
ನವದೆಹಲಿ: ದೆಹಲಿಯ ಶಾಸ್ತ್ರಿ ನಗರದಲ್ಲಿ (Shastri Nagar) ಇಂದು ಬೆಳಿಗ್ಗೆ 4 ಅಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ಅದೃಷ್ಟವಶಾತ್ ಕಟ್ಟಡ ಖಾಲಿ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ದೆಹಲಿ ಪೊಲೀಸರು, ಅಗ್ನಿಶಾಮಕ (Fire Engine) ಮತ್ತು ಆಂಬ್ಯುಲೆನ್ಸ್ ವಾಹನಗಳು (Ambulance) ಸ್ಥಳಕ್ಕೆ ತಲುಪಿವೆ. ದೆಹಲಿಯ ಕಟ್ಟಡ ಕುಸಿತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇಂದು ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ವೇಳೆ ಕಟ್ಟಡದಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Video Viral: ವಸತಿ ಕಟ್ಟಡದ ಒಳಗೆ ರಾಕೆಟ್ ಸಿಡಿಸಿದ ಯುವಕ, ಭಯನಕ ದೃಶ್ಯ ವೈರಲ್
ಅಕ್ಟೋಬರ್ನಲ್ಲಿ ಕೇಂದ್ರ ದೆಹಲಿಯ ಲಾಹೋರಿ ಗೇಟ್ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು 4 ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಆ ಅಹಿತಕರ ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದರು. ಮೃತರನ್ನು ಖುಷಿ (4), ಸುಲೇಮಾನ್ (75) ಮತ್ತು ಶಗುಫ್ತಾ (70) ಎಂದು ಗುರುತಿಸಲಾಗಿತ್ತು.