ಕೋಲ್ಕತ್ತಾ: ಅಂಫಾನ್ ಚಂಡಮಾರುತ ತನ್ನ ಫ್ರಭಾವ ಬೀರಲು ಆರಂಭಿಸಿದೆ. ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. 82 ಕಿ.ಮೀ. ವೇಗದಲ್ಲಿ ಅಂಫಾನ್ ಚಂಡಮಾರುತ ಬೀಸುತ್ತಿದೆ. ಅಂಫಾನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 19 NDRF ತಂಡಗಳನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ 6 ತಂಡಗಳು, ಪೂರ್ವ ಮಿಡ್ನಾಪುರ, ಕೋಲ್ಕತ್ತಾದಲ್ಲಿ ತಲಾ 4 ತಂಡಗಳು, ಉತ್ತರ 24 ಪರಗಣದಲ್ಲಿ 3 ಎನ್‌ಡಿಆರ್‌ಎಫ್ ತಂಡ ಹಾಗೂ ಹೂಗ್ಲಿ, ಹೌರದಲ್ಲಿ ತಲಾ 1 […]
ಕೋಲ್ಕತ್ತಾ: ಅಂಫಾನ್ ಚಂಡಮಾರುತ ತನ್ನ ಫ್ರಭಾವ ಬೀರಲು ಆರಂಭಿಸಿದೆ. ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. 82 ಕಿ.ಮೀ. ವೇಗದಲ್ಲಿ ಅಂಫಾನ್ ಚಂಡಮಾರುತ ಬೀಸುತ್ತಿದೆ.
ಅಂಫಾನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 19 NDRF ತಂಡಗಳನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ 6 ತಂಡಗಳು, ಪೂರ್ವ ಮಿಡ್ನಾಪುರ, ಕೋಲ್ಕತ್ತಾದಲ್ಲಿ ತಲಾ 4 ತಂಡಗಳು, ಉತ್ತರ 24 ಪರಗಣದಲ್ಲಿ 3 ಎನ್‌ಡಿಆರ್‌ಎಫ್ ತಂಡ ಹಾಗೂ ಹೂಗ್ಲಿ, ಹೌರದಲ್ಲಿ ತಲಾ 1 ಎನ್‌ಡಿಆರ್‌ಎಫ್ ನಿಯೋಜನೆ ಮಾಡಲಾಗಿದೆ.