Covid19: ಕೇರಳದಲ್ಲಿ ಒಂದೇ ದಿನ 35,013 ಕೊವಿಡ್ ಪ್ರಕರಣ ಪತ್ತೆ, 41 ಮಂದಿ ಸಾವು

|

Updated on: Apr 28, 2021 | 8:21 PM

Coronavirus in Kerala: ಇಂದು ರೋಗ ದೃಢಪಟ್ಟವರಲ್ಲಿ 275 ಮಂದಿ ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ. 32,474 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.  2167 ಮಂದಿಗೆ ಸೋಂಕು ತಗುಲಿರುವ ಮೂಲ ಪತ್ತೆಯಾಗಿಲ್ಲ. 93 ಆರೋಗ್ಯ ಕಾರ್ಯಕರ್ತರಿಗೆ ರೋಗ ದೃಢಪಟ್ಟಿದೆ.

Covid19: ಕೇರಳದಲ್ಲಿ ಒಂದೇ ದಿನ 35,013 ಕೊವಿಡ್ ಪ್ರಕರಣ ಪತ್ತೆ, 41 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ತಿರುವನಂತಪುರಂ: ಕೇರಳದಲ್ಲಿ ಬುಧವಾರ 35,013 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದು ಒಂದು ದಿನದಲ್ಲಿ ವರದಿಯಾದ ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ಜಿಲ್ಲೆ ಎರ್ನಾಕುಳಂ ಆಗಿದ್ದು ಇಲ್ಲಿ 5287 ಮಂದಿಗೆ ರೋಗ ದೃಢಪಟ್ಟಿದೆ. ಕೋಯಿಕ್ಕೋಡ್ ಮತ್ತು ತ್ರಿಶ್ಶೂರ್ ಜಿಲ್ಲೆಯಲ್ಲಿ 4 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿ ಆಗಿ ದೆ. ಕಳೆದ 24 ಗಂಟೆಗಳಲ್ಲಿ 1,38,190 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇಲ್ಲಿ ಪಾಸಿಟಿವಿಟಿ ದರ 25.34 ಆಗಿದೆ. 41 ಮಂದಿ ಕೊವಿಡ್ ನಿಂದ ಮೃತಪಟ್ಟಿದ್ದು ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 5211ಕ್ಕೇರಿದೆ.

 14 ಜಿಲ್ಲೆಗಳಲ್ಲಿರುವ ಕೊವಿಡ್ ರೋಗಿಗಳ ಸಂಖ್ಯೆ
ಎರ್ನಾಕುಳಂ 5287
ಕೋಯಿಕ್ಕೋಡ್ -4317
ತ್ರಿಶ್ಶೂರ್ – 4107
ಮಲಪ್ಪುರಂ 3684
ತಿರುವನಂತಪುರಂ -3210
ಕೋಟ್ಟಯಂ- 2917
ಆಲಪ್ಪುಳಂ -2235
ಪಾಲಕ್ಕಾಡ್- 1920
ಕಣ್ಣೂರ್- 1857
ಕೊಲ್ಲಂ -1422
ಇಡುಕ್ಕಿ- 1251
ಪತ್ತನಂತಿಟ್ಟ- 1202
ಕಾಸರಗೋಡು- 872
ವಯನಾಡು- 723


ಇಂದು ರೋಗ ದೃಢಪಟ್ಟವರಲ್ಲಿ 275 ಮಂದಿ ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ. 32,474 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.  2167 ಮಂದಿಗೆ ಸೋಂಕು ತಗುಲಿರುವ ಮೂಲ ಪತ್ತೆಯಾಗಿಲ್ಲ. 93 ಆರೋಗ್ಯ ಕಾರ್ಯಕರ್ತರಿಗೆ ರೋಗ ದೃಢಪಟ್ಟಿದೆ.ಕಣ್ಣೂರಿನಲ್ಲಿ 29, ತ್ರಿಶ್ಶೂರಿನಲ್ಲಿ 15, ಪಾಲಕ್ಕಾಡ್ ಮತ್ತು ಕಾಸರಗೋಡಿನಲ್ಲಿ ತಲಾ 11,ಕೊಲ್ಲಂ-9, ವಯನಾಡ್- 7,ಪತ್ತನಂತಿಟ್ಟ -5, ಕೋಟ್ಟಯಂ- 3, ತಿರುವನಂತಪುರಂ ,ಎರ್ನಾಕುಳಂ, ಮಲಪ್ಪುರಂನಲ್ಲಿ ಇಬ್ಬರು, ಇಡುಕ್ಕಿಯಲ್ಲಿ ಓರ್ವ ಆರೋಗ್ಯ ಕಾರ್ಯಕರ್ತನಿಗೆ ಸೋಂಕು ತಗುಲಿದೆ.

ರೋಗ ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ 15,505 ಮಂದಿ ಚೇತರಿಸಿದ್ದಾರೆ. 2,66 ,646 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 12,23,185 ಮಂದಿ ಕೊವಿಡ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ  ವಿಜಯನ್ ಹೇಳಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,51,133 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 5,28,407 ಮಂದಿ ಮನೆ,ಸಾಂಸ್ಥಿಕ ಕ್ವಾರಂಟೈನ್ , 22,726 ಮಂದಿ ಆಸ್ಪತ್ರೆಯಲ್ಲಿಯೂ ಇದ್ದಾರೆ. 4436 ಮಂದಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ 11 ಹೊಸ ಕೊವಿಡ್ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. 2 ಪ್ರದೇಶಗಳನ್ನು ಹಾಟ್ ಸ್ಪಾಟ್ ಪಟ್ಟಿಯಿಂದ ತೆರವು ಗೊಳಿಸಲಾಗಿದೆ. ಪ್ರಸ್ತುತ ಕೇರಳದಲ್ಲಿ 597 ಹಾಟ್ ಸ್ಪಾಟ್ ಗಳಿವೆ.

ದೆಹಲಿ ಸೇರಿದಂತೆ 6 ರಾಜ್ಯಗಳಲ್ಲಿ ಏಪ್ರಿಲ್30ರ ಹೊತ್ತಿಗೆ ಆಕ್ಸಿಜನ್ ಬೇಡಿಕೆ ಹೆಚ್ಚಲಿದೆ.
ಏಪ್ರಿಲ್ 30ರ ಹೊತ್ತಿಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು, ಗುಜರಾತ್,ದೆಹಲಿ ಮತ್ತು ಛತ್ತೀಸಗಡದಲ್ಲಿ ಆಕ್ಸಿಜನ್ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಹೇಳಿದೆ. ಕೇಂದ್ರ ಸರ್ಕಾರದ ಪ್ರಕಾರ ಮಹಾರಾಷ್ಟ್ರಕ್ಕೆ 2,000 ಟನ್ (ಏಪ್ರಿಲ್ 20ಕ್ಕೆ 1,500 ಅಗತ್ಯ ಬಿದ್ದಿತ್ತು) ಅಗತ್ಯವಿದೆ.ಅದೇ ರೀತಿ ಗುಜರಾತ್ 1,200 MT (1,000 MT), ಉತ್ತರಪ್ರದೇಶ 800 MT (400 MT), ಮಧ್ಯ ಪ್ರದೇಶ 700 MT (445 MT), ದೆಹಲಿ445 MT (300 MT), ಛತ್ತೀಸಗಡ 382 MT (215 MT) ಮತ್ತು ತಮಿಳುನಾಡು 465 MT (200 MT) ಆಕ್ಸಿಜನ್ ಅಗತ್ಯವಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 39,047 ಜನರಿಗೆ ಕೊರೊನಾ ಸೋಂಕು, 137 ಸಾವು

ಕೆಲವು ನೋವು ನಿವಾರಕ ಔಷಧಿಗಳು ಕೊವಿಡ್ ರೋಗ ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತವೆ, ಎನ್‌ಎಸ್‌ಎಐಡಿ ಬಳಸಬೇಡಿ: ಐಸಿಎಂಆರ್ ಸಲಹೆ

(Coronavirus Kerala logged highest single day surge of over 35000 Covid cases 41 deaths)

 

Published On - 8:19 pm, Wed, 28 April 21