ತಮಿಳುನಾಡಿನಲ್ಲಿ ಹೆಚ್ಚುತ್ತಿದೆ ಕೊವಿಡ್ ಪಿಡುಗು; ಸರಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಡಿಎಂಕೆ ನಾಯಕ ಸ್ಟಾಲಿನ್ ಒಲವು

‘ನಮ್ಮ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ ತಮಿಳುನಾಡಿನ ಜನರಿಗೆ ನಾನು ಅಭಾರಿಯಾಗಿದ್ದೇನೆ. ಚುನಾವಣಾ ಆಶ್ವಾಸನೆಗಳನ್ನು ಕ್ರಮೇಣ ಒಂದೊಂದಾಗಿ ಈಡೇರಿಸುತ್ತೇವೆ’ ಎಂದು ಸ್ಟಾಲಿನ್ ಹೇಳಿದರು.

ತಮಿಳುನಾಡಿನಲ್ಲಿ ಹೆಚ್ಚುತ್ತಿದೆ ಕೊವಿಡ್ ಪಿಡುಗು; ಸರಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಡಿಎಂಕೆ ನಾಯಕ ಸ್ಟಾಲಿನ್ ಒಲವು
ಎಂ.ಕೆ. ಸ್ಟಾಲಿನ್​

ಚೆನ್ನೈ: ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಸ್ಪಷ್ಟ ಬಹುಮತ ಪಡೆದಿದೆ. ಪಕ್ಷದ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ಎಂ.ಕೆ.ಸ್ಟಾಲಿನ್ ಈ ಗೆಲುವು ನೀಡಿದ ಜನರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಶೀಘ್ರವೇ ನಡೆಯಲಿದೆ. ಈ ಬಾರಿ ಕೊರೊನಾ ಪಿಡುಗಿನ 2ನೇ ಅಲೆ ವ್ಯಾಪಿಸಿರುವುದರಿಂದ ಸರಳ ರೀತಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಯೋಜಿಸಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.

‘ನಮ್ಮ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ ತಮಿಳುನಾಡಿನ ಜನರಿಗೆ ನಾನು ಅಭಾರಿಯಾಗಿದ್ದೇನೆ. ಚುನಾವಣಾ ಆಶ್ವಾಸನೆಗಳನ್ನು ಕ್ರಮೇಣ ಒಂದೊಂದಾಗಿ ಈಡೇರಿಸುತ್ತೇವೆ’ ಎಂದು ಸ್ಟಾಲಿನ್ ಹೇಳಿದರು. ‘ಪಕ್ಷವು ಮಂಗಳವಾರ (ಮೇ 4) ನೂತನ ಶಾಸಕರ ಸಭೆ ಕರೆದು, ಸಭಾನಾಯಕನನ್ನು ಅಧಿಕೃತವಾಗಿ ಆಯ್ಕೆ ಮಾಡಲಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಸ್ಟಾಲಿನ್ ನುಡಿದರು.

ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತ ನಡೆಸಲು ಬೇಕಾದ ಸರಳ ಬಹುಮತಕ್ಕೆ 118 ಸ್ಥಾನಗಳು ಬೇಕು. ಡಿಎಂಕೆ 128 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಿದೆ. ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಡಿಎಂಕೆ ಪಕ್ಷವು 65 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಡಿಎಂಕೆಯ ಮೈತ್ರಿ ಪಕ್ಷ ಬಿಜೆಪಿ 2 ಸ್ಥಾನಗಳಲ್ಲಿ ಗೆದ್ದಿದೆ. ಒಟ್ಟು 228 ಕ್ಷೇತ್ರಗಳ ಫಲಿತಾಂಶ ಈವರೆಗೆ (ಮೇ 3, ಮಧ್ಯಾಹ್ನ 2 ಗಂಟೆ) ಘೋಷಣೆಯಾಗಿದೆ. ಮತಹಂಚಿಕೆಯ ವಿವರ ನೋಡುವುದಾದರೆ, ಡಿಎಂಕೆ ಶೇ 37.7ರಷ್ಟು ಮತಗಳನ್ನು ಪಡೆದುಕೊಂಡಿದ್ದರೆ, ಎಐಎಡಿಎಂಕೆ ಶೇ 33.3ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ.

Tamilnadu-Assembly-Poll

ತಮಿಳುನಾಡು ಚುನಾವಣೆ ಫಲಿತಾಂಶ ವಿವರ

(Tamilnadu Assembly Elections Result swearing in ceremony will be simple says Stalin after DMK wins)

ಇದನ್ನೂ ಓದಿ: ಸೋಲುಗಳು ಜೀವನದ ಒಂದು ಭಾಗ, ಇಂಥ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ ಟ್ವೀಟ್

ಇದನ್ನೂ ಓದಿ: ಚಿರಕಾಲದ ಮಿತ್ರನ ಗೆಲುವಿನಿಂದ ಸಂತಸವಾಗಿದೆ; ಸ್ಟಾಲಿನ್ ಗೆಲುವಿಗೆ ಅಭಿನಂದಿಸಿದ ರಜಿನಿಕಾಂತ್

Click on your DTH Provider to Add TV9 Kannada