ಜೈಪುರ: ರಾಜಸ್ಥಾನದ ಕಾಗೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಈ ಜ್ವರ ಮನುಷ್ಯರಿಗೂ ಹರಡುವ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಪಶುಸಂಗೋಪನಾ ಸಚಿವ ಲಾಲ್‌ಚಂದ್ ಕಟಾರಿಯಾ ಅಧಿಕಾರಿಗಳ ತುರ್ತು ಸಭೆ ಕರೆದು ಜನರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಹೈ ಅಲರ್ಟ್ ಘೋಷಿಸಿದ್ದಾರೆ.
ಇಲ್ಲಿಯವರೆಗೆ, ಜೋಧಪುರದಲ್ಲಿ 152, ಜಾಲ್ವಾರ್‌ನಲ್ಲಿ 100, ಜೈಪುರದಲ್ಲಿ 70, ಕೋಟಾದಲ್ಲಿ 47 ಕಾಗೆಗಳು ಜ್ವರದಿಂದ ಸಾವನ್ನಪ್ಪಿದೆ. ಅಲ್ಲದೇ, ಮಧ್ಯಪ್ರದೇಶದ ಇಂದೋರ್ ಬಳಿಯೂ 50 ಕಾಗೆಗಳು ಸಾವನ್ನಪ್ಪಿದ್ದು, ಕಾಗೆಗಳಲ್ಲಿ H5N8 ವೈರಸ್ ಪತ್ತೆಯಾಗಿದೆ.
ಈ ಜ್ವರ ಮಾನವರಿಗೂ ಹರಡಬಹುದು. ಈ ನಿಟ್ಟಿನಲ್ಲಿ ಜನರು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಕೇಂದ್ರ ಸಕಾರ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಕಾಗೆಗಳಲ್ಲಿ ಮಾತ್ರ ಈ ಹಕ್ಕಿ ಜ್ವರ ಕಂಡು ಬಂದಿದ್ದು ಮತ್ತೊಂದು ದಿನ ಇದು ಮುನುಷ್ಯರಿಗೂ ತಗುಲ ಬಹುದು ಎಂಬ ಆತಂಕ ಹೆಚ್ಚಾಗಿದೆ.
Published On - 8:43 am, Mon, 4 January 21