ಜಾಮ್‌ನಗರ ಉತ್ತರ ಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಸಿಂಗ್ ಜಡೇಜಾ ಪತ್ನಿ ರಿವಾಬಾ ಜಡೇಜಾ ಕಣಕ್ಕೆ

2019ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರನ್ನು ಬಿಜೆಪಿ ಜಾಮ್‌ನಗರ ಉತ್ತರದಿಂದ ಕಣಕ್ಕಿಳಿಸಿದೆ

ಜಾಮ್‌ನಗರ ಉತ್ತರ ಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಸಿಂಗ್ ಜಡೇಜಾ ಪತ್ನಿ ರಿವಾಬಾ ಜಡೇಜಾ ಕಣಕ್ಕೆ
ರಿವಾಬಾ ಜಡೇಜಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 10, 2022 | 1:03 PM

ಅಹಮದಾಬಾದ್: ಗುಜರಾತ್ ಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳನ್ನು ಘೋಷಿಸಿದ್ದು 2019ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ (Ravindrasinh Jadeja) ಅವರ ಪತ್ನಿ ರಿವಾಬಾ ಜಡೇಜಾ(Rivaba Jadeja) ಅವರನ್ನು ಜಾಮ್‌ನಗರ ಉತ್ತರದಿಂದ ಕಣಕ್ಕಿಳಿಸಿದೆ. ಹಾಲಿ ಶಾಸಕ ಧರ್ಮೇಂದ್ರ ಸಿನ್ಹಾ ಎಂ ಜಡೇಜಾ ಸೇರಿದಂತೆ 38 ಶಾಸಕರನ್ನ ಕೈಬಿಡಲಾಗಿದೆ. ವಿರಾಮಗಂ ಅಭ್ಯರ್ಥಿಯಾಗಿ ಹಾರ್ದಿಕ್ ಪಟೇಲ್ ಕೂಡ ಬಿಜೆಪಿ ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಇತರ ಏಳು ನಾಯಕರು ಕೂಡ ಆಡಳಿತ ಪಕ್ಷದ ಪಟ್ಟಿಯಲ್ಲಿದ್ದಾರೆ.ಎರಡು ವಾರಗಳ ಹಿಂದೆ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮೋರ್ಬಿಯಿಂದ ಹಾಲಿ ಶಾಸಕರನ್ನು ಬದಲಿಸಿದ ಬಿಜೆಪಿ, ಅವರ ಬದಲಿಗೆ ಸೇತುವೆ ಕುಸಿದು ಬಿದ್ದ ಸಮಯದಲ್ಲಿ ಜನರನ್ನು ಉಳಿಸಲು ನದಿಗೆ ಹಾರಿದ ಮಾಜಿ ಶಾಸಕರನ್ನು ಆಯ್ಕೆ ಮಾಡಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಡಿಯಾದಿಂದ ಸ್ಪರ್ಧಿಸಲಿದ್ದಾರೆ. ದೆಹಲಿಯಲ್ಲಿ ಹೆಸರುಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಅವರ ಒಪ್ಪಿಗೆಯೊಂದಿಗೆ ಶಾಸಕರನ್ನು ಬದಲಾಯಿಸಲಾಗಿದೆ ಎಂದು ಹೇಳಿದರು.

ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಮತದಾನ ನಡೆಯುವ 89 ಸ್ಥಾನಗಳ ಪೈಕಿ 84 ಸ್ಥಾನಗಳನ್ನು ಪಟ್ಟಿ ಒಳಗೊಂಡಿದೆ. ಡಿಸೆಂಬರ್ 5 ರಂದು ಚುನಾವಣೆ ನಡೆಯಲಿರುವ 93 ರಲ್ಲಿ 76 ಸ್ಥಾನಗಳನ್ನು ಒಳಗೊಂಡಿದೆ. ಹಿಮಾಚಲ ಪ್ರದೇಶದ ಫಲಿತಾಂಶಗಳೊಂದಿಗೆ ಡಿಸೆಂಬರ್ 8 ರಂದು ಗುಜರಾತಿನ ಫಲಿತಾಂಶವೂ ಪ್ರಕಟವಾಗಲಿದೆ.  ಈಗ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಕೆಲವು ಹಿರಿಯ ನಾಯಕರನ್ನು ಕಣಕ್ಕಿಳಿಸಲಿಲ್ಲ, ಅವರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯಂತಹ ಅನೇಕರು ತಾವಾಗಿಯೇ ಹೊರಗುಳಿಯುವುದಾಗಿ ಘೋಷಿಸಿದರು.

ಮೊದಲ ಬಾರಿಗೆ ಸ್ಪರ್ಧಿಸುತ್ತಿರುವವವರಲ್ಲಿ ರಿವಾಬಾ ಜಡೇಜಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರೀಗ ಹಳ್ಳಿಗಳನ್ನು ಸುತ್ತಿ ಜನಬೆಂಬಲ ಪಡೆಯುತ್ತಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿ ರಿವಾಬಾ 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ಕುಟುಂಬದ ರಜಪೂತ ಪರಂಪರೆ ಮತ್ತು ಮಾಜಿ ರಾಜವಂಶದರಾದ ರಿವಾಬಾ ಜಾಮ್‌ನಗರ-ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದಾರೆ.

2017 ರ ಚುನಾವಣೆಯಲ್ಲಿ ಸ್ಪರ್ಧಿಸಿದ ಏಳು ಮಂದಿ ಕಾಂಗ್ರೆಸ್ ನಾಯಕರು ಈ ಬಾರಿ ಬಿಜೆಪಿ ಪಟ್ಟಿಯಲ್ಲಿದ್ದಾರೆ. ಪ್ರದ್ಯುಮಾನ್ ಜಡೇಜಾ ಮತ್ತು ಅಶ್ವಿನ್ ಕೊತ್ವಾಲ್ ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಗುಜರಾತ್ ಕಾಂಗ್ರೆಸ್‌ನ ಮಾಜಿ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಕನಿಷ್ಠ ವಯಸ್ಸು 25 ಎಂಬ ಮಾನದಂ ಅನ್ನು ಪೂರೈಸದ ಕಾರಣ 2017 ರಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

ನವೆಂಬರ್ 9 ರಂದು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಸಿದ ನಂತರ ಇಂದು ಬೆಳಿಗ್ಗೆ ಬಿಜೆಪಿ ಪಟ್ಟಿ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವರು ಭಾಗವಹಿಸಿದ್ದರು.

27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಪಿಎಂ ಮೋದಿ ಮತ್ತು ಅಮಿತ್ ಶಾ ಅವರ ತವರು ರಾಜ್ಯ ಈ ಬಾರಿ ತ್ರಿಕೋನ ಸ್ಪರ್ಧೆಯನ್ನು ಕಾಣುತ್ತಿದೆ. ಇಲ್ಲಿ ಎಎಪಿಸ, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಲು ಅಬ್ಬರದ ಪ್ರಚಾರ ನಡೆಸುತ್ತಿದೆ.

ಗುಜರಾತಿನಲ್ಲಿ ಸ್ಪರ್ಧಿಸುವ ಪ್ರಮುಖ ಅಭ್ಯರ್ಥಿಗಳು

ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್

ಅಬ್ದಾಸ ಅಸೆಂಬ್ಲಿ ಸ್ಥಾನ: ಪ್ರದ್ಯುಮನ್‌ಸಿಂಹ ಮಹಿಪತ್‌ಸಿನ್ಹ ಜಡೇಜಾ

ವಿರಾಮಗಂ ವಿಧಾನಸಭಾ ಕ್ಷೇತ್ರ: ಹಾರ್ದಿಕ್ ಪಟೇಲ್

ರಾಪರ್ ಅಸೆಂಬ್ಲಿ ಸ್ಥಾನ: ವೀರೇಂದ್ರ ಸಿಂಗ್ ಬಹದ್ದೂರ್ ಜಡೇಜಾ

ರಾಜ್‌ಕೋಟ್ ಪೂರ್ವ ವಿಧಾನಸಭಾ ಕ್ಷೇತ್ರ: ಉದಯಕುಮಾರ್ ಕಂಗಾರ್

ಮಜುರಾ ವಿಧಾನಸಭಾ ಕ್ಷೇತ್ರ: ಗುಜರಾತ್ ಗೃಹ ಸಚಿವ ಹರ್ಷ ಸಂಘವಿ

ಜಾಮ್‌ನಗರ ಉತ್ತರ: ರಿವಾಬಾ ರವೀಂದ್ರ ಜಡೇಜಾ

ಮಾಂಡವಿ: ಅನಿರುದ್ಧ ಭೈಲಾಲ್ ದವೆ

ಭುಜ್: ಕೇಶವಲಾಲ್ ಶಿವದಾಸ್ಭಾಯ್ ಪಟೇಲ್ (ಕೇಶುಭಾಯ್)

ಅಂಜರ್: ತ್ರಿಕಂಭೈ ಬಿಜಲಭಾಯ್ ಛಂಗಾ

ಗೊಂಡಾಲ್ ವಿಧಾನಸಭಾ ಕ್ಷೇತ್ರ: ಮಾಜಿ ಶಾಸಕ ಜೈರಾಜ್ ಸಿಂಗ್ ಜಡೇಜಾ ಅವರ ಪತ್ನಿ ಗೀತಾಬಾ

ಮೋರ್ಬಿ ಅಸೆಂಬ್ಲಿ ಸ್ಥಾನ:  ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾ

Published On - 12:27 pm, Thu, 10 November 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ