Viral Video: ಮದುವೆಯಲ್ಲಿ ದೂರದಲ್ಲೇ ನಿಂತು, ಕೋಲಿನ ಮೂಲಕ ಹಾರ ಬದಲಿಸಿಕೊಂಡ ವಧು-ವರ; ಈ ಕೊರೊನಾ ಏನೇನೆಲ್ಲ ಮಾಡ್ಸತ್ತೋ !
ಈ ಜೋಡಿ ಚೆಂದನೆಯ ಉಡುಪು ಧರಿಸಿ, ಮಾಸ್ಕ್ ಧರಿಸಿಕೊಂಡಿದ್ದನ್ನು ಇಲ್ಲಿ ನೋಡಬಹುದು. ಆದರೆ ನಂತರ ವರ, ವಧುವಿಗೆ ತಾಳಿಕಟ್ಟಿದ್ದು ಹೇಗೆ ಎಂಬುದು ಗೊತ್ತಾಗಲಿಲ್ಲ.
ಕೊರೊನಾ ಸೋಂಕಿನ ಕಾರಣದಿಂದ ಅದೆಷ್ಟೋ ಜೋಡಿಗಳಿಗೆ ತಮಗೆ ಅಂದುಕೊಂಡಂತೆ, ಅದ್ದೂರಿಯಾಗಿ ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಹಲವು ಜೋಡಿಗಳು ಮದುವೆ ಮುಂದೂಡಿದ್ದರೆ, ಇನ್ನೂ ಕೆಲವರು ವಿಭಿನ್ನವಾಗಿ, ಬೇರೆ ಕೆಲವು ವಿಧಾನಗಳ ಮೂಲಕ ವಿವಾಹವಾಗುತ್ತಿದ್ದಾರೆ. ಇತ್ತೀಚೆಗೆ ಜೋಡಿಯೊಂದು ಪಿಪಿಇ ಕಿಟ್ ಧರಿಸಿ ಮದುವೆಯಾದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಆದರೆ ಈಗೊಂದು ಜೋಡಿಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಂತೂ ಇದನ್ನು ನೋಡಿ ತುಂಬ ನಗುತ್ತಿದ್ದಾರೆ.
ಇದು ಬಿಹಾರದ ಬೇಗುಸಾರೈ ಎಂಬಲ್ಲಿ ನಡೆದ ಘಟನೆ. ಇಲ್ಲಿ ಯುವತಿ ಹಾಗೂ ಯುವಕ ಮದುವೆ ಸಂದರ್ಭದಲ್ಲಿ ಹಾರ ಬದಲಿಸಿಕೊಳ್ಳುವಾಗ ಪರಸ್ಪರ ದೂರದಲ್ಲಿ ನಿಂತು, ಬಾಂಬೂ ಕೋಲಿನ ಮೂಲಕ ಒಬ್ಬರಿಗೊಬ್ಬರು ಹಾರ ಹಾಕಿದ್ದಾರೆ.
ಚತ್ತೀಸ್ಗಡ್ನ ಹೆಚ್ಚುವರಿ ಸಾರಿಗೆ ಆಯುಕ್ತ ದೀಪಾಂಶು ಕಾಬ್ರಾ ಎಂಬುವರು ವಿಡಿಯೋ ಹಂಚಿಕೊಂಡಿದ್ದಾರೆ. ಈ ಜೋಡಿ ಚೆಂದನೆಯ ಉಡುಪು ಧರಿಸಿ, ಮಾಸ್ಕ್ ಧರಿಸಿಕೊಂಡಿದ್ದನ್ನು ಇಲ್ಲಿ ನೋಡಬಹುದು. ಆದರೆ ನಂತರ ವರ, ವಧುವಿಗೆ ತಾಳಿಕಟ್ಟಿದ್ದು ಹೇಗೆ ಎಂಬುದು ಗೊತ್ತಾಗಲಿಲ್ಲ.
ಅದೇನೇ ಆದರೂ ವಿಡಿಯೋ ನೋಡಿದ ಜನರಂತು, ಹೀಗೆಲ್ಲ ಮದುವೆ ಆಗುವ ಬದಲು ಸಾಂಕ್ರಾಮಿಕ ರೋಗ ಸ್ವಲ್ಪ ಹತೋಟಿಗೆ ಬಂದ ಮೇಲೆ ಸಹಜವಾಗಿಯೇ ವಿವಾಹವಾಗಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.
#कोरोना में शादियां सफलतापूर्वक संपन्न कराने के लिए इवेंट मैनेजर्स को क्या क्या जुगाड़ू समाधान निकालना पड़ता है…. ?? pic.twitter.com/2WOc9ld0rU
— Dipanshu Kabra (@ipskabra) May 2, 2021
Published On - 2:34 pm, Wed, 5 May 21