ಮೈಸೂರಿನಲ್ಲಿ ಸಿಡಿಮದ್ದು ಸ್ಫೋಟಗೊಂಡು ಸಾಕು ನಾಯಿ ಛಿದ್ರ ಛಿದ್ರ! ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿದೆ. ಸ್ಫೋಟಕ್ಕೆ ಕಪ್ಪಸೋಗೆ ಗ್ರಾಮದ ಮಹೇಶ್ ಎಂಬುವರಿಗೆ ಸೇರಿದ್ದ ಸಾಕು ನಾಯಿಯ ಮುಖ ಛಿಧ್ರವಾಗಿದೆ.
ಮೈಸೂರು: ಸಿಡಿಮದ್ದು ಸ್ಫೋಟಗೊಂಡು ಸಾಕು ನಾಯಿ ಛಿದ್ರ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಪ್ಪಸೋಗೆಯ ಮಾದನಹಳ್ಳಿ ಗುಡ್ಡದ ಬಳಿ ನಡೆದಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ಸಿಡಿಮದ್ದು ಇಡಲಾಗಿತ್ತು. ಸ್ಫೋಟದ ಶಬ್ದಕ್ಕೆ ಜಾನುವಾರು ಗಾಬರಿಗೊಂಡು ಓಡಿ ಹೋದವು. ಆತಂಕದಲ್ಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸಾಕು ನಾಯಿ ಛಿದ್ರವಾಗಿತ್ತು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಇರಿಸಿದ್ದ ಸಿಡಿಮದ್ದು ಸ್ಫೋಟವಾಗಿದೆ. ಸ್ಫೋಟಕ್ಕೆ ಕಪ್ಪಸೋಗೆ ಗ್ರಾಮದ ಮಹೇಶ್ ಎಂಬುವರಿಗೆ ಸೇರಿದ್ದ ಸಾಕು ನಾಯಿಯ ಮುಖ ಛಿಧ್ರವಾಗಿದೆ. ಕೇರಳದಲ್ಲಿ ಕಾಡಾನೆಯೊಂದು ಸಿಡಿಮದ್ದಿನ ಸ್ಫೋಟಕ್ಕೆ ಮೃತಪಟ್ಟಿತ್ತು. ಅದೇ ರೀತಿ ನಾಯಿ ಸಾವನ್ನಪ್ಪಿದೆ. ಸದ್ಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹೇಶ್ ತಂದೆ ಸಿದ್ದಮಲ್ಲಯ್ಯ ಎಂಬುವವರು ಜಾನುವಾರುಗಳ ಜೊತೆ ಮಾದನಹಳ್ಳಿ ಗುಡ್ಡಕ್ಕೆ ತೆರಳಿದ್ದರು. ಅವರ ಜೊತೆಗೆ ಸಾಕಿದ್ದ ನಾಯಿ ಸಹ ಹೋಗಿತ್ತು. ಈ ವೇಳೆ ಸ್ಪೋಟ ಸಂಭವಿಸಿ ನಾಯಿ ಮೃತಪಟ್ಟಿದೆ.
ಸಿಡಿಲು ಬಡಿದು ಟ್ರ್ಯಾಕ್ಟರ್ ನಿಲ್ಲಿಸುತ್ತಿದ್ದ ಶೆಡ್ ಭಸ್ಮ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಠಲಾಪುರದಲ್ಲಿ ಸಿಡಿಲು ಬಡಿದು ಟ್ರ್ಯಾಕ್ಟರ್ ನಿಲ್ಲಿಸುತ್ತಿದ್ದ ಶೆಡ್ ಭಸ್ಮವಾಗಿದೆ. ಕರುಣಾ ಎಂಬುವವರಿಗೆ ಸೇರಿದ ಶೆಡ್ ಭಸ್ಮವಾಗಿದ್ದು, ಶೆಡ್‌ನಲ್ಲಿದ್ದ ಟ್ರ್ಯಾಕ್ಟರ್, 15 ಕ್ವಿಂಟಾಲ್ ಅಡಕೆ, ಅಡಕೆ ಮಷೀನ್ ಬೆಂಕಿಗಾಹುತಿಯಾಗಿದೆ. ಸುಮಾರು 25 ಲಕ್ಷ ರೂ. ನಷ್ಟವಾಗಿದೆ.
ಇದನ್ನೂ ಓದಿ
ಜೋರಾಗಿದೆ ಕತ್ರಿನಾ-ವಿಕ್ಕಿ ಮದುವೆ ತಯಾರಿ; ಇತರೆ ಸೆಲೆಬ್ರಿಟಿಗಳಿಗೆ ಕಿರಿಕಿರಿ: ಕಾರಣ ಏನು?
ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರ ಪದಾರ್ಥಗಳನ್ನು ಸೇವಿಸಿ
Published On - 8:43 am, Mon, 15 November 21