Crime News: ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ; ಆದ್ರೆ ಆಗಿದ್ದೇ ಬೇರೆ!

| Updated By: ಸುಷ್ಮಾ ಚಕ್ರೆ

Updated on: Nov 10, 2022 | 2:39 PM

ಕರುಣಾಕರನ್ ತಾವು ತಂದಿದ್ದ ಬಿರಿಯಾನಿಯನ್ನು ತಮ್ಮ ಹೆಂಡತಿಗೆ ಕೊಡಲಿಲ್ಲ. ಗಂಡ ತನಗೆ ಕೊಡದೆ ಒಬ್ಬರೇ ಬಿರಿಯಾನಿ ತಿನ್ನುತ್ತಿರುವುದರಿಂದ ಕೋಪಗೊಂಡ ಪದ್ಮಾವತಿ ಜಗಳವಾಡಿದ್ದರು.

Crime News: ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ; ಆದ್ರೆ ಆಗಿದ್ದೇ ಬೇರೆ!
ಸಾಂದರ್ಭಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನ ಚೆನ್ನೈನ ಐನಾವರಂ ನೆರೆಹೊರೆಯಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ (Shocking News) ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತನ್ನ ಬಳಿಯಿದ್ದ ಬಿರಿಯಾನಿಯಲ್ಲಿ ತನಗೂ ಪಾಲು ಬೇಕೆಂದು ಕೇಳಿದ್ದರಿಂದ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಆದರೆ, ತನಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಮಹಿಳೆ ಗಂಡನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಆಗ ಆತನಿಗೂ ಬೆಂಕಿ ಹೊತ್ತಿಕೊಂಡು ಹೆಂಡತಿಯೊಂದಿಗೆ ಗಂಡನೂ ಸಾವನ್ನಪ್ಪಿದ್ದಾನೆ.

ಕರುಣಾಕರನ್ (74) ಅವರ ಹೆಂಡತಿ ಪದ್ಮಾವತಿ (70) ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರ 4 ಮಕ್ಕಳು ನಗರದ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿದ್ದರು. ಅದರಿಂದ ಆ ದಂಪತಿಗಳು ಒಂಟಿತನದಿಂದ ಖಿನ್ನತೆಗೆ ಒಳಗಾಗಿದ್ದರು. ಆಗಾಗ ಅವರ ಮಕ್ಕಳು ಬಂದು ತಂದೆ-ತಾಯಿಯನ್ನು ಭೇಟಿ ಮಾಡುತ್ತಿದ್ದರು. ಕರುಣಾಕರನ್ ಮತ್ತು ಅವರ ಪತ್ನಿ ನಡುವೆ ಜಗಳ ಸಾಮಾನ್ಯವಾಗಿತ್ತು ಎಂದು ನೆರೆಹೊರೆಯವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಕರುಣಾಕರನ್ ತಾವು ತಂದಿದ್ದ ಬಿರಿಯಾನಿಯನ್ನು ತಮ್ಮ ಹೆಂಡತಿಗೆ ಕೊಡಲಿಲ್ಲ. ಗಂಡ ತನಗೆ ಕೊಡದೆ ಒಬ್ಬರೇ ಬಿರಿಯಾನಿ ತಿನ್ನುತ್ತಿರುವುದರಿಂದ ಕೋಪಗೊಂಡ ಪದ್ಮಾವತಿ ಜಗಳವಾಡಿದ್ದರು. ತನಗೂ ಬಿರಿಯಾನಿ ಬೇಕೆಂದು ಕೇಳಿದ್ದರು. ಇದೇ ವಿಷಯಕ್ಕೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು ಕರುಣಾಕರನ್ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ: Viral Video: ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ಯುವಕ; ಮೊಬೈಲ್​ನಲ್ಲಿ ಸೆರೆಯಾಯ್ತು ಶಾಕಿಂಗ್ ವಿಡಿಯೋ

ಆದರೆ, ಬೆಂಕಿ ಹರಡುತ್ತಿದ್ದಂತೆ ಪದ್ಮಾವತಿ ತನ್ನ ಗಂಡನನ್ನು ಅಪ್ಪಿಕೊಂಡಿದ್ದಾರೆ. ಆಗ ಕರುಣಾಕರನ್​ಗೂ ಬೆಂಕಿ ಹೊತ್ತಿಕೊಂಡಿದೆ. ಜೋರಾಗಿ ಕಿರುಚಾಟ ಕೇಳಿದ ಅಕ್ಕಪಕ್ಕದ ಮನೆಯವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಕೆಎಂಸಿಎಚ್) ವೈದ್ಯರು ಪದ್ಮಾವತಿ ಅವರಿಗೆ 65% ಸುಟ್ಟಗಾಯಗಳು ಮತ್ತು ಕರುಣಾಕರನ್ ಅವರಿಗೆ 50% ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಬಳಿಕ ತಮ್ಮ ಮೈ ಸುಟ್ಟುಹೋಗಿರುವುದನ್ನು ನೋಡಿದ ಆ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಆಸ್ಪತ್ರೆಯ ವೈದ್ಯರು ಅದನ್ನು ನೋಡಿದ್ದರಿಂದ ಅವರು ಬದುಕುಳಿದಿದ್ದಾರೆ. ಮಂಗಳವಾರ ಪದ್ಮಾವತಿಗೆ ಪ್ರಜ್ಞೆ ಬಂದ ಮೇಲೆ ಅಲ್ಲಿ ಏನು ನಡೆಯಿತೆಂಬ ಸತ್ಯ ಬಯಲಾಗಿದೆ. ಆಕೆ ನಡೆದ ಘಟನೆಯನ್ನು ಪೊಲೀಸರಿಗೆ ಹೇಳಿದ ಒಂದೆರಡು ಗಂಟೆಯಲ್ಲೇ ಮೃತಪಟ್ಟಿದ್ದಾರೆ. ಆಕೆಯ ಗಂಡ ಕರುಣಾಕರನ್ ಬುಧವಾರ ಬೆಳಿಗ್ಗೆ ಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ