AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಆಯ್ತು, ಈಗ ಕರ್ನಾಟಕ ತಮಿಳುನಾಡಿನಲ್ಲಿ ಹೆಚ್ಚಾದ ಕೊರೊನಾ ಪ್ರಕರಣಗಳು; ದಕ್ಷಿಣ ಕನ್ನಡಕ್ಕೆ ಆತಂಕ

Coronavirus: ಕರ್ನಾಟಕದಲ್ಲಿಯೂ ಸುಮಾರು 19 ದಿನಗಳ ನಂತರ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದ್ದು, ಗುರುವಾರ 2,052ಸೋಂಕಿತರು ಪತ್ತೆಯಾಗಿದ್ದಾರೆ. ಬುಧವಾರದಂದು 1,531ರಷ್ಟಿದ್ದ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 500ರಷ್ಟು ಹೆಚ್ಚಳ ಕಂಡಿದೆ.

ಕೇರಳ ಆಯ್ತು, ಈಗ ಕರ್ನಾಟಕ ತಮಿಳುನಾಡಿನಲ್ಲಿ ಹೆಚ್ಚಾದ ಕೊರೊನಾ ಪ್ರಕರಣಗಳು; ದಕ್ಷಿಣ ಕನ್ನಡಕ್ಕೆ ಆತಂಕ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 30, 2021 | 10:59 AM

Share

ಬೆಂಗಳೂರು: ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ಪ್ರಕರಣಗಳು (Corona Cases) ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ ಸುಮಾರು 22 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ದೇಶದಲ್ಲಿ ಒಟ್ಟಾರೆಯಾಗಿ ಕಾಣಸಿಗುತ್ತಿರುವ ಕೊರೊನಾ ಪ್ರಕರಣಗಳ ಅರ್ಧ ಪಾಲನ್ನು ಕೇರಳ (Kerala) ಭರಿಸುತ್ತಿದೆ ಎನ್ನುವುದು ಆತಂಕಕಾರಿಯಾಗಿ. ಹೊಸದಾಗಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದು ಮೂರನೇ ಅಲೆಗೆ (Covid 19 Third Wave) ನಾಂದಿಯೇ ಎನ್ನುವ ಅನುಮಾನವೂ ದಟ್ಟವಾಗಿದ್ದು, ಕೇರಳದ ಬೆನ್ನಲ್ಲೇ ನೆರೆಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ.

ಭಾರತದಲ್ಲಿ ಗುರುವಾರ (ಜುಲೈ 28ರಂದು) ಸುಮಾರು 45 ಸಾವಿರ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಬರೋಬ್ಬರಿ 22 ದಿನಗಳ ನಂತರ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಗುರುವಾರದಂದು 44,681 ಪ್ರಕರಣ ಹೊಸದಾಗಿ ದಾಖಲಾಗಿದ್ದು, ಜುಲೈ 7 ರ ನಂತರ ಇದೇ ಅತ್ಯಧಿಕವಾಗಿದೆ. ಹೀಗಾಗಿ ಸಂಭವನೀಯ ಮೂರನೇ ಅಲೆ ಆತಂಕ ಮೂಡಲಾರಂಭಿಸಿದ್ದು, ಮತ್ತೊಂದು ಅನಾಹುತ ದೇಶವನ್ನು ಕಾಡಲಿದೆಯಾ ಎಂದೆನಿಸುತ್ತಿದೆ.

ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳ ಜತೆಗೆ ಮಹಾರಾಷ್ಟ್ರದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಗುರುವಾರ 7,242 ಜನ ಸೋಂಕಿತರು ಪತ್ತೆಯಾಗುವ ಮೂಲಕ ಭಯ ಮೂಡಿಸಿದೆ. ಇತ್ತ ಕೇರಳದಲ್ಲಿ ಅದೇ ದಿನ 22,064 ಪ್ರಕರಣಗಳು ಹೊಸದಾಗಿ ಕಾಣಸಿಕ್ಕಿವೆ. ಹಾಗೆ ನೋಡಿದರೆ ಕಳೆದ ಮೂರು ದಿನಗಳಿಂದ ಇಡೀ ದೇಶದಲ್ಲಿ ಪತ್ತೆಯಾಗುವ ಕೊರೊನಾ ಪ್ರಕರಣಗಳ ಪಾಲಿನಲ್ಲಿ ಶೇ.50ಕ್ಕೂ ಅಧಿಕ ಸೋಂಕಿತರನ್ನು ದಾಖಲಿಸುತ್ತಿದ್ದ ಕೇರಳದಲ್ಲಿ ಗುರುವಾರ ಆ ಪ್ರಮಾಣ ಕೊಂಚ ಇಳಿಮುಖ ಕಂಡಿದೆ.

ಕರ್ನಾಟಕದಲ್ಲಿಯೂ ಸುಮಾರು 19 ದಿನಗಳ ನಂತರ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದ್ದು, ಗುರುವಾರ 2,052ಸೋಂಕಿತರು ಪತ್ತೆಯಾಗಿದ್ದಾರೆ. ಬುಧವಾರದಂದು 1,531ರಷ್ಟಿದ್ದ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 500ರಷ್ಟು ಹೆಚ್ಚಳ ಕಂಡಿದೆ. ಕೇರಳಕ್ಕೆ ಹೊಂದಿಕೊಂಡಂತಿರುವ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ರೆಡ್​ ಜೋನ್​ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ. ಬೆಂಗಳೂರಿನಲ್ಲಿ ಬುಧವಾರ 376 ಪ್ರಕರಣಗಳು ಪತ್ತೆಯಾಗಿದ್ದು, ಗುರುವಾರದಂದು 505ಕ್ಕೆ ಏರಿಕೆಯಾಗಿದ್ದರೆ ದಕ್ಷಿಣ ಕನ್ನಡದಲ್ಲಿ 396 ಪ್ರಕರಣಗಳು ಹೊಸದಾಗಿ ಕಾಣಸಿಕ್ಕಿವೆ.

ತಮಿಳುನಾಡಿನಲ್ಲಿ ಬರೋಬ್ಬರಿ 69 ದಿನಗಳ ನಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಬುಧವಾರ 1,756ರಷ್ಟಿದ್ದ ಪ್ರಕರಣಗಳು ಗುರುವಾರದಂದು 1,859ಕ್ಕೆ ಏರಿಕೆಯಾಗಿವೆ. ಈಶಾನ್ಯ ರಾಜ್ಯಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ ಕಾಣುತ್ತಿದ್ದು ಮಿಜೋರಾಂನಲ್ಲಿ 1,100, ಮಣಿಪುರದಲ್ಲಿ 1,000 ಹಾಗೂ ಮೇಘಾಲಯದಲ್ಲಿ 731 ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ ಗುರುವಾರದಂದು ಒಟ್ಟು 557 ಕೊರೊನಾ ಸೋಂಕಿತರು ಮೃತರಾಗಿದ್ದು ಮಹಾರಾಷ್ಟ್ರದಲ್ಲಿ 190, ಕೇರಳದಲ್ಲಿ 128 ಸಾವು ದಾಖಲಾಗಿದೆ.

ಇದನ್ನೂ ಓದಿ: Kerala Lockdown: ಕೇರಳದಲ್ಲಿ ಕೊರೊನಾ ಮತ್ತೆ ಹೆಚ್ಚಳ; ವಾರಾಂತ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಿದ ರಾಜ್ಯ ಸರ್ಕಾರ 

Explainer ಐಸಿಎಂಆರ್‌ ಸೆರೊ ಸಮೀಕ್ಷೆ: ಕೊರೊನಾವೈರಸ್ ವಿರುದ್ಧದ ಪ್ರತಿಕಾಯಗಳ ಬೆಳವಣಿಗೆ ಯಾವ ರಾಜ್ಯದ ಜನರಲ್ಲಿ ಎಷ್ಟೆಷ್ಟು?

(Coronavirus Third Wave fear After Kerala Covid 19 spike in Karnataka and Tamil Nadu)

Published On - 10:57 am, Fri, 30 July 21

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ