I am no Messiah: ಅದೆಷ್ಟೋ ವಲಸೆ ಕಾರ್ಮಿಕರಿಗೆ ಆಸರೆ ಆದ ನಟ ಸೋನು ಸೂದ್​ ತನ್ನ ಬಗ್ಗೆಯೇ ಹೇಳಿಕೊಂಡ ಮಾತಿದು

ಸೋನು ಸೂದ್​ ಯಾವುದೇ ಹೆಗ್ಗಳಿಕೆ ಪಡೆಯಲು ಸಿದ್ಧರಿಲ್ಲ. ಈ ಹಿಂದೆಯೇ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಸಹಾಯ ಪಡೆದ ವಲಸೆ ಕಾರ್ಮಿಕರು ನನ್ನನ್ನು ತುಂಬ ಹೊಗಳುತ್ತಿದ್ದಾರೆ. ಅವರ ಪಾಲಿನ ದೇವರೆಂಬಂತೆ ನೋಡುತ್ತಾರೆ. ಆದರೆ ನಾನು ಮಹಾತ್ಮನಲ್ಲ ಎಂದಿದ್ದಾರೆ.

I am no Messiah: ಅದೆಷ್ಟೋ ವಲಸೆ ಕಾರ್ಮಿಕರಿಗೆ ಆಸರೆ ಆದ ನಟ ಸೋನು ಸೂದ್​ ತನ್ನ ಬಗ್ಗೆಯೇ ಹೇಳಿಕೊಂಡ ಮಾತಿದು
ನಟ ಸೋನು ಸೂದ್​
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 8:33 PM

ನಟ ಸೋನು ಸೂದ್ ತೆರೆಯ ಮೇಲೆ ಖಳನಾಯಕನಾಗಿದ್ದರೂ, ನಿಜ ಜೀವನದಲ್ಲ ಉದ್ಧಾರಕನಾಗಿದ್ದು ಗೊತ್ತೇ ಇದೆ. ಲಾಕ್​ಡೌನ್​ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಆಸರೆಯಾದ, ಸೋನು ಬಹುಜನರ ಪಾಲಿಗೆ ಆರಾಧ್ಯ ದೈವವೇ ಆಗಿಬಿಟ್ಟಿದ್ದಾರೆ. ತೆಲಂಗಾಣದಲ್ಲಂತೂ ನಟನಿಂದ ಉಪಕಾರ ಪಡೆದವರು, ಸೋನುಗಾಗಿ ದೇವಸ್ಥಾನವನ್ನೇ ಕಟ್ಟಿ ಪೂಜಿಸುತ್ತಿದ್ದಾರೆ.

ನಟ ಸೋನು ಸೂದ್​ ಲಾಕ್​ಡೌನ್ ಸಂದರ್ಭದಲ್ಲಿ ತಮಗಾದ ಅನುಭವವನ್ನು ಪುಸ್ತಕರೂಪದಲ್ಲಿ ಹೊರಹಾಕಿದ್ದಾರೆ. ಲೇಖಕಿ ಮೀನಾ ಅಯ್ಯರ ಸಹಭಾಗಿತ್ವದಲ್ಲಿ ಸೋನು ಸೂದ್​ ಬರೆದ ‘ಐ ಆ್ಯಮ್​ ನೋ​ ಮೆಸ್ಸಿಯಾ..’ (I am no Messiah) ಪುಸ್ತಕ, ಹೊಸವರ್ಷದ ಮೊದಲನೇ ದಿನ ಬಿಗ್​ ಬಿ ಅಮಿತಾಬ್​ ಬಚ್ಚನ್​ರ ಕೌನ್ ಬನೇಗಾ ಕ್ರೋರ್​ಪತಿ ಸೆಟ್​ನಲ್ಲಿ ಅನಾವರಣಗೊಂಡಿದೆ.

Messiah ಎಂದರೆ ಉದ್ಧಾರಕ. ಮಹಾಪುರುಷ, ಮಹಾತ್ಮ ಎಂಬ ಅರ್ಥ ಇದೆ. ಕೊರೊನಾ ಲಾಕ್​ಡೌನ್​ನಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ, ಅವರೆಲ್ಲರ ಕಣ್ಣಲ್ಲೂ ಮಹಾಪುರುಷನೇ ಆಗಿಹೋಗಿರುವ ಸೋನು ಸೂದ್​, ತಮ್ಮ ಅನುಭವ ಹಂಚಿಕೊಂಡ ಪುಸ್ತಕದಲ್ಲಿ ನಾನು ಉದ್ಧಾರಕನಲ್ಲ ಎಂದಿದ್ದಾರೆ. ಈ ಪುಸ್ತಕದ ಹೆಸರೇ ಪುಸ್ತಕದ ಬಗ್ಗೆ ಒಂದು ಕುತೂಹಲ ಮೂಡಿಸುತ್ತದೆ. ವಲಸೆ ಕಾರ್ಮಿಕರಿಗೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಾಗ ಭಾವನಾತ್ಮಕವಾಗಿ ತಾವು ಎಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಸೋನು ಸೂದ್​ ಪುಸ್ತಕದಲ್ಲಿ ವಿವರಿಸಿದ್ದಾರೆ.

ಸ್ಫೂರ್ತಿಯಾಗಿದೆ ಪುಸ್ತಕ’ ಕಳೆದ ವಾರ I am no Messiah ಪುಸ್ತಕದ ಬಗ್ಗೆ ಟ್ವೀಟ್ ಮಾಡಿದ ಸಿನಿಮಾ ನಿರ್ಮಾಪಕ ತುಷಾರ್ ಕಪೂರ್​, ಸೋನು ಸೂದ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ, ಸೋನು ಪುಸ್ತಕಗಳನ್ನು ಕೊಂಡು ಓದಿ ಎಂದು ಜನರಿಗೆ ಮನವಿ ಮಾಡಿದ್ದಾರೆ. ಅದೆಷ್ಟೇ ಪ್ರತಿಕೂಲ ಪರಿಸ್ಥಿತಿ ಬಂದರೂ ಹೋರಾಡುವುದು ಹೇಗೆ ಎಂಬುದನ್ನು 2020ನೇ ಇಸವಿ ನಮಗೆ ಕಲಿಸಿದೆ. ಈ ಮಧ್ಯೆ ಸೋನು ಸೂದ್-ಮೀನಾ ಅಯ್ಯರ್​ ಬರೆದ ಪುಸ್ತಕವೂ ನಮಗೆಲ್ಲ ಸ್ಫೂರ್ತಿಯಾಗಲಿದೆ ಎಂದು ಟ್ವೀಟ್ ಮಾಡಿದ್ದರು.

ಇಷ್ಟೆಲ್ಲ ಸಹಾಯ ಮಾಡಿದರೂ ಸೋನು ಸೂದ್​ ಯಾವುದೇ ಹೆಗ್ಗಳಿಕೆ ಪಡೆಯಲು ಸಿದ್ಧರಿಲ್ಲ. ಈ ಹಿಂದೆಯೇ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಸಹಾಯ ಪಡೆದ ವಲಸೆ ಕಾರ್ಮಿಕರು ನನ್ನನ್ನು ತುಂಬ ಹೊಗಳುತ್ತಿದ್ದಾರೆ. ಅವರ ಪಾಲಿನ ದೇವರೆಂಬಂತೆ ನೋಡುತ್ತಾರೆ. ಆದರೆ ನಾನು ಮಹಾತ್ಮನಲ್ಲ. ನನ್ನ ಹೃದಯ ಹೇಳಿದ್ದನ್ನು ಕೇಳಿದ್ದೇನೆ ಅಷ್ಟೇ. ಒಬ್ಬ ಮನುಷ್ಯನಾಗಿ ಉಳಿದವರಿಗೆ ಸಹಾಯ ಮಾಡುವುದು, ಸಹಾನುಭೂತಿ ತೋರಿಸುವುದು ನನ್ನ ಮತ್ತು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.

ಟ್ರೋಲ್ ಆಯ್ತು ಪುಸ್ತಕ ಇನ್ನು ಸೋನು ಸೂದ್ ಪುಸ್ತಕ ಅಮೆಜಾನ್​ನಲ್ಲಿ ಬಿಡುಗಡೆ ಆದ ಮೇಲೆ ಟೀಕೆಗೆ ಒಳಗಾಯಿತು. ಟ್ರೋಲ್ ಕೂಡ ಆಗಿದೆ. ಸೋನು ಸೂದ್​ ತಮ್ಮ ಕೆಲಸಗಳಿಂದ ಪ್ರಚಾರ ಪಡೆಯಲು ಬಯಸುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದ್ದಾರೆ. ಇಂಥ ಟ್ರೋಲ್​ಗಳಿಗೆ ಉತ್ತರ ನೀಡಿರುವ ಸೋನು ಸೂದ್​, ಹಣ ನೀಡಿ ಇಂಥ ಟ್ರೋಲ್​ಗಳನ್ನು ಮಾಡಿಸಲಾಗಿದೆ. ಮೆಸ್ಸಿಯಾ (ಉದ್ಧಾರಕ) ಎಂದು ನನ್ನನ್ನು ನಾನು ಉಲ್ಲೇಖಿಸಿಕೊಂಡಿದ್ದಕ್ಕೆ ವ್ಯಂಗ್ಯ ಮಾಡಿದ್ದಾರೆ. ಆದರೆ ನಿಜಕ್ಕೂ ನಾನು ಮಹಾಪುರುಷನಲ್ಲ ಎಂದು ಹೇಳಿಕೊಂಡಿದ್ದೇನೆ. ನನ್ನ ಅಭಿಮಾನಿಗಳಿಗೂ ಹಾಗೆ ಕರೆಯದಂತೆ ಹೇಳಿದ್ದೇನೆ. ನನ್ನನ್ನು ನಾನು ಸ್ತುತಿಸಿಕೊಳ್ಳುವ ಜಾಯಮಾನ ನಂದಲ್ಲ. ಅಷ್ಟಕ್ಕೂ ನನ್ನ ಪುಸ್ತಕಗಳು ಒಳ್ಳೆ ರೀತಿಯಲ್ಲಿ ಮಾರಾಟ ಆಗುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

KBC ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ಸೋನು ಸೂದ್ ಅವರ I’m no Messiah ಪುಸ್ತಕ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್