Co-Winನ್ನು ಇತರ ದೇಶಗಳೊಂದಿಗೆ ಹಂಚಲು ಭಾರತ ಸಿದ್ಧ: ಈ ಪೋರ್ಟಲ್‌ನಲ್ಲಿ ನೀವು ಏನೇನು ಮಾಡಬಹುದು?

| Updated By: ರಶ್ಮಿ ಕಲ್ಲಕಟ್ಟ

Updated on: Jul 04, 2021 | 7:07 PM

CoWIN Global Conclave: ಕೋ-ವಿನ್‌ನ ಪೂರ್ಣ ರೂಪ- ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ವರ್ಕ್(Covid Vaccine Intelligence Work).ಕೊವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗ ಇದನ್ನು ಕೇಂದ್ರ ಸರ್ಕಾರವು ಜನವರಿಯಲ್ಲಿ ಪರಿಚಯಿಸಿತು

Co-Winನ್ನು ಇತರ ದೇಶಗಳೊಂದಿಗೆ ಹಂಚಲು ಭಾರತ ಸಿದ್ಧ: ಈ ಪೋರ್ಟಲ್‌ನಲ್ಲಿ ನೀವು ಏನೇನು ಮಾಡಬಹುದು?
ಕೊವಿನ್ ಪೋರ್ಟಲ್ (ಪ್ರಾತಿನಿಧಿಕ ಚಿತ್ರ)
Follow us on

ಕೇಂದ್ರವು ಜುಲೈ 5 ರಂದುಕೇಂದ್ರ ಸರ್ಕಾರ  ಕೊ-ವಿನ್  ಜಾಗತಿಕ ಸಮಾವೇಶವನ್ನು (CoWIN Global Conclave ) ನಡೆಸಲಿದ್ದು, ಈ ತಾಣದ ಮೂಲಕ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತಿದೆ ಎಂಬುದನ್ನು ಹಂಚಿಕೊಳ್ಳಲಿದೆ. ಇದು ಭಾರತದ ವ್ಯಾಕ್ಸಿನೇಷನ್ ಡ್ರೈವ್‌ನ ‘ಟೆಕ್ ಬೆನ್ನೆಲುಬು’ ಆಗಿದೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನು ಇತರ ದೇಶಗಳೊಂದಿಗೆ ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಿರುವ ಕಾರಣ ಜಗತ್ತಿನಾದ್ಯಂತದ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೆನಡಾ, ಮೆಕ್ಸಿಕೊ, ಪನಾಮ, ಪೆರು, ಅಜೆರ್ಬೈಜಾನ್, ಉಕ್ರೇನ್, ನೈಜೀರಿಯಾ, ಉಗಾಂಡಾ, ವಿಯೆಟ್ನಾಂ, ಇರಾಕ್, ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಒಟ್ಟು 50 ದೇಶಗಳು ಕೋ-ವಿನ್ ಪ್ಲಾಟ್‌ಫಾರ್ಮ್ ಬಗ್ಗೆ ತಿಳಿದುಕೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿವೆ.

ಕೋ-ವಿನ್ ಸಹಾಯದಿಂದ ನೀವು ಏನೇನು ಮಾಡಬಹುದು?
ಕೋ-ವಿನ್‌ನ ಪೂರ್ಣ ರೂಪ- ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ವರ್ಕ್(Covid Vaccine Intelligence Work).ಕೊವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗ ಇದನ್ನು ಕೇಂದ್ರ ಸರ್ಕಾರವು ಜನವರಿಯಲ್ಲಿ ಪರಿಚಯಿಸಿತು. ಇದು ಫಲಾನುಭವಿಗಳಿಗೆ ಒಂದು ವೆಬ್‌ಸೈಟ್ ಮತ್ತು ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಬೇರೆ ಮೊಬೈಲ್ ಅಪ್ಲಿಕೇಶನ್ ಇದೆ.

ನೋಂದಣಿ, ಲಸಿಕೆ ಸ್ಲಾಟ್ ಬುಕಿಂಗ್
ಒಬ್ಬರ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿಕೊಳ್ಳುತ್ತಾ, ಕೊ-ವಿನ್‌ನಲ್ಲಿ ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ಬುಕ್ ಮಾಡಬಹುದು. Cowin.gov.in ನಲ್ಲಿ ಮೊದಲಿನ ನೋಂದಣಿ ಇನ್ನು ಮುಂದೆ ಕಡ್ಡಾಯವಲ್ಲ, ಆದರೆ ಈ ಸೈಟ್‌ನಲ್ಲಿ ನೋಂದಣಿ ಕಡ್ಡಾಯವಾಗಿ ಉಳಿದಿದೆ. ಆದ್ದರಿಂದ ಪ್ರತಿ ವ್ಯಾಕ್ಸಿನೇಷನ್ ದಾಖಲಿಸಲ್ಪಡುತ್ತದೆ.


ಪ್ರಮಾಣಪತ್ರ ಡೌನ್‌ಲೋಡ್
ಕೊ-ವಿನ್‌ನಲ್ಲಿನ ಒಬ್ಬರ ಖಾತೆಯಿಂದ, ವ್ಯಾಕ್ಸಿನೇಷನ್ ನಂತರ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು. ಇದು ಮುಂದಿನ ದಿನಗಳಲ್ಲಿ ನಿರ್ಣಾಯಕ ಪ್ರಯಾಣದ ದಾಖಲೆಯಾಗಿ ಇದು ಪರಿಗಣಿಸಲಾಗುತ್ತದೆ. ವ್ಯಾಕ್ಸಿನೇಷನ್‌ನ ಮಾನ್ಯ ಪುರಾವೆಯಾಗಿ ಕೊ-ವಿನ್ ಪ್ರಮಾಣಪತ್ರವನ್ನು ಇತರ ದೇಶಗಳು ಸಹ ಗುರುತಿಸಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ವ್ಯಕ್ತಪಡಿಸಿದೆ.

ಪ್ರಮಾಣಪತ್ರವನ್ನು ಎಡಿಟ್ ಮಾಡಬಹುದು
ಲಸಿಕೆ ಪ್ರಮಾಣಪತ್ರದಲ್ಲಿ ಯಾವುದೇ ದೋಷವನ್ನು ಎಡಿಟ್ ಮಾಡುವ ಆಯ್ಕೆಯನ್ನು ವೇದಿಕೆ ಈಗ ಒದಗಿಸುತ್ತದೆ.

ಪಾಸ್ ಪೋರ್ಟ್ ವಿವರಗಳನ್ನು ಪ್ರಮಾಣಪತ್ರಕ್ಕೆ ಸೇರಿಸಬಹುದು
ವಿದೇಶ ಪ್ರವಾಸ ಮಾಡಲು ಯೋಜಿಸುತ್ತಿರುವ ಭಾರತೀಯರಿಗೆ ಅನುಕೂಲವಾಗುವಂತೆ, ವೇದಿಕೆಯು ಈಗ ಒಬ್ಬರ ಪಾಸ್‌ಪೋರ್ಟ್ ಅನ್ನು ಕೊವಿಡ್ -19 ಲಸಿಕೆ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡುವ ಆಯ್ಕೆಯನ್ನು ನೀಡುತ್ತದೆ.

ಪ್ರಮಾಣ ಪತ್ರಗಳ ಸಮ್ಮಿಳನ
ಒಂದು ವೇಳೆ ಫಲಾನುಭವಿಗಳು ಎರಡು ವಿಭಿನ್ನ ಫೋನ್ ಸಂಖ್ಯೆಗಳಿಂದ ಎರಡು ಡೋಸ್‌ಗಳನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಎರಡು ವಿಭಿನ್ನ ಪ್ರಮಾಣಪತ್ರಗಳನ್ನು ಪಡೆದಿದ್ದರೆ, ಅವರು ಈಗ ಈ ಎರಡು ಪ್ರಮಾಣಪತ್ರಗಳನ್ನು ಸಮ್ಮಿಳನ (Merge) ಮಾಡಿಕೊಳ್ಳಬಹುದು.

ಇದನ್ನೂ ಓದಿ: Digital India: ಆರೋಗ್ಯ ಸೇತು, ಕೊವಿನ್ ಆ್ಯಪ್​ಗಳು ಡಿಜಿಟಲ್​ ಇಂಡಿಯಾದ ಹೆಗ್ಗಳಿಕೆ..ಜಗತ್ತಿನ ಗಮನ ಸೆಳೆದಿವೆ: ಪ್ರಧಾನಿ ಮೋದಿ

(Covid Vaccine Intelligence Work Here is all you can do with the help of Co-Win)