Earthquake: ಅರುಣಾಚಲ ಪ್ರದೇಶದಲ್ಲಿ 5.7 ತೀವ್ರತೆಯ ಭೂಕಂಪ, ಅಂಡಮಾನ್- ನಿಕೋಬಾರ್​ನಲ್ಲೂ ಕಂಪಿಸಿದ ಭೂಮಿ

ಇಂದು (ಗುರುವಾರ) ಮುಂಜಾನೆ ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

Earthquake: ಅರುಣಾಚಲ ಪ್ರದೇಶದಲ್ಲಿ 5.7 ತೀವ್ರತೆಯ ಭೂಕಂಪ, ಅಂಡಮಾನ್- ನಿಕೋಬಾರ್​ನಲ್ಲೂ ಕಂಪಿಸಿದ ಭೂಮಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 10, 2022 | 2:07 PM

ಸಿಯಾಂಗ್: ಇಂದು (ಗುರುವಾರ) ಮುಂಜಾನೆ ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ನೆಲದಿಂದ 10 ಕಿ.ಮೀ. ಆಲವಾಗಿದೆ ಎಂದು ಹೇಳಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪ

ಅಂಡಮಾನ್ಮತ್ತು ನಿಕೋಬಾರ್ ದ್ವೀಪದಲ್ಲೂ ಇಂದು ಮುಂಜಾನೆ 2.29 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಭೂಕಂಪದ ಆಳವು ಭೂಮಿಯಿಂದ 10 ಕಿಮೀ ಆಳದಲ್ಲಿದೆ ಎಂದು ಹೇಳಿದರು. ಯಾವುದೇ ಹಾನಿ ವರದಿಗಳಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿದ್ದಾರೆ.

ಹಿಮಾಲಯದ ಕೆಳಗಿನ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದಾಗ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದರು. ಈ ಭೂಕಂಪನವು ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಕಂಪನಕ್ಕೆ ಕಾರಣವಾಯಿತು, ಇದರಿಂದ ನಾಗರಿಕರಲ್ಲಿ ಭೀತಿಗೆ ಉಂಟಾಗಿತ್ತು.

ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಮತ್ತು ಯುಪಿ ರಾಜಧಾನಿ ಲಕ್ನೋದಲ್ಲಿ ಕಂಪನದ ಅನುಭವವಾಗಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ನೇಪಾಳದಲ್ಲಿ ಪಿಥೋರಗಢದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 90 ಕಿಮೀ ದೂರದಲ್ಲಿದೆ ಆಗಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶವು ಕಡಿಮೆ ಪ್ರಮಾಣದ ಭೂಕಂಪಗಳನ್ನು ಸಂಭವಿಸುತ್ತಿದೆ.

Published On - 2:00 pm, Thu, 10 November 22