2023ರಲ್ಲಿ ಪ್ರತಿದಿನ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ: ನಿತಿನ್ ಗಡ್ಕರಿ

ಎನ್‌ಎಚ್‌ಎಐ ಏಪ್ರಿಲ್ 2019 ರಿಂದ ದೇಶದಾದ್ಯಂತ 30,000 ಕಿ.ಮೀ ಗಿಂತಲೂ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಿದೆ. ಪ್ರಮುಖ ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ದೆಹಲಿಯನ್ನು ಮೀರತ್ ಅಥವಾ ಯುಪಿಯ ಘಾಜಿಪುರದೊಂದಿಗೆ ಲಕ್ನೋವನ್ನು ಸಂಪರ್ಕಿಸುತ್ತದೆ

2023ರಲ್ಲಿ ಪ್ರತಿದಿನ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ: ನಿತಿನ್ ಗಡ್ಕರಿ
ರಾಷ್ಟ್ರೀಯ ಹೆದ್ದಾರಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Nov 10, 2022 | 2:39 PM

ಭಾರತ ಮುಂದಿನ ವರ್ಷದಿಂದ ಪ್ರತಿದಿನ 60 ಕಿಮೀ ಹೊಸ ಹೆದ್ದಾರಿಗಳನ್ನು(highways) ಸೇರಿಸಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಗುರಿಯನ್ನು ಸಾಧಿಸಲು ಶೀಘ್ರದಲ್ಲೇ ತನ್ನ ನಿರ್ಮಾಣವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕನಿಷ್ಠ 12,000 ಕಿಲೋಮೀಟರ್‌ಗಳಷ್ಟು ಹೊಸ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ. ಬಾಕಿ ಉಳಿದಿರುವ ಕೆಲವು ಪ್ರಮುಖ ನಿರ್ಮಾಣ ಕಾರ್ಯಗಳಲ್ಲಿ ಒಂದಾಗಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಎರಡು ಪ್ರಮುಖ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 12 ಗಂಟೆಗಳವರೆಗೆ ಕಡಿಮೆ ಮಾಡುವ ಭರವಸೆಯನ್ನು ನೀಡುತ್ತದೆ. ಉತ್ತಮ ರಸ್ತೆ ಮೂಲಸೌಕರ್ಯವು ಸಮೃದ್ಧಿಗೆ ಮಾತ್ರವಲ್ಲದೆ ಉದ್ಯೋಗಕ್ಕೂ ಕಾರಣವಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು. ಸಚಿವಾಲಯವು ಪ್ರತಿದಿನ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವ ಗುರಿ ಹೊಂದಿದೆ. “ನಾವು ದಿನಕ್ಕೆ 40 ಕಿಮೀ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ, ದಿನಕ್ಕೆ 60 ಕಿಮೀ ಹೆದ್ದಾರಿಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿ ಅವರ ಅಧಿಕಾರಾವಧಿಯಲ್ಲಿ, ಎನ್‌ಎಚ್‌ಎಐ ಹೊಸ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಗಳನ್ನು ಮಾಡುತ್ತಿದೆ.

ಎನ್‌ಎಚ್‌ಎಐ ಏಪ್ರಿಲ್ 2019 ರಿಂದ ದೇಶದಾದ್ಯಂತ 30,000 ಕಿ.ಮೀ ಗಿಂತಲೂ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಿದೆ. ಪ್ರಮುಖ ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ದೆಹಲಿಯನ್ನು ಮೀರತ್ ಅಥವಾ ಯುಪಿಯ ಘಾಜಿಪುರದೊಂದಿಗೆ ಲಕ್ನೋವನ್ನು ಸಂಪರ್ಕಿಸುತ್ತದೆ. ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ದಿನಕ್ಕೆ 37 ಕಿಮೀ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ಎನ್‌ಎಚ್‌ಎಐ ದಾಖಲೆ ಮಾಡಿದೆ. ಕೋವಿಡ್ -19 ಸಾಂಕ್ರಾಮಿಕ ಮತ್ತು ದೇಶದ ಕೆಲವು ಭಾಗಗಳಲ್ಲಿ ದೀರ್ಘ ಮುಂಗಾರು ಋತುವಿನಿಂದ ಉಂಟಾದ ವಿಳಂಬದಿಂದಾಗಿ ಹಿಂದಿನ ಹಣಕಾಸು ವರ್ಷದಲ್ಲಿ ವೇಗವು ದಿನಕ್ಕೆ 28.64 ಕಿಲೋಮೀಟರ್‌ಗಳಿಗೆ ಇಳಿದಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಎಚ್‌ಎಐ ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 12,000 ಕಿಮೀಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. 2019 ಮತ್ತು 2020 ರ ನಡುವೆ, NHAI 10,237 ಕಿಮೀ ಹೆದ್ದಾರಿಯನ್ನು ನಿರ್ಮಿಸಿದೆ. ನಂತರದ ವರ್ಷದಲ್ಲಿ ಇದು 13,327 ಕಿಮೀಗೆ ಏರಿತು. ಆದರೆ ಅದರ ನಂತರದ ವರ್ಷ 10,457 ಕಿಮೀಗೆ ಕುಸಿಯಿತು. ಹೊಸ ಹೆದ್ದಾರಿಗಳನ್ನು ನಿರ್ಮಿಸಲು ಎನ್‌ಎಚ್‌ಎಐ ಹಣ ಸಂಗ್ರಹಿಸುತ್ತಿದೆ ಎಂದು ಗಡ್ಕರಿ ಹೇಳಿದರು. ಮುಂಬರುವ 26 ಹಸಿರು ಎಕ್ಸ್‌ಪ್ರೆಸ್‌ವೇಗಳು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ಸಂಗ್ರಹಣೆಯ ಮೂಲಕ ಎನ್‌ಎಚ್‌ಎಐ ವಾರ್ಷಿಕ ಸುಮಾರು ₹40,000 ಕೋಟಿ ಆದಾಯವನ್ನು ಗಳಿಸುತ್ತದೆ. 2024 ರ ಅಂತ್ಯದ ವೇಳೆಗೆ ಇದು ₹1.40 ಲಕ್ಷ ಕೋಟಿಗೆ ಏರುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Thu, 10 November 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ