P20 Summit: ಭಯೋತ್ಪಾದನೆಯು ಜಗತ್ತಿಗೆ ದೊಡ್ಡ ಸವಾಲಾಗಿದೆ, ನಾವು ಒಟ್ಟಾಗಿ ಹೋರಾಡಬೇಕಿದೆ: ಪ್ರಧಾನಿ ಮೋದಿ
ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಮಾತನಾಡಿರುವ ಅವರು, ಭಯೋತ್ಪಾದನೆಯು ಜಗತ್ತಿಗೆ ದೊಡ್ಡ ಸವಾಲಾಗಿದೆ, ನಾವು ಒಟ್ಟಾಗಿ ಹೋರಾಡಬೇಕಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಇಂದು ಜಿ20 ಸಂಸದೀಯ ಸ್ಪೀಕರ್ಗಳ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಪಿ20 ಸಮ್ಮೇಳನ ಆರಂಭವಾಗಿದೆ.
ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಮಾತನಾಡಿರುವ ಅವರು, ಭಯೋತ್ಪಾದನೆಯು ಜಗತ್ತಿಗೆ ದೊಡ್ಡ ಸವಾಲಾಗಿದೆ, ನಾವು ಒಟ್ಟಾಗಿ ಹೋರಾಡಬೇಕಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಇಂದು ಜಿ20 ಸಂಸದೀಯ ಸ್ಪೀಕರ್ಗಳ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಪಿ20 ಸಮ್ಮೇಳನ ಆರಂಭವಾಗಿದೆ.
ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅತಿ ದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ, ಸ್ವಾತಂತ್ರ್ಯದ ನಂತರ, ಭಾರತವು 17 ಸಾರ್ವತ್ರಿಕ ಚುನಾವಣೆಗಳನ್ನು ಮತ್ತು 300 ಕ್ಕೂ ಹೆಚ್ಚು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಕಂಡಿದೆ.
ಮತ್ತಷ್ಟು ಓದಿ: ಪಂಜಾಬ್ಗಾಗಿ ಹಮಾಸ್ ರೀತಿಯಲ್ಲೇ ದಾಳಿ ಮಾಡುತ್ತೇವೆ: ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ
P20 ಶೃಂಗಸಭೆಯು ಭಾರತದಲ್ಲಿ ನಡೆಯುತ್ತಿದೆ, ಇದು ಪ್ರಜಾಪ್ರಭುತ್ವದ ಜನನಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಇದು ಚರ್ಚೆಗೆ ಪ್ರಮುಖ ಸ್ಥಳವಾಗಿದೆ ಎಂದು ಹೇಳಿದರು. ಇಂಡೋನೇಷ್ಯಾ, ಮೆಕ್ಸಿಕೋ, ಸೌದಿ ಅರೇಬಿಯಾ, ಓಮನ್, ಸ್ಪೇನ್, ಯುರೋಪಿಯನ್ ಪಾರ್ಲಿಮೆಂಟ್, ಇಟಲಿ, ದಕ್ಷಿಣ ಆಫ್ರಿಕಾ, ರಷ್ಯಾ, ಟರ್ಕಿಯೆ, ನೈಜೀರಿಯಾ, ಆಸ್ಟ್ರೇಲಿಯಾ, ಬ್ರೆಜಿಲ್, ಯುಎಇ, ಸಿಂಗಾಪುರ್, ಜಪಾನ್, ಈಜಿಪ್ಟ್ ಮತ್ತು ಬಾಂಗ್ಲಾದೇಶದ ಸ್ಪೀಕರ್‌ಗಳು ಮತ್ತು ನಿಯೋಗದ ಮುಖ್ಯಸ್ಥರು ಉಪಸ್ಥಿತರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | At the 9th G20 Parliamentary Speakers’ Summit (P20), Prime Minister Narendra Modi says “India landed on the Moon. India hosted the G20 Summit successfully. Today, we are hosting the P20 Summit. This Summit is also a medium to celebrate the power of the people of our… pic.twitter.com/8iSjwdofG9
— ANI (@ANI) October 13, 2023
ಪಿ20 ಥೀಮ್, ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯಕ್ಕಾಗಿ ಸಂಸತ್ತು, ಮಾಹಿತಿ ಪ್ರಕಾರ ಕೆನಡಾದ ಸೆನೆಟ್ ಸ್ಪೀಕ್ ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಕೆನಡಾದ ಸೆನೆಟ್ ಸ್ಪೀಕರ್ ರೇಮೊಂಡೆ ಗಾಗ್ನಿ ಪಿ20 ಸಭೆಯಿಂದ ದೂರ ಉಳಿದಿದ್ದಾರೆ.
ಪಿ20 ಶೃಂಗಸಭೆಗೂ ಮೊದಲು ಸೆಪ್ಟೆಂಬರ್ನಲ್ಲಿ ಭಾರತವು ಜಿ20 ಶೃಂಗಸಭೆಯನ್ನು ಆಯೋಜಿಸಿತ್ತು, ಸೆಪ್ಟೆಂಬರ್ 9-10ರಂದು ಶೃಂಗಸಭೆ ನಡೆದಿತ್ತು. ವಿಶ್ವದ ಅನೇಕ ನಾಯಕರು ಭೇಟಿಯಾಗಿ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Fri, 13 October 23