ಭಾರತೀಯ ಸೇನೆಯಲ್ಲಿರುವ ಶ್ವಾನಕ್ಕೆ ಯೋಧರಷ್ಟೇ ಧೈರ್ಯ, ಕಾಳಜಿ ಎಲ್ಲವೂ ಇರುತ್ತದೆ. ಯೋಧರಂತೆಯೇ ಏನಾದರೂ ಅವಘಡ ಸಂಭವಿಸಿದಾಗ ಅವರನ್ನು ರಕ್ಷಿಸಲು ಧಾವಿಸುತ್ತವೆ, ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡಿರುತ್ತಾರೆ. ಹಾಗೆಯೇ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿತ್ತು. ಸ್ಫೋಟದ ವೇಳೆ ಸೈನಿಕರ ಜೊತೆಗಿದ್ದ ಸಿಆರ್‌ಪಿಎಫ್ ಶ್ವಾನ ಗಂಭೀರವಾಗಿ ಗಾಯಗೊಂಡಿದೆ.
ಜಿಲ್ಲೆಯ ಚಿಣಗೇಲೂರು ಗ್ರಾಮದ ಬಳಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಮೂರು ವರ್ಷದ ‘ಬೆಲ್ಜಿಯನ್ ಶೆಫರ್ಡ್ ಟ್ರ್ಯಾಕರ್’ ‘ಆಂಡ್ರೋ’ ಬಲಗಾಲು ಮೂಳೆ ಮುರಿದಿದೆ.
ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ 229 ನೇ ಬೆಟಾಲಿಯನ್‌ನ ‘ಆಲ್ಫಾ’ ಕಂಪನಿಯ ಸೈನಿಕರ ಜೀವವನ್ನು ನಾಯಿ ರಕ್ಷಿಸಿದೆ. ಸಮೀಪದ ಬಿಜಾಪುರ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಮತ್ತಷ್ಟು ಓದಿ: ಮೈಸೂರಿನಲ್ಲಿ ಸಿಡಿಮದ್ದು ಸ್ಫೋಟಗೊಂಡು ಸಾಕು ನಾಯಿ ಛಿದ್ರ ಛಿದ್ರ! ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಇತರ ಭದ್ರತಾ ಪಡೆಗಳು ವಿವಿಧ ರಾಜ್ಯಗಳ ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಳಲ್ಲಿ IEDಗಳನ್ನು ಪತ್ತೆಹಚ್ಚಲು ತರಬೇತಿ ಪಡೆದ ನಾಯಿಗಳನ್ನು ಬಳಸುತ್ತವೆ.
ನಾರಾಯಣಪುರ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ.
In yet another testament of their selfless courage, valour and invaluable contribution, on 15/01/25, K9 Endro, a valiant CRPF member, was injured in an IED blast while leading a patrol in Sukma, saving troops’ lives. Speedy recovery, Endro! #CRPFPride #K9Hero pic.twitter.com/xe2wGUc34P
— Dog Breeding and Training School, CRPF (@DBTS_CRPF) January 16, 2025
ಫೆಬ್ರವರಿ 2023 ರಲ್ಲಿ, ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ನಾಯಿಯೊಂದು ತನ್ನ ಪ್ರಾಣವನ್ನು ತ್ಯಾಗ ಮಾಡಿ ಅನೇಕ ಸೈನಿಕರನ್ನು ಸಾವಿನಿಂದ ರಕ್ಷಿಸಿತ್ತು. ನಾರಾಯಣಪುರದಲ್ಲಿ ಬಾಂಬ್‌ಗೆ ಸಿಲುಕಿ ನಾಯಿಯೊಂದು ಪ್ರಾಣ ಕಳೆದುಕೊಂಡಿದ್ದರೆ ಐಟಿಬಿಪಿ ಯೋಧನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ವಿಶೇಷವೆಂದರೆ ಹಳ್ಳಿಯಿಂದ ಆಗಾಗ ನಾಯಿ ಬರುತ್ತಿದ್ದು, ಸೈನಿಕರು ಅದಕ್ಕೆ ಸ್ವಲ್ಪ ಆಹಾರ ನೀಡುತ್ತಿದ್ದರು. ಘಟನೆಯ ದಿನ ಬಾಂಬ್ ನೋಡಿದಾಗ ಅದರ ಮೇಲೆ ಕುಳಿತು ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ