ಸಿಡಬ್ಲ್ಯೂಆರ್​ಸಿ ಆದೇಶಕ್ಕೆ ಒಪ್ಪದ ಕರ್ನಾಟಕ, ತಮಿಳುನಾಡು; ಸೆ.18ಕ್ಕೆ CWMA ಸಭೆ ನಿಗದಿ

| Updated By: Rakesh Nayak Manchi

Updated on: Sep 15, 2023 | 2:00 PM

ರೈತರ ಭಾರೀ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂ ಆರ್​ಸಿ ಕರ್ನಾಟಕಕ್ಕೆ ಆದೇಶಿಸಿತ್ತು. ಮುಂದಿನ 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಕರ್ನಾಟಕ ಒಪ್ಪದ ಕಾರಣ, ಸೆಪ್ಟೆಂಬರ್ 18 ರಂದು ಕಾವೇರಿ ನೀರು ನಿರ್ವಹಣಾ ಪ್ರಧಾಕಾರದ ಸಭೆ ನಿಗದಿ ಮಾಡಲಾಗಿದೆ.

ಸಿಡಬ್ಲ್ಯೂಆರ್​ಸಿ ಆದೇಶಕ್ಕೆ ಒಪ್ಪದ ಕರ್ನಾಟಕ, ತಮಿಳುನಾಡು; ಸೆ.18ಕ್ಕೆ CWMA ಸಭೆ ನಿಗದಿ
ಸಿಡಬ್ಲ್ಯುಆರ್​ಸಿ ಆದೇಶಕ್ಕೆ ಕರ್ನಾಟಕ, ತಮಿಳುನಾಡು ಒಪ್ಪದ ಹಿನ್ನೆಲೆ ಸೆ.18ಕ್ಕೆ CWMA ಸಭೆ ನಿಗದಿ
Follow us on

ನವದೆಹಲಿ, ಸೆ.15: ತಮಿಳುನಾಡಿಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್​ಸಿ (CWRC) ಆದೇಶವನ್ನು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಒಪ್ಪದ ಹಿನ್ನೆಲೆ ಸೆಪ್ಟೆಂಬರ್ 18 ರಂದು ಕಾವೇರಿ ನೀರು ನಿರ್ವಹಣಾ ಪ್ರಧಾಕಾರದ (CWMA) ಸಭೆ ನಿಗದಿ ಮಾಡಲಾಗಿದೆ.

ಕರ್ನಾಟಕದಲ್ಲಿ ಮಳೆ ಅಭಾವದಿಂದ ನೀರಿನ ಅಭಾವ ಇದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂ ಆರ್​ಸಿ ಆದೇಶ ಹೊರಡಿಸಿತ್ತು. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ 15 ದಿನ ಪ್ರತಿನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: ಕಾವೇರಿ ನದಿಯ 3 ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿತ, ಕಳೆದ 10 ವರ್ಷಕ್ಕಿಂತ ಈ ವರ್ಷ ಭಾರಿ ಕಡಿಮೆ

ಸಿಡಬ್ಲ್ಯೂಆರ್​ಸಿ ಆದೇಶಕ್ಕೆ ಕರ್ನಾಟಕದ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದೇಶಕ್ಕೆ ತಮಿಳುನಾಡು ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಇತ್ತ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ರೈತರ ಆಕ್ರೋಶದ ಕಿಡಿ ಹೆಚ್ಚಾಗಿತ್ತು.

ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ. ತಮಿಳುನಾಡಿಗೆ ನೀರು ಬಿಡುವಷ್ಟು ನೀರು ನಮ್ಮಲ್ಲಿ ಇಲ್ಲ ಎಂದು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Fri, 15 September 23