ಸಲೈನ್ನಿಂದ ಬಾಯಿ ಮುಕ್ಕಳಿಸಿ ಆರ್ಟಿಪಿಸಿಆರ್ ಪರೀಕ್ಷೆ; ವಿಧಾನ ಯಾವುದು? ಹೇಗೆ?
Saline Gargle RT-PCR Testing: ಸಲೈನ್ ಬಾಯಿ ಮುಕ್ಕಳಿಸುವ ವಿಧಾನವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ. ಇದು ಸರಳ, ವೇಗದ, ರೋಗಿ ಸ್ನೇಹಿ ಮತ್ತು ಆರಾಮದಾಯಕವಾಗಿದೆ. ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಡಿಯಲ್ಲಿ ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (NEERI) ವಿಜ್ಞಾನಿಗಳು ಕೊವಿಡ್ -19 ಮಾದರಿಗಳನ್ನು ಪರೀಕ್ಷಿಸಲು ‘Saline Gargle RT-PCR Method’ ‘ ಪರಿಚಯಿಸಿದ್ದಾರೆ. ಮೂಗಿನ ಮತ್ತು ಗಂಟಲಿನ ಸ್ವ್ಯಾಬ್‌ಗಳನ್ನು ನೀಡಲು ಹೆದರುವವರಿಗೆ ಈ ಪರೀಕ್ಷೆಯು ಸಮಾಧಾನಕರವಾಗಿರುತ್ತದೆ.
ಏನಿದರ ವೈಶಿಷ್ಟ್ಯ? ಸಲೈನ್ (ಲವಣಯುತ್ತ ದ್ರಾವಕ) ಬಾಯಿ ಮುಕ್ಕಳಿಸುವ ವಿಧಾನವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ. ಇದು ಸರಳ, ವೇಗದ, ರೋಗಿ ಸ್ನೇಹಿ ಮತ್ತು ಆರಾಮದಾಯಕವಾಗಿದೆ. ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಕನಿಷ್ಠ ಮೂಲಸೌಕರ್ಯ ಅಗತ್ಯತೆಗಳಿರುವ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಿಗೆ ಸೂಕ್ತವಾಗಿರುತ್ತದೆ. ಪಿಇಬಿಯೊಂದಿಗೆ ಮಾತನಾಡಿದ, ಎನ್ಇಇಆರ್ ಐ ಪರಿಸರ ವೈರಾಲಜಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಕೃಷ್ಣ ಖೈರ್ನರ್ “ಸ್ವ್ಯಾಬ್ ಸಂಗ್ರಹ ವಿಧಾನಕ್ಕೆ ಸಮಯ ಬೇಕಾಗುತ್ತದೆ. ಇದಲ್ಲದೆ, ಇದು ಆಕ್ರಮಣಕಾರಿ ತಂತ್ರವಾದ್ದರಿಂದ, ಇದು ರೋಗಿಗಳಿಗೆ ಸ್ವಲ್ಪ ಅನಾನುಕೂಲವಾಗಿದೆ. ಸಂಗ್ರಹ ಕೇಂದ್ರಕ್ಕೆ ಮಾದರಿಯನ್ನು ಸಾಗಿಸುವಾಗಲೂ ಸ್ವಲ್ಪ ಸಮಯ ಕಳೆದುಹೋಗುತ್ತದೆ. ಮತ್ತೊಂದೆಡೆ, ಸಲೈನ್ ಗಾರ್ಗ್ಲ್ ಆರ್ ಟಿ-ಪಿಸಿಆರ್ ವಿಧಾನವು ತ್ವರಿತ, ಆರಾಮದಾಯಕ ಮತ್ತು ರೋಗಿಯ ಸ್ನೇಹಿಯಾಗಿದೆ. ಸ್ಯಾಂಪ್ಲಿಂಗ್ ಅನ್ನು ತ್ವರಿತವಾಗಿ ಮಾಡಲಾಗುತ್ತದೆ ಮತ್ತು 3 ಗಂಟೆಗಳಲ್ಲಿ ಫಲಿತಾಂಶಗಳು ಸಿಗುತ್ತದೆ.
#United2fightCorona@CSIR_NEERI has developed ‘Saline Gargle #RTPCR Method’ for testing #COVID19 samples; you can get the result within 3 hours
Watch Dr. Krishna Khairnar, Senior Scientist, Environmental Virology Cell, NEERI explaining how to use?@IndiaDST@CSIR_IND pic.twitter.com/mxpYTlt7lC
— PIB in Maharashtra ?? (@PIBMumbai) May 28, 2021
ಇದು ಹೇಗೆ ಕಾರ್ಯವೆಸಗುತ್ತದೆ ? ಈ ವಿಧಾನವು ಸರಳವಾಗಿದ್ದು, ರೋಗಿಯು ಸ್ವತಃ ಮಾದರಿಯನ್ನು ಸಂಗ್ರಹಿಸಬಹುದು ಎಂದು ಡಾ ಖೈರ್ನರ್ ವಿವರಿಸುತ್ತಾರೆ. “ಸಂಗ್ರಹ ವಿಧಾನಗಳಿಗೆ ನಾಸೊಫಾರ್ಂಜಿಯಲ್ ಮತ್ತು ಒರೊಫಾರ್ಂಜಿಯಲ್ ಸ್ವ್ಯಾಬ್ ಸಂಗ್ರಹಕ್ಕೆ ತಾಂತ್ರಿಕ ಪರಿಣತಿಯ ಅಗತ್ಯವಿರುತ್ತದೆ; ಅವು ಸಮಯ ತೆಗೆದುಕೊಳ್ಳುವವು. ಆದರೆ ಸಲೈನ್ ಗಾರ್ಗ್ಲ್ ಆರ್ಟಿ-ಪಿಸಿಆರ್ ವಿಧಾನವು ಲವಣಯುಕ್ತ ದ್ರಾವಣದಿಂದ ತುಂಬಿದ ಸರಳ ಸಂಗ್ರಹ ಟ್ಯೂಬ್ ಅನ್ನು ಬಳಸುತ್ತದೆ. ರೋಗಿಯು ದ್ರಾವಣವನ್ನು ಬಾಯಲ್ಲಿ ಮುಕ್ಕಳಿಸಿ ಅದನ್ನು ಕೊಳವೆಯೊಳಗೆ ಉಗುಳಬೇಕಿದೆ “ಎಂದು ಅವರು ಹೇಳಿದರು.
“ಸಂಗ್ರಹಣಾ ಟ್ಯೂಬ್‌ನಲ್ಲಿನ ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ NEERI ಸಿದ್ಧಪಡಿಸಿದ ವಿಶೇಷ ಬಫರ್ ದ್ರಾವಣದಲ್ಲಿ ಕೋಣೆಯ ಉಷ್ಣಾಂಶದಲ್ಲಿಡಲಾಗುತ್ತದೆ. ಈ ದ್ರಾವಣವನ್ನು ಬಿಸಿ ಮಾಡಿದಾಗ ಆರ್‌ಎನ್‌ಎ ಟೆಂಪ್ಲೇಟ್ ಉತ್ಪತ್ತಿಯಾಗುತ್ತದೆ, ಇದನ್ನು ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಗಾಗಿ ಮತ್ತಷ್ಟು ಸಂಸ್ಕರಿಸಲಾಗುತ್ತದೆ (ಆರ್ಟಿ-ಪಿಸಿಆರ್). ಮಾದರಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಈ ನಿರ್ದಿಷ್ಟ ವಿಧಾನವು ಆರ್‌ಎನ್‌ಎ ಹೊರತೆಗೆಯುವಿಕೆಯ ದುಬಾರಿ ಮೂಲಸೌಕರ್ಯದ ಅಗತ್ಯವನ್ನು ಉಳಿಸಲು ನಮಗೆ ಅನುವು ಮಾಡಿಕೊಡುತ್ತದೆ. ಈ ವಿಧಾನವು ಸ್ವಯಂ-ಮಾದರಿಯನ್ನು ಅನುಮತಿಸುವುದರಿಂದ ಜನರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬಹುದು, ”ಎಂದು ಅವರು ಹೇಳಿದರು. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸುವುದರಿಂದ ಈ ವಿಧಾನವು ಪರಿಸರ ಸ್ನೇಹಿಯಾಗಿದೆ.
ಇದನ್ನೂ ಓದಿ: ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ
Published On - 6:02 pm, Fri, 28 May 21