ತೃಣಮೂಲವನ್ನು ಸೋಲಿಸದೆ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ: ಬಂಗಾಳ ಸಿಪಿಎಂ ರಾಜ್ಯ ಕಾರ್ಯದರ್ಶಿ

|

Updated on: Oct 13, 2023 | 3:15 PM

Mohammed Salim: 'ದೇಶದ ಬಿಜೆಪಿ ವಿರೋಧಿ ಶಕ್ತಿಗಳು ಪಶ್ಚಿಮ ಬಂಗಾಳದ ನೈಜ ಪರಿಸ್ಥಿತಿಯ ಬಗ್ಗೆ ಯೋಚಿಸುವಂತೆ ಮಾಡಬೇಕು. ಇತರ ಬಿಜೆಪಿ ವಿರೋಧಿ ಶಕ್ತಿಗಳು ತಮ್ಮದೇ ಆದ ರಾಜಕೀಯವನ್ನು ಹೊಂದಿರಬಹುದು. ಹಾಗಾಗಿ ಅಖಿಲ ಭಾರತ ಸೀಟು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಏಕೆಂದರೆ ಇದು ವಾಸ್ತವಿಕವಲ್ಲ ಎಂದು ಮೊಹಮ್ಮದ್ ಸಲೀಂ ಹೇಳಿದ್ದಾರೆ.

ತೃಣಮೂಲವನ್ನು ಸೋಲಿಸದೆ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ: ಬಂಗಾಳ ಸಿಪಿಎಂ ರಾಜ್ಯ ಕಾರ್ಯದರ್ಶಿ
ಮೊಹಮ್ಮದ್ ಸಲೀಂ
Follow us on

ಕೋಲ್ಕತ್ತಾ ಅಕ್ಟೋಬರ್  13: ತೃಣಮೂಲ ಕಾಂಗ್ರೆಸ್ (TMC) ಬಿಜೆಪಿಯ ‘ಸಂಭಾವ್ಯ ಮಿತ್ರ’ ಎಂದು ಪಶ್ಚಿಮ ಬಂಗಾಳದ  (West Bengal) ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಸಿಪಿಎಂನ (CPM) ಮುಖವಾಣಿಯ ಪೂಜಾ ಸಂಚಿಕೆಯಲ್ಲಿ ಸಲೀಂ ಈ ಅಂಕಣ ಬರೆದಿದ್ದಾರೆ. ಈ ಲೇಖನಕ್ಕೆ ‘ಬಿಜೆಪಿ ವಿರೋಧಿ ಏಕತೆ, ರಾಜ್ಯವಾರು ವೈವಿಧ್ಯತೆಗೆ ಮನ್ನಣೆ’ ಶೀರ್ಷಿಕೆ ನೀಡಲಾಗಿದೆ. ಪ್ರಸ್ತುತ ಲೇಖನದಲ್ಲಿ ತಳಮಟ್ಟದಲ್ಲಿನ ಪ್ರತಿಯೊಂದು ವಿಷಯವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ತೃಣಮೂಲವನ್ನು ಸೋಲಿಸಲು ಸಾಧ್ಯವಾಗದಿದ್ದರೆ ಬಿಜೆಪಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಸಲೀಂ ಬರೆದಿದ್ದಾರೆ. ಇದು ಪಶ್ಚಿಮ ಬಂಗಾಳದ ವಾಸ್ತವ. ಸಿಪಿಎಂ ಬಿಜೆಪಿಯ ಬಿ ಟೀಮ್ ಎಂದು ಟಿಎಂಸಿಯ  ಕುನಾಲ್ ಘೋಷ್ ಪ್ರತಿವಾದ ಮಾಡಿದ್ದಾರೆ. “ವೋಟ್ ಕಟುವಾ ಸಿಪಿಎಂ” (ಮತಕ್ಕೆ ಕತ್ತರಿ ಹಾಕುವ ಸಿಪಿಎಂ) ಎಂದಿದ್ದಾರೆ ಘೋಷ್. ಕರ್ನಾಟಕದಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಯೂ ಕಣಕ್ಕಿಳಿಸಲಾಗಿತ್ತು,  ಆದರೆ ಠೇವಣಿ ಕಳೆದುಕೊಂಡರು. ಇಲ್ಲಿಯೂ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

2024 ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ವಿವಿಧ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಿ ಎನ್‌ಡಿಎ ವಿರೋಧಿ ‘ಇಂಡಿಯಾ’ (I.N.D.I.A) ರಚಿಸಿದವು. ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ, ಸೀತಾರಾಂ ಯೆಚೂರಿ ಈ ಮೈತ್ರಿಯಲ್ಲಿದ್ದಾರೆ. ಆದರೆ ಅಖಿಲ ಭಾರತ ಮಟ್ಟದಲ್ಲಿ ಎಡ-ಕಾಂಗ್ರೆಸ್-ತೃಣಮೂಲ ಎಷ್ಟೇ ಬಡಿದಾಡಿದರೂ ಬಂಗಾಳ ರಾಜಕಾರಣದ ಸಂಕಟ ಹಾಗೆಯೇ ಉಳಿದಿದೆ. ಕೆಲವೊಮ್ಮೆ ಅಧೀರ್ ಚೌಧರಿ ಮತ್ತು ಕೆಲವೊಮ್ಮೆ ಮೊಹಮ್ಮದ್ ಸಲೀಂ, ತೃಣಮೂಲದ ಉನ್ನತ ನಾಯಕತ್ವವನ್ನು ಗುರಿಯಾಗಿಸುತ್ತಾರೆ. ಸಿಪಿಎಂ ಮುಖವಾಣಿಯಲ್ಲೂ ಹಲವು ವರದಿಗಳು ಪ್ರಕಟವಾಗಿವೆ. ಅಲ್ಲಿ, ಇಂಡಿಯಾ ಮೈತ್ರಿಕೂಟದ ಮುಖಗಳಲ್ಲಿ ಒಬ್ಬರಾದ ತೃಣಮೂಲದ ಮೇಲೆ ಸಿಪಿಎಂನ ರಾಜ್ಯ ಕಾರ್ಯದರ್ಶಿ ದಾಳಿ ನಡೆಸಿದ್ದಾರೆ.

‘ದೇಶದ ಬಿಜೆಪಿ ವಿರೋಧಿ ಶಕ್ತಿಗಳು ಪಶ್ಚಿಮ ಬಂಗಾಳದ ನೈಜ ಪರಿಸ್ಥಿತಿಯ ಬಗ್ಗೆ ಯೋಚಿಸುವಂತೆ ಮಾಡಬೇಕು. ಇತರ ಬಿಜೆಪಿ ವಿರೋಧಿ ಶಕ್ತಿಗಳು ತಮ್ಮದೇ ಆದ ರಾಜಕೀಯವನ್ನು ಹೊಂದಿರಬಹುದು. ಹಾಗಾಗಿ ಅಖಿಲ ಭಾರತ ಮಟ್ಟದಲ್ಲಿ  ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಏಕೆಂದರೆ ಇದು ವಾಸ್ತವಿಕವಲ್ಲ ಎಂದು ಮೊಹಮ್ಮದ್ ಸಲೀಂ ಹೇಳಿದ್ದಾರೆ.

ಇದನ್ನೂ ಓದಿ: ಕರುನಾಡನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ಕಾಣೆಯಾಗಿದ್ದಾರೆ ಎಂದ ಬಿಜೆಪಿ: ದೆಹಲಿಯಿಂದಲೇ ಕೆಜೆ ಜಾರ್ಜ್ ತಿರುಗೇಟು

ಇದಕ್ಕೆ ಪ್ರತಿಕ್ರಿಯಿಸಿದ ತೃಣಮೂಲದ ವಕ್ತಾರ ಕುನಾಲ್ ಘೋಷ್, “ಮಹಮ್ಮದ್ ಸಲೀಂ ಜನರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನ ವಿಫಲವಾಗುತ್ತದೆ. ಏಕೆಂದರೆ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 1988ರ ಜುಲೈನಲ್ಲಿ ಶಾಹಿದ್ ಮಿನಾ ಮೈದಾನದಲ್ಲಿ ಕಾಂಗ್ರೆಸ್ ವಿರೋಧಿ ಸಭೆ ನಡೆದಿತ್ತು. ಆಗ ತೃಣಮೂಲ ಹುಟ್ಟಿರಲಿಲ್ಲ. ಯಲ್ಲಿ ಅಆ ಸಭೆಟಲ್ ಬಿಹಾರಿ ವಾಜಪೇಯಿ ಮತ್ತು ಜ್ಯೋತಿ ಬೋಸ್ ಮುಂದೆ ವಿ.ಪಿ.ಸಿಂಗ್ ಅವರೊಂದಿಗೆ ಕೈಕಟ್ಟಿ ನಿಂತರು. ಅಂದರೆ ಎಡ-ಬಿಜೆಪಿ ಒಟ್ಟಿಗೆ ಇತ್ತು. ಈ ಹಿಂದೆ ಬಿಜೆಪಿ 2 ಸಂಸದರನ್ನು ಹೊಂದಿತ್ತು. ನಂತರ ಅದು 84ಕ್ಕೆ ಏರಿತು. ಬಿಜೆಪಿಯ 2 ರಿಂದ 84 ಕ್ಕೆ ಏರಿದ್ದು ಎಡರಂಗದಿಂದ. ದೇಶದ ಜನರು ತಮ್ಮನ್ನು ಮರೆತಿದ್ದಾರೆ ಅಥವಾ ಅವರನ್ನು ನೆನಪಿಸುವವರು ಯಾರೂ ಇಲ್ಲ ಎಂದು ಮುಹಮ್ಮದ್ ಸಲೀಮ್ ಭಾವಿಸುತ್ತಾರೆಯೇ? ಎಂದು ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:08 pm, Fri, 13 October 23