ದೆಹಲಿ: ಕೊವಿಡ್ -19 ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾದ ಕಾರಣ ಅವರಿಗೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಶುಕ್ರವಾರ ಹೇಳಿದ್ದಾರೆ. ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿದೆ. ಗರ್ಭಿಣಿ ಮಹಿಳೆಯರಿಗೆ ವ್ಯಾಕ್ಸಿನೇಷನ್ ಉಪಯುಕ್ತವಾಗಿದೆ,ಅದನ್ನು ನೀಡಬೇಕು ಎಂದು ಅವರು ಹೇಳಿದರು.
ದೇಶದ ಕೊವಿಡ್ -19 ಪರಿಸ್ಥಿತಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರ್ಗವ, ಕೇವಲ ಒಂದು ದೇಶ ಮಾತ್ರ ಮಕ್ಕಳಿಗೆ ಕೋವಿಡ್ -19 ಲಸಿಕೆ ನೀಡುತ್ತಿದೆ. 2-18 ವಯಸ್ಸಿನ ಮಕ್ಕಳ ಬಗ್ಗೆ ಸಣ್ಣ ಅಧ್ಯಯನವನ್ನು ನಡೆಸಲಾಗಿದ್ದು, ಸೆಪ್ಟೆಂಬರ್ ವೇಳೆಗೆ ಫಲಿತಾಂಶಗಳು ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
There’s only one country that’s giving vaccine to children at the moment. Whether very small children will ever need vaccine, is still a question. Till such time, we’ve more data on vaccination of children, we won’t be in a position to vaccinate children at large: DG, ICMR pic.twitter.com/KTaYq1KI6B
— ANI (@ANI) June 25, 2021
ತೀರಾ ಸಣ್ಣ ಮಕ್ಕಳಿಗೆ ಲಸಿಕೆ ಅಗತ್ಯವಿದೆಯೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಭಾರ್ಗವ ಹೇಳಿದರು. ಅಲ್ಲಿಯವರೆಗೆ ನಾವು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಡೇಟಾವನ್ನು ಹೊಂದಿರುತ್ತೇವೆ, ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಕೊವಿಡ್ -19 ವಿರುದ್ಧ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಹಾಕುವ ಮಾರ್ಗಸೂಚಿಗಳನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ. ಪ್ರಸ್ತುತ, ಭಾರತದಲ್ಲಿ ಹಾಲುಣಿಸುವ ಮಹಿಳೆಯರಿಗೆ ಮಾತ್ರ ಕೊವಿಡ್ -19 ಲಸಿಕೆ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ.
However, we have started a small study on children b/w the age of 2-18 yrs & we shall have results of that by Sept or so. However, int’l jury is still not out & they’re still debating whether children need to be vaccinated. We’ve seen some complications in the US: Balram Bhargava
— ANI (@ANI) June 25, 2021
ಐಸಿಎಂಆರ್ ಇತ್ತೀಚಿನ ಅಧ್ಯಯನವೊಂದರಲ್ಲಿ ಗರ್ಭಿಣಿ ಮತ್ತು ಪ್ರಸವನಂತರದ ಮಹಿಳೆಯರು ಭಾರತದ ಎರಡನೇ ಕೊವಿಡ್ -19 ಅಲೆಯಲ್ಲಿ ಮೊದಲಿಗಿಂತ ಹೆಚ್ಚು ತೀವ್ರ ಪರಿಣಾಮಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವರ್ಷ ಸಾವಿನ ಪ್ರಮಾಣ ಮತ್ತು ರೋಗಲಕ್ಷಣದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ.
ಇದನ್ನೂ ಓದಿ: Delta Plus variant ದೇಶದಲ್ಲಿ 50 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು: ಕೇಂದ್ರ ಸರ್ಕಾರ
(Covid-19 vaccine should be given to pregnant women as it is useful for them says ICMR Director-General Dr Balram Bhargava)
Published On - 7:16 pm, Fri, 25 June 21