ಕೊವಿಡ್ ಕೇರ್ ಸೆಂಟರ್​ನಲ್ಲಿ ಹಸೆಮಣೆ ಏರಿದ ನವಜೋಡಿ; ಮದುವೆಗೆ ಕೂಡಿಟ್ಟ ಹಣವೂ ದಾನ

| Updated By: ganapathi bhat

Updated on: Jun 08, 2021 | 5:49 PM

ಹಲವಾರು ಮದುವೆ ಸಮಾರಂಭ, ರಜಾ ಪ್ರವಾಸ, ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲಾಗುತ್ತಿಲ್ಲ. ಆದರೆ, ಲಾಕ್​ಡೌನ್, ಸೀಮಿತ ಅತಿಥಿಗಳ ನಿರ್ಬಂಧದ ಮಧ್ಯೆಯೂ ಯುವಜೋಡಿಗಳು ವಿಭಿನ್ನ ರೀತಿಯಲ್ಲಿ ಮದುವೆ ಆಗುತ್ತಿದ್ದಾರೆ.

ಕೊವಿಡ್ ಕೇರ್ ಸೆಂಟರ್​ನಲ್ಲಿ ಹಸೆಮಣೆ ಏರಿದ ನವಜೋಡಿ; ಮದುವೆಗೆ ಕೂಡಿಟ್ಟ ಹಣವೂ ದಾನ
ಪ್ರಾತಿನಿಧಿಕ
Follow us on

ಕೊರೊನಾ ಸೋಂಕು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿ ಬಿಟ್ಟಿದೆ. ಮೊದಲನೇ ಅಲೆಯ ಅಂತ್ಯದ ಬಳಿಕ ಕೊವಿಡ್ ಸಾಂಕ್ರಾಮಿಕದ ಸಮಸ್ಯೆ ಭಾರತದಲ್ಲಿ ಇನ್ನು ಇಲ್ಲ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಮತ್ತೆ ಎರಡನೇ ಅಲೆ, ಲಾಕ್​ಡೌನ್ ಪ್ರಕ್ರಿಯೆ ಆರಂಭವಾಯಿತು. ಮೊದಲ ಅಲೆಯಲ್ಲಿ ಅನುಭವಿಸಿದ ಕೊವಿಡ್-19 ಪ್ರಕರಣಗಳು, ಸಾವು- ನೋವಿಗಿಂತ ಈ ಬಾರಿ ಅಧಿಕ ಸಮಸ್ಯೆ ಎದುರಿಸುವಂತಾಯಿತು. ಈ ಎಲ್ಲಾ ಕಾರಣಗಳಿಂದಾಗಿ ಜನರ ಯೋಜನೆಗಳು ಪ್ಲಾನ್ ಪ್ರಕಾರ ನಡೆಸಲಾಗುತ್ತಿಲ್ಲ.

ಹಲವಾರು ಮದುವೆ ಸಮಾರಂಭ, ರಜಾ ಪ್ರವಾಸ, ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲಾಗುತ್ತಿಲ್ಲ. ಆದರೆ, ಲಾಕ್​ಡೌನ್, ಸೀಮಿತ ಅತಿಥಿಗಳ ನಿರ್ಬಂಧದ ಮಧ್ಯೆಯೂ ಯುವಜೋಡಿಗಳು ವಿಭಿನ್ನ ರೀತಿಯಲ್ಲಿ ಮದುವೆ ಆಗುತ್ತಿದ್ದಾರೆ. ವಿಶಿಷ್ಠವಾಗಿ ಹಸೆಮಣೆ ಏರುತ್ತಿದ್ದಾರೆ.

ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಮಹಾರಾಷ್ಟ್ರ, ಅಹಮದ್​ನಗರ್​ನ ಯುವಜೋಡಿ ಕೊವಿಡ್ ಕೇರ್ ಸೆಂಟರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹ ನಡೆಸುವ ಬಗ್ಗೆ ಅಹಮದ್​ನಗರ್ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿತ್ತು. ಆ ಬಳಿಕ ಇದೀಗ, ಯುವಜೋಡಿ ಕೊವಿಡ್ ಸೆಂಟರ್​ನಲ್ಲಿ ಮದುವೆಯಾಗಿದ್ದಾರೆ. ಈ ವಿಶೇಷ ಸ್ಥಳವನ್ನು ಮದುವೆಯಾಗಲು ಬಳಸುವುದರ ಜೊತೆಗೆ, ಮತ್ತೊಂದು ಹೆಮ್ಮೆ ಪಡುವಂಥ ಕೆಲಸವನ್ನೂ ಅವರು ಮಾಡಿದ್ದಾರೆ. ಮದುವೆಗಾಗಿ ಅವರು ಕೂಡಿಟ್ಟಿದ್ದ ಹಣವನ್ನು ಕೊವಿಡ್ ಕೇರ್ ಸೆಂಟರ್​ಗೆ ನೀಡಿದ್ದಾರೆ.

ಎಂಎಲ್​ಎ ನಿಲೇಶ್ ಲಂಕೆ ಶರದ್ ಚಂದ್ರಜೀ ಪವಾರ್ ಆರೋಗ್ಯ ಮಂದಿರ್ ಕೊವಿಡ್ ಸೆಂಟರ್​ನಲ್ಲಿ ಯುವಜೋಡಿ ಹಸೆಮಣೆ ಏರಿದ್ದಾರೆ. ಅನಿಕೇತ್ ವ್ಯವಹಾರೆ ಮತ್ತು ಆರತಿ ಶಿಂಧೆ ಹಾಗೂ ರಾಜಶ್ರೀ ಕಾಳೆ ಮತ್ತು ಜನಾರ್ದನ್ ಕಡಮ್ ತಮ್ಮ ಹೊಸ ಬದುಕನ್ನು ಈ ರೀತಿ ಮದುವೆ ಆಯೋಜಿಸುವ ಮೂಲಕ ಆರಂಭಿಸಲು ಉದ್ದೇಶಿಸಿದ್ದರು. ಆ ಮೂಲಕ, ಕೊರೊನಾದಿಂದ ಕೇರ್ ಸೆಂಟರ್​ನಲ್ಲಿ ಇರುವ ಸ್ಥಳೀಯರಿಗೆ ಶುಭಸುದ್ದಿ ನೀಡಿದ್ದರು.

ಅಷ್ಟೇ ಅಲ್ಲದೆ, ಈ ಎರಡೂ ಜೋಡಿಗಳು ಫೇಸ್ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಅಗತ್ಯ ವಸ್ತುಗಳನ್ನು ಕೊವಿಡ್ ಸೆಂಟರ್​ಗೆ ನೀಡಿದ್ದಾರೆ. 37 ಸಾವಿರ ರೂಪಾಯಿಯ ಹಣಕಾಸು ಸಹಾಯವನ್ನು ಕೂಡ ಕೇರ್ ಸೆಂಟರ್​ಗೆ ಮಾಡಿದ್ದಾರೆ. ಕೊರೊನಾ ಮಹಾಮಾರಿಯಿಂದ ಜಗತ್ತೇ ತತ್ತರಿಸಿ ಹೋಗಿದೆ. ನಮ್ಮ ಸ್ಥಳೀಯ ಜನರು ಕೂಡ ಕೊವಿಡ್​ಗೆ ತುತ್ತಾಗಿ ಕೇರ್ ಸೆಂಟರ್​​ನಲ್ಲಿ ಇದ್ದಾರೆ. ಈ ಕಷ್ಟದ ಸಮಯದಲ್ಲಿ ಅವರನ್ನು ಚಿಯರ್ ಅಪ್ ಮಾಡಲು ನಾವು ಈ ನಿರ್ಧಾರ ಕೈಗೊಂಡೆವು ಎಂದು ದಂಪತಿ ತಿಳಿಸಿದ್ದಾರೆ.

ಕೊವಿಡ್ ಕೇರ್ ಸೆಂಟರ್​ನಲ್ಲಿ ವಿವಾಹ ಸಮಾರಂಭವನ್ನು ಕೊವಿಡ್-19 ಮಾರ್ಗಸೂಚಿಗಳ ಅನುಸಾರ ನಡೆಸಲಾಗಿದೆ. ನವಜೋಡಿಗಳ ಜೊತೆಗೆ ಕೆಲವೇ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. ಶಾಸಕ ನಿಲೇಶ್ ಲಂಕೆ ಕೂಡ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ನವಜೋಡಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಮದುವೆ ನಡೆಯುತ್ತಿರುವಾಗ ಏಕಾಏಕಿ ಎದ್ದು ವಿಚಿತ್ರವಾಗಿ ಡ್ಯಾನ್ಸ್​ ಮಾಡಿದ ಮದುಮಗ; ವರನ ಕುಣಿತ ನೋಡಿ ವಧು ಕಂಗಾಲು

Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?

Published On - 5:35 pm, Tue, 8 June 21