AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಲು ಭಾರತ್ ಬಯೋಟೆಕ್​ನಿಂದ ಹೆಚ್ಚುವರಿ ಸ್ಪಷ್ಟನೆ ಕೇಳಿದ WHO

Covaxin Vaccine: ಜಾಗತಿಕ ಮಟ್ಟದಲ್ಲಿ ತುರ್ತು ಬಳಕೆ ಪಟ್ಟಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್​ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ.

ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಲು ಭಾರತ್ ಬಯೋಟೆಕ್​ನಿಂದ ಹೆಚ್ಚುವರಿ ಸ್ಪಷ್ಟನೆ ಕೇಳಿದ WHO
ಕೊವ್ಯಾಕ್ಸಿನ್ ಲಸಿಕೆ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 27, 2021 | 2:57 PM

Share

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ತಂಡ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಅನುಮೋದನೆಗೆ ಹೆಚ್ಚುವರಿ ದಾಖಲೆಗಳನ್ನು ಕೋರಿದೆ. ಕೋವಾಕ್ಸಿನ್ ಅಭಿವೃದ್ಧಿಪಡಿಸಿದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಸಿಕೆಯ ತುರ್ತು ಬಳಕೆಯ ಅನುಮತಿಗಾಗಿ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ EOI ಸಲ್ಲಿಸಿತ್ತು.

ಭಾರತ ಮೂಲದ ಕೊವಿಡ್ ಲಸಿಕೆಗಳ ತುರ್ತು ಬಳಕೆಯ ಪಟ್ಟಿಗಾಗಿ ಕೋವ್ಯಾಕ್ಸಿನ್​ನಲ್ಲಿನ ಡೇಟಾವನ್ನು ಪರಿಶೀಲಿಸಲು ತಾಂತ್ರಿಕ ಸಲಹಾ ತಂಡ ಮಂಗಳವಾರ ಸಭೆ ಸೇರಿತ್ತು. ಈ ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ಮೌಲ್ಯಮಾಪನವನ್ನು ನಡೆಸಲು ತಯಾರಕರಿಂದ ಹೆಚ್ಚುವರಿ ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಸಭೆಯ ಬಳಿಕ ತಿಳಿಸಿದೆ.

ಕೊವಿಡ್ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ. 77.8ರಷ್ಟು ಪರಿಣಾಮಕಾರಿಯಾಗಿದೆ. ಹಾಗೇ ಹೊಸ ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಶೇ. 65.2ರಷ್ಟು ರಕ್ಷಣೆಯನ್ನು ಪ್ರದರ್ಶಿಸಿದೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಫೈಜರ್-ಬಯೋಎನ್​ಟೆಕ್, ಆಸ್ಟ್ರಾಜೆನೆಕಾ, ಎಸ್​ಕೆ ಬಯೋ/ಸೆರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ, ಜಾನ್ಸನ್ ಆ್ಯಂಡ್ ಜಾನ್ಸನ್-ಜಾನ್​ಸ್ಸೆನ್, ಮಾಡರ್ನಾ ಮತ್ತು ಸಿನೋಫಾರ್ಮ್ ಕೊವಿಡ್-19 ಲಸಿಕೆಗಳ ತುರ್ತು ಬಳಕೆಗಾಗಿ ಅನುಮೋದನೆ ನೀಡಿದೆ.

ಜಾಗತಿಕ ಮಟ್ಟದಲ್ಲಿ ತುರ್ತು ಬಳಕೆ ಪಟ್ಟಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್​ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ. ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮುನ್ನ ಅಂತಿಮ ಹಂತದ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸುವುದಕ್ಕೆ ಈ ಹೆಚ್ಚುವರಿ ಸ್ಪಷ್ಟನೆಗಳನ್ನು ಕೇಳಲಾಗಿದೆ. ನಿರೀಕ್ಷಿತ ಸಮಯದಲ್ಲಿ ಡೇಟಾ ಲಭ್ಯವಾದಲ್ಲಿ ನವೆಂಬರ್ 3ಕ್ಕೆ ಅಂತಿಮ ಮೌಲ್ಯಮಾಪನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಮತ್ತೊಮ್ಮೆ ಸಭೆ ಸೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಈ ವಾರಾಂತ್ಯದಲ್ಲಿ ಹೆಚ್ಚುವರಿ ಮಾಹಿತಿಗಳನ್ನು ಡಬ್ಲ್ಯುಎಚ್‌ಒಗೆ ಭಾರತ್‌ ಬಯೋಟೆಕ್‌ ಪೂರೈಸುವ ಸಾಧ್ಯತೆಯಿದ್ದು, ನ. 3ರಂದು ಮತ್ತೆ ಸಭೆ ನಡೆಸಲಿರುವ WHO ಅಂದು ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವುದಾಗಿ ಘೋಷಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Covaxin: ನವೆಂಬರ್​ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಸಾಧ್ಯತೆ; ಆರೋಗ್ಯ ಸಮಸ್ಯೆ ಇರುವವರಿಗೆ ಆದ್ಯತೆ

Covaxin for Children: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು