Covid 19 Booster Dose: ಬೂಸ್ಟರ್ ಡೋಸ್​ಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ: ಶೇಖರ್ ಮಾಂಡೆ

|

Updated on: Apr 03, 2023 | 10:38 AM

ಕೋವಿಡ್ ಬೂಸ್ಟರ್ ಡೋಸ್​(Covid Booster Dose) ಗಳನ್ನು ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಹೇಳಿದ್ದಾರೆ.

Covid 19 Booster Dose: ಬೂಸ್ಟರ್ ಡೋಸ್​ಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ: ಶೇಖರ್ ಮಾಂಡೆ
ಕೋವಿಡ್ ಬೂಸ್ಟರ್ ಡೋಸ್
Image Credit source: Live Law
Follow us on

ಕೋವಿಡ್ ಬೂಸ್ಟರ್ ಡೋಸ್​ (Booster Dose) ಗಳನ್ನು ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಹೇಳಿದ್ದಾರೆ. ಕೋವಿಡ್ ಬೂಸ್ಟರ್​ ಡೋಸ್​ಗಳ ಕುರಿತು ಇರುವ ವೈಜ್ಞಾನಿಕ ಪುರಾವೆಗಳು ದುರ್ಬಲವಾಗಿವೆ. ಹಾಗಾಗಿ ಬೂಸ್ಟರ್ ಡೋಸ್​ಗಳನ್ನು ತೆಗೆದುಕೊಳ್ಳುವುದು ತುಂಬಾ ಸಹಾಯಕವಾಗುವುದಿಲ್ಲ ಎಂದು ಹೇಳಿದ್ದಾರೆ. ಈಗ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಬಯೋಇನ್ಫರ್ಮ್ಯಾಟಿಕ್ಸ್ ಸೆಂಟರ್‌ನಲ್ಲಿ ಪ್ರತಿಷ್ಠಿತ ಪ್ರಾಧ್ಯಾಪಕರಾಗಿರುವ ಮಾಂಡೆ ಅವರು ಕೋವಿಡ್ ಪ್ರಕರಣಗಳ ಉಲ್ಬಣವು ಹೊಸ ರೂಪಾಂತರ ದಿಂದ ಉಂಟಾಗಿದೆ ಎಂದು ಹೇಳಿದರು.

ನಮ್ಮ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರಬಹುದು, ಅಥವಾ ಕೊರೊನಾ ರೂಪಾಂತರಗೊಂಡಿರಬಹುದು ಅದೇನೇ ಇರಲಿ, ಹಿಂದಿನ ಅಲೆಗಳಲ್ಲಿದ್ದಷ್ಟು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಾಗಲಿ ಅಥವಾ ಸಾವಾಗಲಿ ಹೆಚ್ಚಾಗುವುದಿಲ್ಲ, ಈ ಉಲ್ಬಣವು ಮೊದಲ ಅಥವಾ ವಿನಾಶಕಾರಿ ಎರಡನೇ (ಡೆಲ್ಟಾ) ಅಲೆಯಂತೆ ಆಗುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯಿಂದ ಆಣ್ವಿಕ ಬಯೋಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪಡೆದಿರುವ ಮಾಂಡೆ, ಸಾಮಾನ್ಯ ಮುನ್ನೆಚ್ಚರಿಕೆಗಳು ಒಂದೇ ಆಗಿವೆ ಮತ್ತು ಬೂಸ್ಟರ್ ಬಗ್ಗೆ ಲಕ್ಷ್ಯ ಕೊಡದೇ ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಓಡಾಡದೇ ಇರುವುದು, ಮನೆಯಲ್ಲಿ ಶುದ್ಧ ಗಾಳಿಯನ್ನು ಸೇವಿಸುವುದರಿಂದ ಸೋಂಕಿನಿಂದ ದೂರ ಇರಬಹುದು.

ಮತ್ತಷ್ಟು ಓದಿ: India Covid Cases: ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ, 24 ಗಂಟೆಗಳಲ್ಲಿ 3,823 ಹೊಸ ಪ್ರಕರಣಗಳು ಪತ್ತೆ

ಭಾರತದಾದ್ಯಂತ ಕೋವಿಡ್ -19 ನ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ, ಇದು ಭಾನುವಾರ ಬೆಳಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ 3,824 ಕ್ಕೂ ಹೆಚ್ಚು ಹೊಸ ಸೋಂಕುಗಳನ್ನು ದಾಖಲಿಸಿದೆ.

ಇದು 184 ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿನ ಅತಿದೊಡ್ಡ ಜಿಗಿತವಾಗಿದೆ. ಇದರೊಂದಿಗೆ, ಭಾನುವಾರ ಬಿಡುಗಡೆಯಾದ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಕ್ರಿಯ ಪ್ರಕರಣಗಳು 18,389 ಕ್ಕೆ ಏರಿಕೆಯಾಗಿದೆ.
ಭಾರತದ ಕೋವಿಡ್ ಸಂಖ್ಯೆ 4.47 ಕೋಟಿ (4,47,22,605) ಆಗಿದ್ದು, ಐದು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,30,881 ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ ದೆಹಲಿ, ಹರಿಯಾಣ, ಕೇರಳ ಮತ್ತು ರಾಜಸ್ಥಾನದಿಂದ ತಲಾ ಒಂದು ಸಾವು ವರದಿಯಾಗಿದೆ.