Coronavirus: ಭಾರತದಲ್ಲಿ ಮತ್ತೆ ಕೊರೊನಾ ಆತಂಕ, ಮಹಾರಾಷ್ಟ್ರದಲ್ಲಿ 19 ಪ್ರಕರಣಗಳು ಪತ್ತೆ

|

Updated on: May 13, 2024 | 8:14 AM

ಭಾರತದಲ್ಲಿ ಮತ್ತೆ ಈಗ ಕೊರೊನಾ ಭಯ ಶುರುವಾಗಿದೆ. ಮಹಾರಾಷ್ಟ್ರದಲ್ಲಿ 19 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕದಲ್ಲಿ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿರುವ ಕೆಪಿ2 ಮಹಾರಾಷ್ಟ್ರದಲ್ಲೂ ಹೆಚ್ಚು ವೇಗದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ.

Coronavirus: ಭಾರತದಲ್ಲಿ ಮತ್ತೆ ಕೊರೊನಾ ಆತಂಕ, ಮಹಾರಾಷ್ಟ್ರದಲ್ಲಿ 19 ಪ್ರಕರಣಗಳು ಪತ್ತೆ
ಕೊರೊನಾವೈರಸ್
Follow us on

ಭಾರತದಲ್ಲಿ ಮತ್ತೆ ಕೊರೊನಾ(Corona) ಆತಂಕ ಶುರುವಾಗಿದೆ, ಮಹಾರಾಷ್ಟ್ರ(Maharashtra)ದಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ. ಓಮಿಕ್ರಾನ್​ನ ಮತ್ತೊಂದು ತಳಿ ಇದಾಗಿದ್ದು ಅಮೆರಿಕದಲ್ಲಿ ಇದು ಅತಿ ವೇಗವಾಗಿ ಹರಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024ರ ಜನವರಿಯಲ್ಲಿ ಈ ಹೊಸ ವೇರಿಯೆಂಟ್ ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಇದೀಗ ಹೊಸ ವೈರಸ್ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ.

ಪುಣೆಯಲ್ಲಿ 51 ಪ್ರಕರಣ, ಥಾಣೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿದೆ. ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದೆ.

ಮಹಾರಾಷ್ಟ್ರವು ಹೊಸ ಕೋವಿಡ್​-19 ಓಮಿಕ್ರಾನ್ ಸಬ್‌ವೇರಿಯಂಟ್ KP.2 ನ 91 ಪ್ರಕರಣಗಳ ದಾಖಲಿಸಿದೆ, ಇದು ಹಿಂದೆ ಪ್ರಬಲವಾಗಿದ್ದ JN.1 ರೂಪಾಂತರವನ್ನು ಮೀರಿಸುವಷ್ಟು ಶಕ್ತಿಶಾಲಿಯಾಗಿದೆ ಎನ್ನಲಾಗಿದೆ ಮತ್ತು ಈಗ ಹಲವಾರು ದೇಶಗಳಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗುತ್ತಿದೆ.

ಮತ್ತಷ್ಟು ಓದಿ:MERS Coronavirus: ಇದ್ಯಾವುದೋ ಕೊರೋನಾ ಮತ್ತೆ ವಕ್ಕರಿಸಿಕೊಂಡಿದೆ, ಸೌದಿ ಒಂಟೆಗಳಿಂದ ಸೋಂಕು ಹರಡುತ್ತಿದೆ, ಏನಿದರ ಲಕ್ಷಣಗಳು?

ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಸುಮಾರು 250 ಪ್ರಕರಣಗಳು ದಾಖಲಾಗಿವೆ. ಕೊರೊನಾ ಪ್ರಕರಣವು ಡಿಸೆಂಬರ್ 2019 ರಲ್ಲಿ ಮೊದಲು ಬೆಳಕಿಗೆ ಬಂದಿತು. ಇದಾದ ಬಳಿಕ, ಇದು ಕ್ರಮೇಣ ಅನೇಕ ದೇಶಗಳಿಗೆ ವ್ಯಾಪಿಸಿತ್ತು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ಅಂದಿನಿಂದ, ಅದರ ಅನೇಕ ರೂಪಾಂತರಗಳು ಕಂಡು ಬಂದಿವೆ.

ಪ್ರಕರಣ ಪತ್ತೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿನೋಮ್ ಸೀಕ್ವೆನ್ಸ್ ಪರೀಕ್ಷಾ ಸಂಪರ್ಕ ಅಧಿಕಾರಿ ಡಾ.ರಾಜೇಶ್, ಎಪ್ರಿಲ್, ಮೇ ತಿಂಗಳಲ್ಲಿ ಕೋವಿಡ್ ಮ್ಯೂಟೇಶನ್ ಪಡೆದುಕೊಂಡು ಹೊಸ ವೇರಿಯೆಂಟ್ ಆಗಿ ಹರಡುತ್ತದೆ. ಸದ್ಯ ಕೆಪಿ.2 ವೈರಸ್ ಪ್ರಕರಣ ತ್ವರಿತವಾಗಿ ಹರಡುತ್ತಿದೆ. ಆದರೆ ಆಸ್ಪತ್ರೆ ದಾಖಲು ಪ್ರಮಾಣ ಕಡಿಮೆ ಇದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ