ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ
ಕೊರೊನಾ ರೋಗಿಗಳಿಗೆ ಈ ಔಷಧ ವರದಾನ ಎಂದೇ ಹೇಳಲಾಗಿದೆ. ಅಲ್ಪ ಪ್ರಮಾಣದ ಸಾಧಾರಣ ಲಕ್ಷಣದವರಿಗೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ದೆಹಲಿ: ಕೊವಿಡ್ ಸೋಂಕಿತರ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಇನ್ನು ಮುಂದೆ ಅಪೊಲೊ ಆಸ್ಪತ್ರೆಗಳಲ್ಲಿ ಸಿಗಲಿದೆ. ಸೋಕು ಹೆಚ್ಚು ತೀವ್ರವಾಗಿಲ್ಲದ ಮತ್ತು ಮಧ್ಯಮ ಪ್ರಮಾಣದಲ್ಲಿರುವ ರೋಗಿಗಳಿ ಮಾತ್ರ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡುವುದಾಗಿ ಅಪೊಲೊ ಆಸ್ಪತ್ರೆ ಹೇಳಿದೆ. ರೋಗಿಗಳಿಗೆ ಈ ಔಷಧ ವರದಾನ ಎಂದೇ ಹೇಳಲಾಗಿದೆ. ಅಲ್ಪ ಪ್ರಮಾಣದ ಸಾಧಾರಣ ಲಕ್ಷಣದವರಿಗೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಆರಂಭವಾಗಿತ್ತು. ಇದೀಗ ಅಪೊಲೊ ಆಸ್ಪತ್ರೆಯಲ್ಲಿಯೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಗೆ ₹ 59,750 ಶುಲ್ಕ ನಿಗದಿಪಡಿಸಲಾಗಿದೆ.
ಆಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಳೆದ ವರ್ಷ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಡೋನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಇದೇ ಡ್ರಗ್ಸ್ ನೀಡಲಾಗಿತ್ತು. ಈ ಡ್ರಗ್ಸ್ನ ಪರಿಣಾಮವೋ ಏನೋ ಡೋನಾಲ್ಡ್ ಟ್ರಂಪ್ ಮೂರ್ನಾಲ್ಕು ದಿನಗಳಲ್ಲೇ ಕೊರೊನಾ ನೆಗೆಟಿವ್ ಆಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಅದೇ ಡ್ರಗ್ಸ್ ನಮ್ಮ ಭಾರತಕ್ಕೆ ಬಂದಿದೆ. ಅದು ಯಾವ ಡ್ರಗ್ಸ್ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅದುವೇ ಸ್ವಿಟ್ಜರ್ಲೆಂಡ್ ದೇಶದ ರೋಚೆ ಕಂಪನಿ ಅಭಿವೃದ್ದಿಪಡಿಸಿರುವ ಆ್ಯಂಟಿಬಾಡಿ ಕಾಕ್‌ಟೇಲ್ ಡ್ರಗ್ಸ್, ಕಸಿರಿವಿಮಬ್ ಮತ್ತು ಇಂಡಿವಿಮಬ್ ಎಂಬ ಎರಡು ಡ್ರಗ್ಸ್ಗಳ ಮಿಶ್ರಣದಿಂದ ಆ್ಯಂಟಿಬಾಡಿ ಕಾಕ್‌ಟೇಲ್ ಡ್ರಗ್ಸ್ ಅನ್ನು ತಯಾರಿಸಲಾಗಿದೆ.
ಎರಡು ಔಷಧಿಗಳ ಮಿಶ್ರಣದ ಡ್ರಗ್ಸ್ ಆಗಿರುವುದರಿಂದ ಇದು ಕಾಕ್‌ಟೇಲ್ ಡ್ರಗ್ಸ್. ಇದು ಮನುಷ್ಯರ ದೇಹಗಲ್ಲಿ ಸ್ಪೈಕಡ್ ಪ್ರೋಟೀನ್ ಬೆಳವಣಿಗೆಯನ್ನು ತಡೆಯುತ್ತೆ. ಜೊತೆಗೆ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಹೀಗಾಗಿ ಈ ಡ್ರಗ್ಸ್ ಜಗತ್ತಿನ ವಿವಿಧ ದೇಶಗಳಲ್ಲಿ ಬೇಡಿಕೆ ಇದೆ. ಈಗ ಇದೇ ಡ್ರಗ್ಸ್ ಭಾರತದ ಮಾರುಕಟ್ಟೆಗೂ ಬಂದಿದೆ. ಸಿಪ್ಲಾ ಕಂಪನಿಯು ಭಾರತದಲ್ಲಿ ಇದನ್ನು ಮಾರ್ಕೆಟಿಂಗ್ ಮಾಡುತ್ತಿದೆ. ಭಾರತದಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭಗಳಲ್ಲಿ ಕೊರೊನಾ ರೋಗಿಗಳಿಗೆ ನೀಡಲು ಸಿಡಿಎಸ್‌ಸಿಒ ಒಪ್ಪಿಗೆ ನೀಡಿದೆ. ನಾಳೆಯಿಂದ (ಮೇ 26ರ ಬುಧವಾರದಿಂದ) ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್‌ಟೇಲ್ ಡ್ರಗ್ಸ್ ನೀಡಲಾಗುತ್ತೆ. ಆಮೆರಿಕಾ ಹಾಗೂ ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ಒಪ್ಪಿಗೆ ನೀಡಲಾಗಿದೆ.
(Antibody Cocktail Treatment in Apollo Hospitals for Coronavirus Infection)
Published On - 5:40 pm, Fri, 28 May 21