ಗುದನಾಳದಲ್ಲಿ ಚಿನ್ನ ಹೊತ್ತು.. ದುಬೈನಿಂದ ಹಾರಿಬಂದ ಖದೀಮರು ಲಾಕ್​!

|

Updated on: Oct 17, 2020 | 6:31 PM

ಚೆನ್ನೈ: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದಂತೆ ಬಂಗಾರವನ್ನ ಕಳ್ಳದಾರಿಯಲ್ಲಿ ಸಾಗಾಣಿಕೆ ಮಾಡುವ ನೂತನ ಐಡಿಯಾಗಳಿಗೆ ಕಳ್ಳರು ಕೈಹಾಕಿದ್ದಾರೆ. ಕೆಲವರು ತಮ್ಮ ಬ್ಯಾಗ್​ಗಳಲ್ಲಿ ಅಥವಾ ಸೂಟ್​ಕೇಸ್​ಗಳಲ್ಲಿರುವ ಸೀಕ್ರೆಟ್​ ಕಂಪಾರ್ಟ್​ಮೆಂಟ್​ಗಳಲ್ಲಿ ಬಚ್ಚಿಟ್ಟು ದೇಶದೊಳಕ್ಕೆ ಸ್ಮಗಲ್​ ಮಾಡಲು ಮುಂದಾಗುತ್ತಾರೆ. ಆದರೆ, ಹಲವಾರು ಬಾರಿ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ, ಈ ಸಲ ಕೆಲವು ಐನಾತಿ ಖದೀಮರು ಬಂಗಾರವನ್ನು ಲೇಹದ ರೂಪದಲ್ಲಿ ಸ್ಮಗಲ್​ ಮಾಡಲು ಮುಂದಾಗಿದ್ದಾರೆ. ಅದು ಹೇಗೆ ಗೊತ್ತಾ? ತಮ್ಮ ಗುದನಾಳದಲ್ಲಿ! ಹೌದು, ದುಬೈನಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 14 ಪ್ರಯಾಣಿಕರ […]

ಗುದನಾಳದಲ್ಲಿ ಚಿನ್ನ ಹೊತ್ತು.. ದುಬೈನಿಂದ ಹಾರಿಬಂದ ಖದೀಮರು ಲಾಕ್​!
Follow us on

ಚೆನ್ನೈ: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದಂತೆ ಬಂಗಾರವನ್ನ ಕಳ್ಳದಾರಿಯಲ್ಲಿ ಸಾಗಾಣಿಕೆ ಮಾಡುವ ನೂತನ ಐಡಿಯಾಗಳಿಗೆ ಕಳ್ಳರು ಕೈಹಾಕಿದ್ದಾರೆ. ಕೆಲವರು ತಮ್ಮ ಬ್ಯಾಗ್​ಗಳಲ್ಲಿ ಅಥವಾ ಸೂಟ್​ಕೇಸ್​ಗಳಲ್ಲಿರುವ ಸೀಕ್ರೆಟ್​ ಕಂಪಾರ್ಟ್​ಮೆಂಟ್​ಗಳಲ್ಲಿ ಬಚ್ಚಿಟ್ಟು ದೇಶದೊಳಕ್ಕೆ ಸ್ಮಗಲ್​ ಮಾಡಲು ಮುಂದಾಗುತ್ತಾರೆ. ಆದರೆ, ಹಲವಾರು ಬಾರಿ ಸಿಕ್ಕಿಬಿದ್ದಿದ್ದಾರೆ.

ಹಾಗಾಗಿ, ಈ ಸಲ ಕೆಲವು ಐನಾತಿ ಖದೀಮರು ಬಂಗಾರವನ್ನು ಲೇಹದ ರೂಪದಲ್ಲಿ ಸ್ಮಗಲ್​ ಮಾಡಲು ಮುಂದಾಗಿದ್ದಾರೆ. ಅದು ಹೇಗೆ ಗೊತ್ತಾ? ತಮ್ಮ ಗುದನಾಳದಲ್ಲಿ! ಹೌದು, ದುಬೈನಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 14 ಪ್ರಯಾಣಿಕರ ಗುಂಪೊಂದು ತಮ್ಮ ಗುದನಾಳದಲ್ಲಿ ಬರೋಬ್ಬರಿ 4.14 ಕೆ.ಜಿ ಬಂಗಾರವನ್ನು ಹೊತ್ತು ತಂದಿದ್ದಾರೆ. ಬರೋಬ್ಬರಿ 2.16 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ಗಟ್ಟಿಗಳ ಆಕಾರದಲ್ಲಿ ಹೊತ್ತುತಂದಿದ್ದರು.

ಅದು ಹೇಗೋ ಏನೋ ಗೊತ್ತಿಲ್ಲ. ಒಟ್ನಲ್ಲಿ, ಕಸ್ಟಮ್ಸ್ ಅಧಿಕಾರಿಗಳಿಗೆ ಇವರ ಮೇಲೆ ಸಂಶಯ ಬಂದು ಎಲ್ಲರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ,  ಇವರ ಬಾಯಿಯಿಂದ ಸತ್ಯ ಹೊರಬಂದಿದೆ. ಇದೀಗ, ಖದೀಮರನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಚಿನ್ನವನ್ನು ಖದೀಮರ ಗುದನಾಳದಿಂದ ಹೇಗೆ ಹೊರತೆಗೆದರೋ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಆ ಕಸ್ಟಮ್ಸ್​ ಅಧಿಕಾರಿಗಳೇ ಬಲ್ಲರು!