ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ

India Air Force: ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ.

ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ
ಆಕ್ಸಿಜನ್ ಕಂಟೇನರ್
Follow us
ರಶ್ಮಿ ಕಲ್ಲಕಟ್ಟ
|

Updated on:May 03, 2021 | 3:35 PM

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಆಕ್ಸಿಜನ್ ಕೊರತೆಯೂ ತೀರ್ವವಾಗಿ ಕಾಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್​ಫರ್ಟ್​ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ. ಅದೇ ವೇಳೆ ಬ್ರಿಟನ್​ನ ಬ್ರೈಜ್  ನಾರ್ಟನ್​ ನಿಂದ  450 ಆಕ್ಸಿಜನ್ ಸಿಲಿಂಡರ್​ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ತಂದಿದೆ.

 ಇದರ ಜತೆಗೆ ಸಿ-17 ಎರಡು ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್​ಗಳನ್ನು ಚಂಢೀಗಡದಿಂದ ಭುವನೇಶ್ವರಕ್ಕೆ, ಎರಡು ಕಂಟೇನರ್​ಗಳನ್ನು ಜೋಧಾಪುರ್​ನಿಂದ ಜಾಮ್​ನಗರ್​ಗೆ, ಎರಡು ಸಿಲಿಂಡರ್​ಗಳನ್ನು ಹಿಂಡನ್​ನಿಂದ ರಾಂಚಿಗೆ,  ಇಂದೋರ್​ನಿಂದ ಜಾಮ್​ನಗರಕ್ಕೆ,  ಹಿಂಡನ್​ನಿಂದ ಭುವನೇಶ್ವರಕ್ಕೆ  ತಲಾ ಎರಡು ಕಂಟೇನರ್​  ಗಳನ್ನು ಸಾಗಿಸಲಾಗದೆ ಎಂದು ಭಾರತೀಯ ವಾಯುಪಡೆ  ಹೇಳಿದೆ.

ಸಿ-17 ಸಾಗಾಣಿಕೆ ವಿಮಾನವು ಸಿಂಗಾಪೂರ್​ನಿಂದ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನು ತರಲು ಸಿದ್ಧತೆ ನಡೆಸಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಐಎಎಫ್ ಸಿ 17 ಸಾಗಾಣಿಕೆ ವಿಮಾನವು  ಸಿಂಗಾಪುರ್​ನಿಂದ ಖಾಲಿ ಆಕ್ಸಿಜನ್ ಕಂಟೇನರ್ ಗಳನ್ನು ಏರ್​ ಲಿಫ್ಟ್ ಮಾಡಲಿದೆ. ಆಕ್ಸಿಜನ್  ಪೂರೈಕೆ ಮಾಡಲು  ವಾಯುಪಡೆ ವಿಮಾನ ಬಳಸಲಾಗುತ್ತಿದೆ. ಗೃಹ ಸಚಿವಾಲಯವು ಇದರ ಉಸ್ತುವಾರಿ ವಹಿಸಿದೆ ಎಂದು ಗೃಹ ಇಲಾಖೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಎಚ್ಚೆತ್ತ ಸರ್ಕಾರದಿಂದ ಆಕ್ಸಿಜನ್ ಪೂರೈಕೆ ಬಗ್ಗೆ ಮಹತ್ವದ ಆದೇಶ

ತೆಲಂಗಾಣ: ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

(COVID 19 crisis in the country India Air Force C-17 aircraft Airlifts Oxygen Containers From Germany UK)

Published On - 3:19 pm, Mon, 3 May 21