ಕೊವಿಡ್ ಲಸಿಕೆ ಸಿದ್ಧಪಡಿಸಲು ಹೊಸ ನಿರ್ದೇಶನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಆರೋಪ ಸರಿಯಲ್ಲ: ಆರೋಗ್ಯ ಸಚಿವಾಲಯ

Covid 19 Vaccine: ಕೊವಾಕ್ಸಿನ್ ಲಸಿಕೆ ಪೂರೈಕೆಗಾಗಿ 2 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ್ದು ಮೇ 3 ರವರೆಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ. ಆದ್ದರಿಂದ ಸರ್ಕಾರವು ಹೊಸ ಆದೇಶಗಳನ್ನು ನೀಡಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೊವಿಡ್ ಲಸಿಕೆ ಸಿದ್ಧಪಡಿಸಲು ಹೊಸ ನಿರ್ದೇಶನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಆರೋಪ ಸರಿಯಲ್ಲ: ಆರೋಗ್ಯ ಸಚಿವಾಲಯ
ಕೊವಿಡ್ ಲಸಿಕೆ
Follow us
ರಶ್ಮಿ ಕಲ್ಲಕಟ್ಟ
|

Updated on:May 03, 2021 | 4:17 PM

ದೆಹಲಿ: ಕೊವಿಡ್ ಲಸಿಕೆ ಸಿದ್ಧಪಡಿಸುವ ಕಂಪನಿಗಳಿಗೆ ಹೆಚ್ಚಿನ ಲಸಿಕೆ ಸಿದ್ಧಪಡಿಸಲು ಹೊಸ ನಿರ್ದೇಶನವನ್ನು ನೀಡಿಲ್ಲ ಎಂಬ ಮಾಧ್ಯಮಗಳ ಆರೋಪ ಸತ್ಯಕ್ಕೆ ದೂರವಾದುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.ಎರಡು ಲಸಿಕೆ ತಯಾರಕರೊಂದಿಗೆ (ಎಸ್‌ಐಐನೊಂದಿಗೆ 100 ಮಿಲಿಯನ್ ಡೋಸ್ ಮತ್ತು ಭಾರತ್ ಬಯೋಟೆಕ್‌ನೊಂದಿಗೆ 20 ಮಿಲಿಯನ್ ಡೋಸ್) ಲಸಿಕೆ ತಯಾರಿಸಲು ಕೊನೆಯ ನಿರ್ದೇಶನವನ್ನು ಮಾರ್ಚ್ 2021 ರಲ್ಲಿ ನೀಡಲಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ ಈ ಮಾಧ್ಯಮ ವರದಿಗಳು ಸಂಪೂರ್ಣವಾಗಿ ತಪ್ಪು ಮತ್ತು ಸತ್ಯಕ್ಕೆ ದೂರವಾದದು  ಎಂದು ಕೇೆಂದ್ರ ಸಚಿವಾಲಯ ಸೋಮವಾರ  ಪ್ರಕಟಿಸಿದ  ಪ್ರಕಟಣೆಯಲ್ಲಿ ಹೇಳಿದೆ.

ಕೊವಿಶೀಲ್ಡ್ ಲಸಿಕೆಯ 10 ಕೋಟಿ ಡೋಸ್‌ಗಳಿಗಾಗಿ  ಕೊನೆಯ ನಿರ್ದೇಶನದ ನೀಡಿದ್ದು ಮೇ 3 ರವರೆಗೆ 8.744 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ 11 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಗಾಗಿ ಏಪ್ರಿಲ್ 28 ರಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಗೆ 1732.50 ಕೋಟಿ ರೂ. (ಟಿಡಿಎಸ್ ರೂ. 1699.50 ಕೋಟಿ)  ಹಣವನ್ನು ನೀಡಲಾಗಿದೆ .

ಹೆಚ್ಚುವರಿಯಾಗಿ, ಮೇ, ಜೂನ್ ಮತ್ತು ಜುಲೈನಲ್ಲಿ ಐದು ಕೋಟಿ ಕೊವಾಕ್ಸಿನ್ ಡೋಸ್ ಗಳಿಗೆ ಏಪ್ರಿಲ್ 28 ರಂದು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ (ಬಿಬಿಐಎಲ್) ಗೆ 787.50 ಕೋಟಿ (772.50 ಕೋಟಿ ಟಿಡಿಎಸ್) ನೀಡಲಾಗಿದೆ.

ಕೊವಾಕ್ಸಿನ್ ಲಸಿಕೆ ಪೂರೈಕೆಗಾಗಿ 2 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ್ದು ಮೇ 3 ರವರೆಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ. ಆದ್ದರಿಂದ ಸರ್ಕಾರವು ಹೊಸ ಆದೇಶಗಳನ್ನು ನೀಡಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

2021 ರ ಮೇ 2 ರ ಹೊತ್ತಿಗೆ, ಭಾರತ ಸರ್ಕಾರವು 16.54 ಕೋಟಿ ಡೋಸ್ ಲಸಿಕೆ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ವಹಿಸಲು ಇನ್ನೂ 78 ಲಕ್ಷಕ್ಕೂ ಹೆಚ್ಚು ಡೋಸ್ ಗಳು ಲಭ್ಯವಿದೆ. ಹೆಚ್ಚುವರಿಯಾಗಿ 56 ಲಕ್ಷ ಡೋಸ್​ಗಳು , ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿದೆ ಎಂದು ಸಚಿವಾಲಯ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೊವಿಡ್ -19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ, ತಿಂಗಳಿಗೊಮ್ಮೆ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ತೆರವುಗೊಳಿಸಿದ ಲಸಿಕೆಗಳ ಶೇಕಡಾ 50 ರಷ್ಟು ಪಾಲನ್ನು ಸರ್ಕಾರವು ಪಡೆದುಕೊಳ್ಳುವುದನ್ನು ಮುಂದುವರಿಸುತ್ತದೆ. ಈ ಮೊದಲಿನಂತೇಯೇ ಅವುಗಳು ಉಚಿತವಾಗಿ ರಾಜ್ಯಕ್ಕೆ ಲಭ್ಯವಾಗುವಂತೆ ಮಾಡುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರದ  ಪ್ರಕಟಣೆಯಲ್ಲಿ ಹೇಳಿದ್ದು ಸರಿ, ಅದನ್ನು ನಾವು ಒಪ್ಪುತ್ತೇವೆ.ಕಳೆದ ಒಂದು ವರ್ಷದಿಂದ ನಾವು  ಭಾರತ ಸರ್ಕಾರದೊಂದಿಗೆ ಕೆಲ ಸ ಮಾಡುತ್ತಿದ್ದು, ಅವರ ಬೆಂಬಲಕ್ಕೆ ಧನ್ಯವಾದಗಳನ್ನು ಹೇಳುತ್ತೇವೆ. ಪ್ರತಿಯೊಂದು ಜೀವ ಉಳಿಸಲು ನಾವು ಬಂಧರಾಗಿದ್ದು, ನಾವು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

ಇದನ್ನೂ ಓದಿ:  ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ಜುಲೈವರೆಗೆ ಮುಂದುವರಿಯಲಿದೆ: ಆಧಾರ್ ಪೂನಾವಾಲಾ

(Media reports alleging that the Centre has not placed any fresh order for COVID19 vaccines are incorrect Health Ministry)

Published On - 4:16 pm, Mon, 3 May 21