ಲಕ್ನೋ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ನಡೆಸಿದ ಕಾಮುಕನನ್ನು ಆ ಮಗುವಿನ ಅಪ್ಪ-ಅಮ್ಮ ಪಂಚಾಯಿತಿಯ ಮುಂದೆ ತಂದು ನಿಲ್ಲಿಸಿದ್ದರು. ಆ ಆರೋಪಿಯ ವಿಚಾರಣೆ ನಡೆಸಿದ ಪಂಚಾಯಿತಿ ಸಿಬ್ಬಂದಿ ಊರಿನವರ ಮುಂದೆ ಆ ವ್ಯಕ್ತಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆತ ಮುಖದ ಮೇಲೆ ಬಟ್ಟೆ ಹಾಕಿಕೊಂಡು ಬಸ್ಕಿ ಹೊಡೆದ ನಂತರ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆ ಬಿಹಾರದ (Bihar) ನವಾಡ ಜಿಲ್ಲೆಯಲ್ಲಿ ನಡೆದಿದೆ.
ಸಣ್ಣ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಕೇವಲ 5 ಬಸ್ಕಿ ಹೊಡೆಯುವ ಶಿಕ್ಷೆಯೇ? ಎಂದು ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ನ್ಯಾಯ ಪಂಚಾಯಿತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
पंचायत का यह अनोखा फैसला हैरान कर देने वाला है.
6 साल की मासूम बच्ची से रेप करने वाले आरोपी शख़्स से बस 5 बार उठक-बैठक करवा कर मामला रफा दफा किया गया. आरोपी शख्स अरुण पंडित बताया जा रहा है, जो बिहार के नवादा का है. #rape #Bihar #Nawada #NawadaNews pic.twitter.com/Pjrw0AB2oU— रंजीत कुमार हरित्र (@RanjeetHaritra) November 24, 2022
5 ವರ್ಷದ ಮಗುವಿಗೆ ಚಾಕೊಲೇಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ, ತನ್ನ ಕೋಳಿ ಫಾರಂಗೆ ಕರೆದೊಯ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆ ವ್ಯಕ್ತಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತ್ ಮುಂದೆ ಹಾಜರುಪಡಿಸಿದಾಗ ಹಿರಿಯರು ಅವನನ್ನು ಪೊಲೀಸರಿಗೆ ಒಪ್ಪಿಸದಿರಲು ನಿರ್ಧರಿಸಿದ್ದಾರೆ. ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟರೆ ಊರಿನ ಮರ್ಯಾದೆ ಹೋಗುತ್ತದೆ ಎಂದು ತೀರ್ಮಾನಿಸಿದ ಅವರು ತಾವೇ ಶಿಕ್ಷೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ, ಜನರ ಮುಂದೆ ಆತ 5 ಬಾರಿ ಬಸ್ಕಿ ಹೊಡೆಯಬೇಕೆಂದು ಶಿಕ್ಷೆ ನೀಡಿದ್ದಾರೆ. ಇನ್ನೂ ವಿಚಿತ್ರವೆಂದರೆ, ಆತ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಕ್ಕೆ 5 ಬಾರಿ ಬಸ್ಕಿ ಹೊಡೆಸಲಾಗಿದೆ. ಆತ ನಿರಪರಾಧಿ ಎಂದು ಪಂಚಾಯಿತಿ ತೀರ್ಪು ನೀಡಿದೆ.
ಇದನ್ನೂ ಓದಿ: Shocking News: ರಾಜಸ್ಥಾನ- ಪಾಕಿಸ್ತಾನದ ಗಡಿಯಲ್ಲಿ ಮಾತು ಬಾರದ, ಕಿವಿ ಕೇಳದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಈ ವೀಡಿಯೊ ವೈರಲ್ ಆದ ನಂತರ ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಗ್ರಾಮೀಣ ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ತೀರ್ಮಾನ ಎಂದು ಟೀಕಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಒತ್ತಾಯಿಸಿದ್ದಾರೆ.