೇಕು ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಯೋಗಿ ಸರ್ಕಾರವು ರಾಜ್ಯದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಿದೆ . “ಮೊದಲು ಗೋರಖ್‌ಪುರದಲ್ಲಿ ಎನ್ಸೆಫಾಲಿಟಿಸ್ ರೋಗಿಗಳ ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಅದು ದೃಢಪಡಿಸುವ ಹೊತ್ತಿಗೆ ರೋಗಿಗಳು ಸಾಯುತ್ತಿದರು ಅಥವಾ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಇಂದು, ನಾವು ಕೊರೊನಾವೈರಸ್, ಎನ್ಸೆಫಾಲಿಟಿಸ್ ಮತ್ತು ಇತರ ಕಾಯಿಲೆಗಳನ್ನು ಪರೀಕ್ಷಿಸಲು ಗೋರಖ್‌ಪುರದಲ್ಲಿ ಪ್ರಾದೇಶಿಕ ವೈರಲ್ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ್ದೇವೆ ಎಂದಿದ್ದಾರೆ. ‘ಗೋರಖ್‌ಪುರದಲ್ಲಿ ರಸಗೊಬ್ಬರ ಸ್ಥಾವರ ಮತ್ತು ಎಐಐಎಂಎಸ್‌ನ ಆರಂಭವು ಹಲವಾರು ಸಂದೇಶಗಳನ್ನು ಕಳುಹಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇದ್ದಾಗ, ಕೆಲಸವು ಡಬಲ್ ವೇಗದಲ್ಲಿ ನಡೆಯುತ್ತದೆ. ಪ್ರಾಮಾಣಿಕ ಉದ್ದೇಶದಿಂದ ಕೆಲಸ ಮಾಡಿದಾಗ ವಿಪತ್ತುಗಳು ಸಹ ಅಡೆತಡೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಗೋರಖ್‌ಪುರ ಗೊಬ್ಬರ ಘಟಕ ಆರಂಭಿಸಲು ಬಿಜೆಪಿ ಸರ್ಕಾರಕ್ಕೆ ಮಾತ್ರ ಧೈರ್ಯ: ಯೋಗಿ ಆದಿತ್ಯನಾಥ “ಇಂದಿನ ಉದ್ಘಾಟನಾ ಕಾರ್ಯಕ್ರಮವು ಪೂರ್ವ ಯುಪಿಯಲ್ಲಿ ಪ್ರತಿಪಕ್ಷಗಳಿಗೆ ಅಸಾಧ್ಯವಾದ ಕನಸೊಂದು ನನಸಾಗಿದೆ. ಕಳೆದ 30 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 5 ಸರ್ಕಾರಗಳು ಬಂದು ಹೋದವು. ಬಿಜೆಪಿ ಸರ್ಕಾರ ಮಾತ್ರ ಗೋರಖ್‌ಪುರದಲ್ಲಿ ಈ ರಸಗೊಬ್ಬರ ಕಾರ್ಖಾನೆಯನ್ನು ಪ್ರಾರಂಭಿಸುವ ಧೈರ್ಯವನ್ನು ಹೊಂದಿತ್ತು ಎಂದಿದ್ದಾರೆ ಯೋಗಿ ಆದಿತ್ಯನಾಥ.

ಮೋದಿ ಹೈ ತೋ ಮುಮ್ಕಿನ್ ಹೈ ಗೋರಖ್‌ಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಭಿವೃದ್ಧಿ ಯೋಜನೆಗಳಿಗೆ  ಚಾಲನೆ ನೀಡಿದ್ದಕ್ಕಾಗಿ  ಮೋದಿಗೆ ಗೆ ಧನ್ಯವಾದ ಅರ್ಪಿಸಿದ್ದು  ‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂದು ಹೇಳಿದರು.

ಇದನ್ನೂ ಓದಿ: ಇಂದು ಗೋರಖ್​ಪುರಕ್ಕೆ ಪ್ರಧಾನಿ ಮೋದಿ ಭೇಟಿ; ಯೋಗಿ ಕನಸಿನ ರಸಗೊಬ್ಬರ ಘಟಕ ಸೇರಿ 3 ಬೃಹತ್​​ ಯೋಜನೆಗಳ ಲೋಕಾರ್ಪಣೆ

Published On - 3:43 pm, Tue, 7 December 21

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು