ಖ್ಯಾತ ನಟನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ? ಪೊಲೀಸರ ವಶದಲ್ಲಿ ಪರ್ಲ್​ ವಿ. ಪುರಿ

ಖ್ಯಾತ ನಟನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ? ಪೊಲೀಸರ ವಶದಲ್ಲಿ ಪರ್ಲ್​ ವಿ. ಪುರಿ
ಪರ್ಲ್​ ವಿ. ಪುರಿ, ಅನಿತಾ

Pearl V Puri arrested: ಟಿವಿ ಸೀರಿಯಲ್​ಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಪರ್ಲ್​ ವಿ. ಪುರಿ ಅವರು ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್​ ದಾಖಲಾಗಿದೆ.

Madan Kumar

|

Jun 05, 2021 | 1:35 PM

ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ಮಿಂಚಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕದ ಕನಸು ಕಾಣುವವರು ಅನೇಕರಿದ್ದಾರೆ. ಆದರೆ ಅಂಥವರಿಗೆ ಮೋಸ ಮಾಡುವವರ ಜಾಲವೂ ದೊಡ್ಡದಿದೆ. ಈ ರೀತಿ ಕನಸು ಹೊತ್ತುಕೊಂಡ ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಹಿಂದಿ ಕಿರುತೆರೆಯ ಖ್ಯಾತ ನಟ ಪರ್ಲ್​ ವಿ. ಪುರಿ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಲ್​ ವಿ. ಪುರಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್​ ದಾಖಲಾಗಿದೆ. ಅತ್ಯಾಚಾರ ಆರೋಪ ಹೊತ್ತಿರುವ ಪರ್ಲ್​ ವಿ. ಪುರಿ ಈಗ ಪೊಲೀಸರ ವಶದಲ್ಲಿದ್ದಾರೆ. ಟಿವಿ ಸೀರಿಯಲ್​ಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ, ಬಾಲಕಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣ ಹಳೆಯದಾಗಿದ್ದರೂ ಕೂಡ ಬಾಲಕಿ ಮತ್ತು ಆಕೆಯ ತಾಯಿ ಈಗ ದೂರು ನೀಡಿದ್ದಾರೆ. ಅದರ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಳೆದ 9 ವರ್ಷದಿಂದ ಕಿರುತೆರೆಯಲ್ಲಿ ಪರ್ಲ್​ ವಿ. ಪುರಿ ಸಕ್ರಿಯರಾಗಿದ್ದಾರೆ. ಬಾಲಕಿಯ ಜೊತೆ ಪರಿಚಯ ಬೆಳೆಸಿಕೊಂಡು ಇಂಥ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸತ್ಯಾಸತ್ಯತೆ ಏನೆಂಬುದು ತನಿಖೆ ನಂತರವೇ ತಿಳಿದುಬರಬೇಕಿದೆ. ಹಿಂದಿಯ ಹಲವು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಪರ್ಲ್​ ವಿ. ಪುರಿ ಅವರಿಗೆ ‘ನಾಗಿನ್​ 3’ ಸೀರಿಯಲ್​ನಿಂದ ಹೆಚ್ಚು ಖ್ಯಾತಿ ಸಿಕ್ಕಿತ್ತು.

‘ನಾಗಿನ್​ 3’ ಧಾರಾವಾಹಿಯಲ್ಲಿ ಅವರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಅನಿತಾ ಅವರು ಈ ಸುದ್ದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಪರ್ಲ್​ ವಿ. ಪುರಿ ನನಗೆ ಚೆನ್ನಾಗಿ ಗೊತ್ತು. ಅವರ ಈ ರೀತಿ ಮಾಡಿರಲು ಸಾಧ್ಯವೇ ಇಲ್ಲ. ಈ ಸುದ್ದಿ ನಿಜವಲ್ಲ. ಶೀಘ್ರದಲ್ಲೇ ಸತ್ಯ ಹೊರಬರಲಿದೆ’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ.

ಇದನ್ನೂ ಓದಿ:

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್​

ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ಜಾಲ ಬಹಿರಂಗ

Follow us on

Related Stories

Most Read Stories

Click on your DTH Provider to Add TV9 Kannada