Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆ, ಭೂಕುಸಿತ

ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆ, ಭೂಕುಸಿತ
ಮಾಂಡೌಸ್ ಚಂಡಮಾರುತ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 10, 2022 | 10:40 AM

ಚೆನ್ನೈ: ನೆರೆಯ ರಾಜ್ಯವಾದ ತಮಿಳುನಾಡಿಗೆ ಮಾಂಡೌಸ್ ಚಂಡಮಾರುತ (Cyclone Mandous) ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ಭೂಕುಸಿತ ಪೂರ್ಣಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮಾಂಡೌಸ್ ಚಂಡಮಾರುತವು ಶುಕ್ರವಾರ ರಾತ್ರಿ 11.30ಕ್ಕೆ ಮಾಮಲ್ಲಪುರಂನ ಆಗ್ನೇಯಕ್ಕೆ ಸುಮಾರು 15 ಕಿಮೀ ದೂರದಲ್ಲಿ ಉಂಟಾಗಿದೆ. ಮಾಂಡೌಸ್ ಚಂಡಮಾರುತದಿಂದ ಮಾಮಲ್ಲಪುರಂನಲ್ಲಿ ಭೂಕುಸಿತವಾದ ನಂತರ ಚೆನ್ನೈನ (Chennai Rains) ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಶುರುವಾಗಿದೆ.

ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಟ್ನಂಪಕ್ಕಂ ಕೂಡ ಜಲಾವೃತವಾಗಿದೆ. ಮುಂದಿನ 3 ಗಂಟೆಗಳಲ್ಲಿ ತಮಿಳುನಾಡಿನ ರಾಣಿಪೆಟ್ಟೈ, ವೆಲ್ಲೂರು, ವಿಲುಪುರಂ, ತಿರುವಣ್ಣಾಮಲೈ, ಸೇಲಂ, ಕಲ್ಲಕ್ಕುರಿಚಿ, ತಿರುಪಟ್ಟೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Cyclone Mandous: ಮಾಂಡೌಸ್​ ಚಂಡಮಾರುತದ ಪರಿಣಾಮ; ಡಿ. 13ರವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ

“ಮುಂದಿನ 3 ಗಂಟೆಗಳಲ್ಲಿ ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ತೀವ್ರ ಮಳೆಯಾಗುವ ಸಾಧ್ಯತೆಯಿದೆ” ಎಂದು IMD ತಿಳಿಸಿದೆ. ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಜನರ ಸುರಕ್ಷತೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ. ಜಿಲ್ಲಾವಾರು ಚಂಡಮಾರುತದ ಮೇಲ್ವಿಚಾರಣೆ ಕೂಡ ನಡೆಸಲಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಮಿಳುನಾಡಿನ ದಿಂಡುಗಲ್ ಜಿಲ್ಲಾಧಿಕಾರಿ ಸಿರುಮಲೈ ಮತ್ತು ಕೊಡೈಕೆನಾಲ್‌ನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ. ಚೆನ್ನೈ ಸಂಚಾರ ಪೊಲೀಸರು ಅಕ್ಕರೈ ಮತ್ತು ಕೋವಲಂ ನಡುವಿನ ಪೂರ್ವ ಕರಾವಳಿ ರಸ್ತೆಯಲ್ಲಿ ಈ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಮತ್ತು ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಮುಂದಿನ ಸೂಚನೆ ಬರುವವರೆಗೆ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಇದನ್ನೂ ಓದಿ: Cyclone Mandous: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಭೀತಿ; ಚೆನ್ನೈನ 16 ವಿಮಾನಗಳ ಹಾರಾಟ ರದ್ದು

ಗಾಳಿಯ ವೇಗ ಗಂಟೆಗೆ ಸುಮಾರು 14 ಕಿಮೀ ಇರಲಿದೆ. ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಈಗಾಗಲೇ ಗಂಟೆಗೆ 50-60 ಕಿಮೀ ವೇಗದಲ್ಲಿ ಬಲವಾದ ಗಾಳಿ ಪ್ರಾರಂಭವಾಗಿದೆ. ಭೂಕುಸಿತ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯು ಮುಂದುವರಿಯುತ್ತದೆ. ಈ ಹಿಂದೆ ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಗರಿಷ್ಠ ಗಾಳಿಯ ವೇಗ ಗಂಟೆಗೆ 85 ಕಿಮೀ ದಾಟಬಹುದು ಎಂದು IMD ಊಹಿಸಿತ್ತು. ಹಾಗೇ, ರೆಡ್ ಅಲರ್ಟ್ ಘೋಷಿಸಿತ್ತು.

ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಮೂರು ರಾಜ್ಯಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಡಾಪ್ಲರ್ ಹವಾಮಾನ ರಾಡಾರ್ ಕಾರೈಕಲ್ ಮತ್ತು ಚೆನ್ನೈನಲ್ಲಿ ಚಂಡಮಾರುತದ ಮೇಲೆ ನಿಗಾ ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 am, Sat, 10 December 22