ಮುಂಬೈ: ಮಹಾರಾಷ್ಟ್ರದ ಮುಂಬೈ ಮಹಾನಗರಿಯಲ್ಲಿ ರೌಡಿಸಂ ಇನ್ನೂ ನಿಂತಿಲ್ಲ. ಇಲ್ಲಿ ದಿನನಿತ್ಯ ಹತ್ತಾರು ಕೊಲೆ, ಸುಲಿಗೆ, ಕಿಡ್ನಾಪ್, ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಸದ್ಯಕ್ಕೆ ಮುಂಬೈನ ವಕೀಲರೊಬ್ಬರ ಮೇಲೆ ಹಾಡಹಗಲೇ ದುರ್ಷರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮುಂಬೈನ ಬೋರಿವಲಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ಕಾರಿನಲ್ಲಿ ಹೋಗುತ್ತಿದ್ದ ವಕೀಲ ಸತ್ಯದೇವ್ ಜೋಷಿ ಎಂಬುವವರನ್ನು ರೌಡಿಗಳ ಗುಂಪೊಂದು ಅಡ್ಡಹಾಕಿತ್ತು. ಕೈಯಲ್ಲಿ ಮಚ್ಚು, ಲಾಂಗುಗಳನ್ನು ಹಿಡಿದುಕೊಂಡು ಬಂದಿದ್ದ ಅವರು ಜೋಷಿಯ ಕಾರನ್ನು ಮಧ್ಯರಸ್ತೆಯಲ್ಲಿ ಅಡ್ಡಹಾಕಿದ್ದರು. ಕಾರಿನಿಂದ ಇಳಿದು ಏನೆಂದು ಕೇಳುತ್ತಿದ್ದಾಗ ಅವರ ಹಿಂದಿನಿಂದ ಬಂದ ರೌಡಿಗಳು ಮಚ್ಚಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ದೊಣ್ಣೆಗಳಿಂದಲೂ ಥಳಿಸಿದ್ದಾರೆ.
ವಕೀಲ ಮದನ್ ಜೆ. ಗುಪ್ತಾ ಎಂಬುವವರು ಟ್ವಿಟ್ಟರ್ನಲ್ಲಿ ಈ ಭಯಾನಕವಾದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಐದಾರು ಜನರು ಬಂದು ವಕೀಲ ಸತ್ಯದೇವ್ ಮೇಲೆ ದಾಳಿ ನಡೆಸಿರುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಹಗಲು ವೇಳೆಯಲ್ಲೇ ಒಬ್ಬ ವಕೀಲರಿಗೆ ಈ ರೀತಿ ಆಗಿರುವುದನ್ನು ನೋಡಿದ ನೆಟ್ಟಿಗರು ಮುಂಬೈನಲ್ಲಿ ಜನಸಾಮಾನ್ಯರಿಗೆ ಯಾವ ರೀತಿಯ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ರೀತಿ ವಕೀಲರ ಮೇಲೆ ಹಲ್ಲೆ ನಡೆಸಲು ಕಾರಣವೇನೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಸತ್ಯದೇವ್ ವಾದ ಮಂಡನೆ ಮಾಡುತ್ತಿದ್ದ ಕಕ್ಷಿದಾರರ ವಿರೋಧಿ ಬಣದಿಂದ ಈ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.
Adv. Satyadev Joshi came to be assaulted today with swords & such deadly weapons by local goons at Kandivali while rendering professional services to a client. He is hospitalised.
This shows the law and order condition of Mum. @AUThackeray @OfficeofUT @Dwalsepatil @Dev_Fadnavis pic.twitter.com/3ZTuT1JyVz
— Adv Madan J. Gupta (@AdvmadanG) July 18, 2021
ಈ ಘಟನೆಯಲ್ಲಿ ವಕೀಲ ಸತ್ಯದೇವ್ ಜೋಷಿ ಗಂಭೀರವಾಗಿ ಗಾಯಗೊಂಡಿದ್ದು, ಹೊಟ್ಟೆ, ತಲೆಗೆ ಹೊಲಿಗೆಯನ್ನು ಹಾಕಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹೇಳಿಕೆ ನೀಡಿದ ನಂತರ ಅಸಲಿ ವಿಷಯ ಗೊತ್ತಾಗುವ ಸಾಧ್ಯತೆಯಿದೆ. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Cadbury Chocolate: ಡೇರಿ ಮಿಲ್ಕ್ ಚಾಕೋಲೇಟ್ನಲ್ಲಿ ದನದ ಮಾಂಸವಿದೆಯಾ?; ಕ್ಯಾಡ್ಬರಿಯಿಂದ ಅಚ್ಚರಿಯ ಸ್ಪಷ್ಟನೆ
Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!
(Mumbai lawyer attacked with swords in Borivali in daylight Watch Shocking Video)