ಕೊವಿಡ್ 19 ಲಸಿಕೆ ಸರ್ಟಿಫಿಕೇಟ್​ ಮೇಲೆ ಇನ್ಮುಂದೆ ಮಮತಾ ಬ್ಯಾನರ್ಜಿ ಫೋಟೋ; ಟಿಎಂಸಿ ಸರ್ಕಾರದ ನಿರ್ಧಾರ

ಕೊವಿಡ್​ 19 ಸರ್ಟಿಫಿಕೇಟ್​ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇದ್ದ ಬಗ್ಗೆ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಟಿಎಂಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಕೊವಿಡ್ 19 ಲಸಿಕೆ ಸರ್ಟಿಫಿಕೇಟ್​ ಮೇಲೆ ಇನ್ಮುಂದೆ ಮಮತಾ ಬ್ಯಾನರ್ಜಿ ಫೋಟೋ; ಟಿಎಂಸಿ ಸರ್ಕಾರದ ನಿರ್ಧಾರ
ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ
Edited By:

Updated on: Jun 05, 2021 | 1:52 PM

ದೆಹಲಿ: ಇತ್ತೀಚೆಗೆ ಚತ್ತೀಸ್​ಗಡ್​​ನಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ನೀಡಲಾದ ಪ್ರಮಾಣಪತ್ರ (ಸರ್ಟಿಫಿಕೇಟ್​)ದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಬದಲು ಅಲ್ಲಿಯ ಮುಖ್ಯಮಂತ್ರಿ ಫೋಟೋ ಇದ್ದಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. 18-44ವರ್ಷ ವಯಸ್ಸಿನವರಿಗೆ ನೀಡುವ ಲಸಿಕೆಯನ್ನು ಆಯಾ ರಾಜ್ಯಸರ್ಕಾರಗಳು ಖರೀದಿಸಿ ಎಂದು ಕೇಂದ್ರ ಸರ್ಕಾರ ಹೇಳಿದೆ. ನಾವು ಹಣಕೊಟ್ಟು ಖರೀದಿ ಮಾಡಿದ ಲಸಿಕೆ ನೀಡಿ, ಸರ್ಟಿಫಿಕೇಟ್​ ಮೇಲೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಾಕಬೇಕು ಎಂದು ಅಲ್ಲಿನ ಆಡಳಿತ ಪ್ರಶ್ನೆ ಮಾಡಿತ್ತು. ಇದೀಗ ಅದೇ ದಾರಿಯನ್ನು ಪಶ್ಚಿಮಬಂಗಾಳ ಸರ್ಕಾರವೂ ತುಳಿದಿದೆ.

ಪಶ್ಚಿಮಬಂಗಾಳದಲ್ಲಿ ಮೂರನೇ ಹಂತದಲ್ಲಿ ಲಸಿಕೆ ಪಡೆದ 18-44ವರ್ಷದವರಿಗೆ ನೀಡಲಾಗುವ ಕೊವಿಡ್​ 19 ಲಸಿಕೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬದಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೋಟೋ ಇರಲಿದೆ.

ಕೊವಿಡ್​ 19 ಸರ್ಟಿಫಿಕೇಟ್​ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇದ್ದ ಬಗ್ಗೆ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಟಿಎಂಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಬಿಜೆಪಿ ಲಸಿಕೆ ಹೆಸರಲ್ಲಿ ಪ್ರಚಾರ ಪಡೆಯುತ್ತಿದೆ. ಕೂಡಲೇ ಫೋಟೋವನ್ನು ತೆಗೆಸಬೇಕು ಎಂದು ಹೇಳಿತ್ತು. ಅದಾದ ನಂತರ ಚುನಾವಣೆ ನಡೆಯಲಿರುವ 5ರಾಜ್ಯಗಳಲ್ಲಿ ಕೊವಿಡ್​ 19 ಲಸಿಕೆ ಪ್ರಮಾಣಪತ್ರದ ಮೇಲಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆಯಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು.

ಚುನಾವಣಾ ಪೂರ್ವ ಹಿಂಸಾಚಾರದಿಂದ ಹಿಡಿದು, ಮೊನ್ನೆ ಮೊನ್ನೆ ನಡೆದ ಆಲಾಪನ್​ ಬಂಡೋಪಾಧ್ಯಾಯ ವರ್ಗಾವಣೆವರೆಗೆ ಪ್ರತಿವಿಚಾರದಲ್ಲೂ ಟಿಎಂಸಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಇದೆ. ಬಿಜೆಪಿ ದ್ವೇಷಪೂರಿತ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿದೆ.

ಇದನ್ನೂ ಓದಿ: ಖ್ಯಾತ ನಟನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ? ಪೊಲೀಸರ ವಶದಲ್ಲಿ ಪರ್ಲ್​ ವಿ. ಪುರಿ