ಎಎಪಿ ಪಕ್ಷ 5 ರೂಪಾಯಿ ಕೆಲಸಕ್ಕೆ 5,000 ರೂ ಮೌಲ್ಯದ ಜಾಹೀರಾತು ನೀಡುತ್ತದೆ – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಿಡಿ
Tejasvi Surya: ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಸರ್ಕಾರದ ವಿರುದ್ಧ ಮುಸುಕಿನ ದಾಳಿ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಡೆ ಕೇವಲ 5 ರೂ. ಮೌಲ್ಯದ ಕೆಲಸಕ್ಕಾಗಿ ₹ 5,000 ಪ್ರಚಾರ ಖರ್ಚು ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಸರ್ಕಾರದ ಮೇಲಿನ ಮಾತಿನ ದಾಳಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು (BJP MP Tejasvi Surya) ಬುಧವಾರ ಅರವಿಂದ್ ಕೇಜ್ರಿವಾಲ್ ಅವರ ತಂಡ ಕೇವಲ 5 ರೂ ಮೌಲ್ಯದ ಕೆಲಸಕ್ಕಾಗಿ ಪ್ರಚಾರ ಗಿಟ್ಟಿಸಲು (advertisements) 25,000 ರೂ. ವ್ಯಯಿಸುತ್ತದೆ ಎಂದು ಹೇಳಿದರು. ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ (Gujarat Assembly Elections 2022) ಮುಂಚಿತವಾಗಿ ಗುಜರಾತ್‌ನಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಅವರು ಮೊದಲ ಬಾರಿಗೆ ಮತದಾರರೊಂದಿಗೆ ಸಂವಾದ ನಡೆಸಿದರು. ಆ ಸಂದರ್ಭದಲ್ಲಿ ಎಎಪಿ (Aam Aadmi Party -AAP) ಸರ್ಕಾರದ ಶಾಲಾ ಶಿಕ್ಷಣ ಮಾದರಿಯನ್ನು “ಲಿಕ್ಕರ್ ಮಾಫಿಯಾ” ವಿವಾದದೊಂದಿಗೆ ಹೋಲಿಕೆ ಮಾಡಿದರು.
“ಈ ಜನರು (ಎಎಪಿ ಪಕ್ಷದವರು) 5 ರೂಪಾಯಿ ಕೆಲಸಕ್ಕೆ 5,000 ರೂ ಮೌಲ್ಯದ ಜಾಹೀರಾತುಗಳನ್ನು ನೀಡುತ್ತಾರೆ. ನೀವು (ಗುಜರಾತ್‌ನ ಯುವಕರು) ಅಂತಹ ಜನರ ಬಗ್ಗೆ ಎಚ್ಚರದಿಂದಿರಬೇಕು. ಅವರು ತಮ್ಮ ಜೀವನವನ್ನಷ್ಟೇ ಹಾಳು ಮಾಡಿಕೊಳ್ಳುತ್ತಿಲ್ಲ, ಜೊತೆಗೆ ದೇಶವನ್ನೂ ಹಾಳು ಮಾಡುತ್ತಿದ್ದಾರೆ” ಎಂದು ಸಂಸದ ಸೂರ್ಯ ಹೇಳಿದರು.
“ನಾನು ಸಂಸದನಾದ ನಂತರ ಆಗಾಗ್ಗೆ ದೆಹಲಿಗೆ ಭೇಟಿ ನೀಡುತ್ತಿದ್ದೇನೆ. ದೆಹಲಿಯ ಶಾಲಾ ಶಿಕ್ಷಣದ ಮಾದರಿ ಏನು ಎಂದು ನಾನು ಸ್ನೇಹಿತರಿಗೆ ಕೇಳಿದೆ. ದೆಹಲಿಯ ಶಿಕ್ಷಣದ ಸನ್ನಿವೇಶವು ಪ್ರಸ್ತುತ ಬೆಳಕಿಗೆ ಬರುತ್ತಿರುವ ಮದ್ಯದ ಮಾಫಿಯಾ ವಿಷಯದಂತೆಯೇ ಇದೆ ಎಂದು ಅವರು ಹೇಳಿದರು.” ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ (2001 ರಿಂದ 2014) ಹೇಗೆ ಎಂದು ಸಭಿಕರಿಗೆ ನೆನಪಿಸಿದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಮಾರ್ಪಡಿಸಿದೆ. ಶಾಲೆಗಳಲ್ಲಿ ಡ್ರಾಪ್ಔಟ್ ಅನುಪಾತವನ್ನು ಸುಧಾರಿಸುವುದರಿಂದ ಪ್ರಾರಂಭಿಸಿ, ಗುಜರಾತ್ ಸಿಎಂ ಆಗಿ ಮೋದಿಯವರ ಪ್ರಯತ್ನದಿಂದಾಗಿ ಶಾಲೆ ಬಿಡುವವರ ಪ್ರಮಾಣ ಶೇ. 30ರಿಂದ ಕೇವಲ ಶೇ. 1ಕ್ಕೆ ಇಳಿದಿದೆ ಎಂದು ಸೂರ್ಯ ಹೇಳಿದರು.
ನಾವು ₹ 5,000 ಮೌಲ್ಯದ ಕೆಲಸ ಮಾಡುತ್ತೇವೆ ಆದರೆ ಅದರ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ₹ 50 ಖರ್ಚು ಮಾಡುತ್ತೇವೆ. ₹50 ಕೆಲಸ ಮಾಡುವ ಮತ್ತು ಪ್ರಚಾರಕ್ಕಾಗಿ ₹ 5,000 ಮೌಲ್ಯದ ಜಾಹೀರಾತು ನೀಡುವ ಪಕ್ಷವಲ್ಲ ನಮ್ಮದು ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಡಿಸೆಂಬರ್ 1 ಮತ್ತು 5 ರಂದು ನಡೆಯಲಿರುವ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುವ ಯುವಕರು ಗುಜರಾತ್‌ನ ರಾಜಕೀಯ ಸ್ಥಿರತೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.
ರಫ್ತು, ನೀರಾವರಿ ಕಾಲುವೆ ಜಾಲ, ವ್ಯಾಪಾರ ಮಾಡಲು ಸುಲಭ ಮತ್ತು ಹೂಡಿಕೆ ಆಕರ್ಷಿಸುವುದು ಸೇರಿದಂತೆ ಹಲವಾರು ರಂಗಗಳಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. 30 ವರ್ಷಗಳ ರಾಜಕೀಯ ಸ್ಥಿರತೆಯಿಂದಾಗಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ಎಲ್ಲಾ ಗುಜರಾತಿಗಳ ಕಠಿಣ ಪರಿಶ್ರಮ. ರಾಜಕೀಯ ಸ್ಥಿರತೆಯು ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಅವರು ಸಮರ್ಥಿಸಿಕೊಂಡರು. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪಕ್ಷ ಪ್ರಮುಖ ಸವಾಲಾಗಿ ಹೊರಹೊಮ್ಮಿದೆ.
आज @BJYM4Gujarat कार्यकर्ताओं के साथ साबरकांठा में विजय विश्वास युवा सम्मेलन में सम्मिलित हुआ।
गुजरात निवासियों और युवाओं के जोश और उत्साह से यह स्पष्ट है कि @BJP4India की डबल इंजन सरकार प्रचंड बहुमत के साथ सरकार बनाने वाली है। pic.twitter.com/eckOqCFhnh
— Tejasvi Surya (@Tejasvi_Surya) November 9, 2022