Covishield Price: ಮುನ್ನೆಚ್ಚರಿಕಾ ಡೋಸ್ ಪಡೆಯುವವರಿಗೆ ಗುಡ್ ನ್ಯೂಸ್​; ಕೊವಿಶೀಲ್ಡ್​, ಕೊವ್ಯಾಕ್ಸಿನ್ ಪ್ರತಿ ಡೋಸ್​ಗೆ 225 ರೂ. ಮಾತ್ರ !

ಭಾರತ್ ಬಯೋಟೆಕ್​​ನ ಸಹ ಸಂಸ್ಥಾಪಕಿ ಸುಚಿತ್ರಾ ಎಲ್ಲ ಕೂಡ ಮಹತ್ವದ ಘೋಷಣೆ ಮಾಡಿದ್ದಾರೆ. ಕೊವ್ಯಾಕ್ಸಿನ್​ ಲಸಿಕೆಯ ದರವನ್ನು ಖಾಸಗಿ ಆಸ್ಪತ್ರೆಗಳಲ್ಲಿ 1200 ರೂ.ದಿಂದ 225 ರೂಪಾಯಿಗೆ ಇಳಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

Covishield Price: ಮುನ್ನೆಚ್ಚರಿಕಾ ಡೋಸ್ ಪಡೆಯುವವರಿಗೆ ಗುಡ್ ನ್ಯೂಸ್​; ಕೊವಿಶೀಲ್ಡ್​, ಕೊವ್ಯಾಕ್ಸಿನ್ ಪ್ರತಿ ಡೋಸ್​ಗೆ 225 ರೂ. ಮಾತ್ರ !
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​
Edited By:

Updated on: Apr 09, 2022 | 4:09 PM

ನಾಳೆಯಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೊವಿಡ್​ 19 ಲಸಿಕೆ 3ನೇ ಡೋಸ್​ ಅಥವಾ ಮುನ್ನೆಚ್ಚರಿಕಾ ಡೋಸ್ ಪಡೆಯಬೇಕಾಗಿದೆ. ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ತಿಯಾದವರು ನಾಳೆಯಿಂದ 3ನೇ ಡೋಸ್​ ಪಡೆಯಲಿದ್ದಾರೆ. ಮೂರನೇ ಡೋಸ್ ಉಚಿತವಲ್ಲ. ಖಾಸಗಿ ಕೇಂದ್ರಕ್ಕೆ ಹೋಗಿ ಹಣಕೊಟ್ಟು ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಹೀಗಿರುವಾಗ ದೇಶದ ನಾಗರಿಕರಿಗೆ ಒಂದು ಗುಡ್​ನ್ಯೂಸ್​ ಸಿಕ್ಕಿದೆ. ಕೊವಿಶೀಲ್ಡ್​ ಪ್ರತಿ ಡೋಸ್​ ಬೆಲೆಯನ್ನು 600 ರೂಪಾಯಿಯಿಂದ 225 ರೂ.ಗೆ ಕಡಿತಗೊಳಿಸಿದ್ದಾಗಿ ಸೀರಂ ಇನ್​ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಆದಾರ್ ಪೂನಾವಾಲಾ, ಕೇಂದ್ರ ಸರ್ಕಾರದೊಂದಿಗೆ ವ್ಯಾಪಕವಾದ ಚರ್ಚೆ ನಡೆಸಿದ ಬಳಿಕ, ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಬೆಲೆಯನ್ನು 600 ರೂಪಾಯಿಯಿಂದ 225 ರೂಪಾಯಿಗೆ ಇಳಿಸಲು ಸೀರಂ ಇನ್​ಸ್ಟಿಟ್ಯೂಟ್​ ನಿರ್ಧಾರ ತೆಗೆದುಕೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕಾ ಡೋಸ್​ ಪಡೆಯಲು ಕ್ರಮ ವಹಿಸಿರುವ ಕೇಂದ್ರ ಸರ್ಕಾರವನ್ನು ನಾವು ಶ್ಲಾಘಿಸುತ್ತೇವೆ ಎಂದೂ ಹೇಳಿದ್ದಾರೆ.

ಕೊವ್ಯಾಕ್ಸಿನ್​ ಬೆಲೆಯೂ ಇಳಿಕೆ !

ಕೊವಿಶೀಲ್ಡ್ ಬೆಲೆಯನ್ನು 600 ರೂಪಾಯಿಯಿಂದ 225ರೂ.ಗೆ ಇಳಿಸುತ್ತಿದ್ದೇವೆ ಎಂದು ಅತ್ತ ಸೀರಂ ಇನ್​ಸ್ಟಿಟ್ಯೂಟ್​ ಸಿಇಒ ಘೋಷಣೆ ಮಾಡುತ್ತಿದ್ದಂತೆ, ಇತ್ತ ಭಾರತ್ ಬಯೋಟೆಕ್​​ನ ಸಹ ಸಂಸ್ಥಾಪಕಿ ಸುಚಿತ್ರಾ ಎಲ್ಲ ಕೂಡ ಮಹತ್ವದ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್​ ನೀಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮಗ್ರ ಚರ್ಚೆ ನಡೆಸಿದ ಬಳಿಕ ನಮ್ಮ ಕೊವ್ಯಾಕ್ಸಿನ್​ ಲಸಿಕೆಯ ದರವನ್ನು ಖಾಸಗಿ ಆಸ್ಪತ್ರೆಗಳಲ್ಲಿ 1200 ರೂ.ದಿಂದ 225 ರೂಪಾಯಿಗೆ ಇಳಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸೇವಾ ಶುಲ್ಕಕ್ಕೆ 150 ರೂಪಾಯಿ ಮಿತಿ 

ಇನ್ನು ಕೊರೊನಾ ಲಸಿಕೆ ಮುನ್ನೆಚ್ಚರಿಕಾ ಡೋಸ್ ನೀಡುವ ಖಾಸಗಿ ಕೇಂದ್ರಗಳ ಸೇವಾಶುಲ್ಕವನ್ನು 150 ರೂಪಾಯಿಗೆ ಕೇಂದ್ರ ಸರ್ಕಾರ ಮಿತಿಗೊಳಿಸಿದೆ. ಅಂದರೆ ನಾಳೆಯಿಂದ ನೀವು ಯಾವುದೇ ಖಾಸಗಿ ಕೊರೊನಾ ಲಸಿಕಾ ಕೇಂದ್ರಗಳಿಗೆ ಹೋಗಿ ಮೂರನೇ ಡೋಸ್​ ಪಡೆದರೂ, ಲಸಿಕೆಯ ಡೋಸ್​ಗೆ ನಿಗದಿ ಪಡಿಸಲಾದ 225 ರೂ. (ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಪ್ರತಿ ಡೋಸ್​ಗೆ 225 ರೂ.) ಜತೆ, ಆಯಾ ಖಾಸಗಿ ಕೇಂದ್ರಗಳು ವಿಧಿಸುವ ಸೇವಾಶುಲ್ಕವನ್ನು ನೀಡಬಹುದು. ಈ ಸೇವಾ ಶುಲ್ಕಗಳು ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಭಿನ್ನವಾಗಿರಬಹುದು. ಎಷ್ಟೇ ಭಿನ್ನವಾಗಿದ್ದರೂ 150 ರೂ.ಒಳಗೇ ಇರುತ್ತವೆ.

ಇದನ್ನೂ ಓದಿ: ಕೊರೊನಾ ಲಸಿಕೆ 3ನೇ ಡೋಸ್ ನೀಡುವ ಖಾಸಗಿ ಕೇಂದ್ರಗಳು ಸೇವಾಶುಲ್ಕವನ್ನು 150 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ: ಕೇಂದ್ರ ಸರ್ಕಾರ

Published On - 3:43 pm, Sat, 9 April 22