ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಭರವಸೆ ಹುಸಿ; 10 ಕೋಟಿ ಬದಲು ಕೇವಲ 2.6 ಕೋಟಿ ಡೋಸ್ ಲಸಿಕೆ ಉತ್ಪಾದನೆ

| Updated By: ganapathi bhat

Updated on: Jul 10, 2021 | 6:06 PM

Covaxin Vaccine: ಜೂನ್​ನಲ್ಲಿ ಲಸಿಕೆಯ ಉತ್ಪಾದನೆ ಆರಂಭವಾಗಬೇಕಾಗಿತ್ತು. ಕರ್ನಾಟಕದ ಮಾಲೂರು ಘಟಕದಲ್ಲಿ ಆರಂಭವಾಗಬೇಕಿತ್ತು. ಆದರೆ ಲಸಿಕೆ ಉತ್ಪಾದನೆಗೆ ಇನ್ನೂ 2 ತಿಂಗಳ ಸಮಯ ಬೇಕು. ಗುಜರಾತ್​ನ ಅಂಕಲೇಶ್ವರ್ ಘಟಕದಲ್ಲೂ ಲಸಿಕೆ ಉತ್ಪಾದನೆ ಶುರುವಾಗಿಲ್ಲ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಭರವಸೆ ಹುಸಿ; 10 ಕೋಟಿ ಬದಲು ಕೇವಲ 2.6 ಕೋಟಿ ಡೋಸ್ ಲಸಿಕೆ ಉತ್ಪಾದನೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಬಗ್ಗೆ ಜುಲೈ ತಿಂಗಳಲ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ. 10 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದನೆಯ ಬಗ್ಗೆ ಭರವಸೆ ನೀಡಲಾಗಿತ್ತು. ಭಾರತ್ ಬಯೋಟೆಕ್​ನಿಂದ 10 ಕೋಟಿ ಡೋಸ್ ಲಸಿಕೆ ಉತ್ಪಾದನೆ ಎಂದು ಹೇಳಲಾಗಿತ್ತು. ಆದರೆ, ಈ ಭರವಸೆ ಈಗ ಸುಳ್ಳಾಗಿದೆ.

ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ ಮುಖ್ಯಸ್ಥ ಡಾ‌.ಎನ್.ಕೆ‌. ಅರೋರಾ‌ ಲಸಿಕೆ ಉತ್ಪಾದನೆ ಕುರಿತು ಹೀಗೆ ಹೇಳಿಕೆ ನೀಡಿದ್ದರು. ಆದರೆ ಜುಲೈನಲ್ಲಿ 2.6 ಕೋಟಿ ಡೋಸ್ ಲಸಿಕೆ ಮಾತ್ರ ಉತ್ಪಾದನೆ ಆಗಿದೆ. ನಿರೀಕ್ಷಿಸಿದ್ದ ಪೈಕಿ ಶೇ. 26ರಷ್ಟು ಮಾತ್ರ ಲಸಿಕೆ ಉತ್ಪಾದನೆ ಆಗಿದೆ.

ಜುಲೈನಲ್ಲಿ 9.5 ಕೋಟಿ ಡೋಸ್ ಕೊವಿಶೀಲ್ಡ್ ಉತ್ಪಾದನೆ ಆಗಿದೆ. ಹೀಗಾಗಿ ಜುಲೈನಲ್ಲಿ 12 ಕೋಟಿ ಡೋಸ್ ಲಸಿಕೆ ಮಾತ್ರ ಲಭ್ಯವಾಗಿದೆ. ಭಾರತ್ ಬಯೋಟೆಕ್​ನಿಂದ ಲಸಿಕೆ ಉತ್ಪಾದನೆ ಹೆಚ್ಚಾಗುತ್ತಿಲ್ಲ. ನಿರೀಕ್ಷೆಯಂತೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಹೆಚ್ಚಾಗಿಲ್ಲ.

ಜೂನ್​ನಲ್ಲಿ ಲಸಿಕೆಯ ಉತ್ಪಾದನೆ ಆರಂಭವಾಗಬೇಕಾಗಿತ್ತು. ಕರ್ನಾಟಕದ ಮಾಲೂರು ಘಟಕದಲ್ಲಿ ಆರಂಭವಾಗಬೇಕಿತ್ತು. ಆದರೆ ಲಸಿಕೆ ಉತ್ಪಾದನೆಗೆ ಇನ್ನೂ 2 ತಿಂಗಳ ಸಮಯ ಬೇಕು. ಗುಜರಾತ್​ನ ಅಂಕಲೇಶ್ವರ್ ಘಟಕದಲ್ಲೂ ಲಸಿಕೆ ಉತ್ಪಾದನೆ ಶುರುವಾಗಿಲ್ಲ. ಭಾರತ್ ಬಯೋಟೆಕ್ ಜತೆ ಬೇರೆ ಕಂಪನಿಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಒಪ್ಪಂದ ಮಾಡಿಕೊಂಡ ಬೇರೆ ಕಂಪನಿಗಳಲ್ಲೂ ಲಸಿಕೆ ಉತ್ಪಾದನೆ ಆರಂಭವಾಗಿಲ್ಲ. ಹಾಗಾಗಿ ದೇಶದಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಎದುರಾಗಿದೆ.

ಮಾಡೆರ್ನಾ ಲಸಿಕೆಗೆ ಕಾನೂನು ರಕ್ಷಣೆ; ಕರಡು ಪ್ರತಿ ಸಿದ್ಧ
ಮಾಡೆರ್ನಾ ಲಸಿಕೆಗೆ ಕಾನೂನು ರಕ್ಷಣೆಯ ಕರಡು ಪ್ರತಿ ಸಿದ್ಧವಾಗಿದೆ. ಕರಡು ಪ್ರಸ್ತಾವನೆಯನ್ನು ಮಾಡೆರ್ನಾ ಕಂಪನಿ, ಅಮೆರಿಕಕ್ಕೆ ನೀಡಿದೆ. ಲಸಿಕೆ ಸೈಡ್ ಎಫೆಕ್ಟ್​ ವಿರುದ್ಧ ಕೋರ್ಟ್​ ಕೇಸ್​ನಿಂದ ರಕ್ಷಣೆ, ಭಾರತ ಸರ್ಕಾರದ ಕರಡು ಪ್ರಸ್ತಾವದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಮಾಡೆರ್ನಾ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಒಪ್ಪಿಗೆ ಸಿಕ್ಕ ಬಳಿಕ ಭಾರತಕ್ಕೆ ಮಾಡೆರ್ನಾ ಕಂಪನಿ ಲಸಿಕೆ ರಫ್ತು ಆಗಲಿದೆ.

ಪ್ರಾರಂಭದಲ್ಲಿ ಭಾರತಕ್ಕೆ 70 ಲಕ್ಷ ಡೋಸ್​ ಲಸಿಕೆ ರಫ್ತು ಮಾಡಲಾಗುತ್ತದೆ. ವಿದೇಶಿ ಕಂಪನಿಗಳ ಲಸಿಕೆಗೆ ಕೋರ್ಟ್​ ಕೇಸ್​ನಿಂದ ರಕ್ಷಣೆ ಸಿಕ್ಕರೆ, ಮಾಡೆರ್ನಾ ಲಸಿಕೆಗೆ ಭಾರತಕ್ಕೆ ತಕ್ಕಂತೆ ಕೋರ್ಟ್​ ಕೇಸ್​ನಿಂದ ರಕ್ಷಣೆ ಭರವಸೆ ಸಿಕ್ಕರೆ ಫೈಜರ್, ಜಾನ್ಸನ್ ಅಂಡ್ ಜಾನ್ಸನ್​ ಕಂಪನಿಗೂ ನೀಡಲಾಗುತ್ತದೆ. ನಂತರ ಉಳಿದ ವಿದೇಶಿ ಕಂಪನಿಗಳ ಲಸಿಕೆ ಭಾರತಕ್ಕೆ ಪ್ರವೇಶ ಪಡೆಯಲಿವೆ.

ಇದನ್ನೂ ಓದಿ: Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು

Published On - 5:58 pm, Sat, 10 July 21