ಅಂತ್ಯವಾಗುತ್ತದಾ ಲಾಕ್​ಡೌನ್? ನಿಯಮ ಸಡಿಲಿಕೆ ಮುನ್ಸೂಚನೆ ಏನು ?

ಬೆಂಗಳೂರು: ದೇಶದಲ್ಲಿ ಕೊರೊನಾ ರಣಕೇಕೆ ಜೋರಾಗಿದ್ರೆ, ಲಾಕ್​​ಡೌನ್​ ನಿಯಮ ಒಂದೊಂದಾಗೇ ಸಡಿಲಿಕೆಯಾಗ್ತಿದೆ. ಏಪ್ರಿಲ್ 27ರಂದು ರಾಜ್ಯದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ. ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ಗೆ ಇನ್ನು 2 ದಿನ ಬಾಕಿ ಇರುವಂತೆಯೇ ಕೇಂದ್ರ ಸರ್ಕಾರ ಲಾಕ್​​​​ಡೌನ್​ ರೂಲ್ಸ್ ಸಡಿಲಿಸ್ತಿರೋದು ಅಚ್ಚರಿ ಮೂಡಿಸಿದೆ. ಮೇ 3ಕ್ಕೆ ಲಾಕ್​ಡೌನ್​ ಮುಂದುವರಿಯುತ್ತಾ? ಹಲವು ಕಟ್ಟುನಿಟ್ಟಿನ ನಿಯಮ ಜಾರಿ ಇರುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ. ಒಟ್ನಲ್ಲಿ ಇಲ್ಲಿ ಒಂದು ವಿಚಾರವನ್ನ ರಾಜ್ಯದ […]

ಅಂತ್ಯವಾಗುತ್ತದಾ  ಲಾಕ್​ಡೌನ್? ನಿಯಮ ಸಡಿಲಿಕೆ ಮುನ್ಸೂಚನೆ ಏನು ?
ಸಾಧು ಶ್ರೀನಾಥ್​

Updated on: Apr 25, 2020 | 11:18 AM

ಬೆಂಗಳೂರು: ದೇಶದಲ್ಲಿ ಕೊರೊನಾ ರಣಕೇಕೆ ಜೋರಾಗಿದ್ರೆ, ಲಾಕ್​​ಡೌನ್​ ನಿಯಮ ಒಂದೊಂದಾಗೇ ಸಡಿಲಿಕೆಯಾಗ್ತಿದೆ. ಏಪ್ರಿಲ್ 27ರಂದು ರಾಜ್ಯದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ.

ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ಗೆ ಇನ್ನು 2 ದಿನ ಬಾಕಿ ಇರುವಂತೆಯೇ ಕೇಂದ್ರ ಸರ್ಕಾರ ಲಾಕ್​​​​ಡೌನ್​ ರೂಲ್ಸ್ ಸಡಿಲಿಸ್ತಿರೋದು ಅಚ್ಚರಿ ಮೂಡಿಸಿದೆ. ಮೇ 3ಕ್ಕೆ ಲಾಕ್​ಡೌನ್​ ಮುಂದುವರಿಯುತ್ತಾ? ಹಲವು ಕಟ್ಟುನಿಟ್ಟಿನ ನಿಯಮ ಜಾರಿ ಇರುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಒಟ್ನಲ್ಲಿ ಇಲ್ಲಿ ಒಂದು ವಿಚಾರವನ್ನ ರಾಜ್ಯದ ಜನತೆ ಅರ್ಥಮಾಡಿಕೊಳ್ಳಲೇಬೇಕು. ಕೆಲ ಕ್ಷೇತ್ರಗಳಿಗಷ್ಟೇ ರಿಲೀಫ್ ಕೊಟ್ಟಿರೋದಕ್ಕೆ ಕಾರಣ ಕೊರೊನಾ ಕಂಟ್ರೋಲ್​ ಜೊತೆಗೆ ಕೇಂದ್ರ ಹಾಗೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿದೂಗಿಸೋಕೆ. ಇವೆಲ್ಲವನ್ನೂ ಗಮದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಲಾಕ್​​ಡೌನ್​ನಿಂದ ಲಾಕ್ ಆಗಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ.

Published On - 10:50 am, Sat, 25 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us