Cyclone Mocha: ಮುಂದಿನ ವಾರ ಭಾರತದ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಯಾವ ರಾಜ್ಯಗಳಲ್ಲಿರಲಿದೆ ಇದರ ಪ್ರಭಾವ?

|

Updated on: May 03, 2023 | 1:52 PM

ಭಾರತೀಯ ಹವಾಮಾನ ಇಲಾಖೆಗೆ ಚಂಡಮಾರುತದ ಚಲನೆಯ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿಯ ಮೇಲೆ ಅದರ ಪ್ರಭಾವವನ್ನು ತಳ್ಳಿಹಾಕಲಾಗುವುದಿಲ್ಲ

Cyclone Mocha: ಮುಂದಿನ ವಾರ ಭಾರತದ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಯಾವ ರಾಜ್ಯಗಳಲ್ಲಿರಲಿದೆ ಇದರ ಪ್ರಭಾವ?
ಮೋಚಾ ಚಂಡಮಾರುತ
Follow us on

ವರ್ಷದ ಮೊದಲ ಚಂಡಮಾರುತ ಮೋಚಾ(Cyclone Mocha) ಈ ವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ (Bay of Bengal) ರೂಪುಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ, ಮೇ 6 ರ ಸುಮಾರಿಗೆ ಚಂಡಮಾರುತದ ಪರಿಚಲನೆಯು ರೂಪುಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಸೈಕ್ಲೋನ್ ರಚನೆಯನ್ನು ಇನ್ನೂ ದೃಢೀಕರಿಸಲಾಗಿಲ್ಲ. ಮೇ 6, 2023 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಅದರ ಪ್ರಭಾವದಿಂದಾಗಿ ನಂತರದ 48 ಗಂಟೆಗಳಲ್ಲಿ (ಮೇ 7 ಮತ್ತು 8) ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ. ಯುಎಸ್ ಹವಾಮಾನ ಮುನ್ಸೂಚನೆ ಮಾದರಿ ಮತ್ತು ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರವು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ರಚನೆಯ ಮುನ್ಸೂಚನೆ ನೀಡಿದ ನಂತರ ಐಎಂಡಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

WMO/ESCAP ಸದಸ್ಯ ರಾಷ್ಟ್ರಗಳು ಅನುಸರಿಸುವ ನಾಮಕರಣ ವ್ಯವಸ್ಥೆಯ ಪ್ರಕಾರ, ಸೈಕ್ಲೋನಿಕ್ ಚಂಡಮಾರುತವು ರೂಪುಗೊಂಡರೆ ಅದನ್ನು ‘ಸೈಕ್ಲೋನ್ ಮೋಚಾ’ ಎಂದು ಹೆಸರಿಸಲಾಗುತ್ತದೆ. ಯೆಮೆನ್ ದೇಶವು ಈ ಹೆಸರನ್ನು ಸೂಚಿಸಿದೆ.

ಕೆಲವು ಮಾದರಿಗಳು ಇದು ಸೈಕ್ಲೋನ್ ಎಂದು ಸೂಚಿಸುತ್ತಿವೆ. ನಾವು ನಿಗಾ ಇಡುತ್ತಿದ್ದೇವೆ. ನವೀಕರಣಗಳನ್ನು ನಿಯಮಿತವಾಗಿ ಒದಗಿಸಲಾಗುವುದು  ಎಂದು ಭಾರತೀಯ ಹವಾಮಾನ ಇಲಾಖೆಯ ಯ ಮೃತ್ಯುಂಜಯ್ ಮೊಹಾಪಾತ್ರ ಹೇಳಿರುವುದಾಗಿ ಲೈವ್‌ಮಿಂಟ್‌ ವರದಿ ಮಾಡಿದೆ.


ಇತ್ತೀಚಿನ ವರ್ಷಗಳಲ್ಲಿ 2020 ರಲ್ಲಿ ಅಂಫಾನ್, 2021 ರಲ್ಲಿ ಅಸಾನಿ ಮತ್ತು 2022 ರಲ್ಲಿ ಯಾಸ್ ಸೇರಿದಂತೆ ಹೆಚ್ಚಿನ ಚಂಡಮಾರುತಗಳು ಮೇ ತಿಂಗಳಲ್ಲಿ ಅಪ್ಪಳಿಸಿದ್ದವು.

ಭಾರತೀಯ ಹವಾಮಾನ ಇಲಾಖೆಗೆ ಚಂಡಮಾರುತದ ಚಲನೆಯ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿಯ ಮೇಲೆ ಅದರ ಪ್ರಭಾವವನ್ನು ತಳ್ಳಿಹಾಕಲಾಗುವುದಿಲ್ಲ. ಚಂಡಮಾರುತದಿಂದ ಉಂಟಾಗುವ ಯಾವುದೇ ಹಾನಿಯನ್ನು ತಡೆಯಲು ಒಡಿಶಾ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಮುನ್ಸೂಚನೆ ಏನಿದೆ?

Windy.com ಹಂಚಿಕೊಂಡ ಮುನ್ಸೂಚನೆಗಳ ಪ್ರಕಾರ, ಚಂಡಮಾರುತವು ಮುಂದಿನ ಮಂಗಳವಾರ ಬಂಗಾಳ ಕೊಲ್ಲಿಗೆ ಬರುವ ಸಾಧ್ಯತೆಯಿದೆ. ನಂತರ ಅದು ಕ್ರಮೇಣ ಉತ್ತರದ ಕಡೆಗೆ ಚಲಿಸುವ ನಿರೀಕ್ಷೆಯಿದೆ,ಇದು ಭಾರತದ ಕರಾವಳಿಯ ಹತ್ತಿರದಲ್ಲಿದೆ.
ಐಎಂಡಿ ಗ್ಲೋಬಲ್ ಫಾರ್​​ಕಾಸ್ಟ್ ಸಿಸ್ಟಂ (GFS) ಪ್ರಕಾರ, ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿ ರೂಪುಗೊಳ್ಳುತ್ತಿರುವ ಕಡಿಮೆ ಒತ್ತಡದ ಪ್ರದೇಶವು ಅಂಡಮಾನ್ ದ್ವೀಪಗಳ ಬಳಿ ಮೇ 9 ರಂದು ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ.

ಚಂಡಮಾರುತವು ಮೇ 11 ರವರೆಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯ ಕಡೆಗೆ ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಮೇ 11 ರಂದು ಚಂಡಮಾರುತದ ನಂತರ ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ಮೀಡಿಯಂ ರೇಂಜ್ ವೆದರ್ ಫಾರ್ ಕಾಸ್ಟ್ ಯುರೋಪಿಯನ್ ಕೇಂದ್ರ (ECMWF) ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Bhuj Earthquake 2001: ಕುಟುಂಬದವರೆಲ್ಲಾ ಪ್ರಾಣ ಬಿಟ್ಟಿದ್ದ ಕಾಂಕ್ರೀಟ್​ ರಾಶಿಗಳ ನಡುವಿಂದ ಪವಾಡವೆಂಬಂತೆ ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ

ಚಂಡಮಾರುತ ಎದುರಿಸಲು ಸಿದ್ಧತೆ ನಡೆಸಿದ ಒಡಿಶಾ

ಸಂಭವನೀಯ ಚಂಡಮಾರುತ ‘ಮೋಚಾ’ ಎದುರಿಸಲಿರುವ ಸನ್ನದ್ದತೆಯನ್ನು ಪರಿಶೀಲಿಸಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ.ಬೇಸಿಗೆಯಲ್ಲಿ ರೂಪುಗೊಂಡ ಚಂಡಮಾರುತಗಳ ಹಾದಿಯನ್ನು ನಿಖರವಾಗಿ ನಿರ್ಧರಿಸಲು ಕಷ್ಟವಾಗುವುದರಿಂದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಸಿಎಂ ಪಟ್ನಾಯಕ್ ಹೇಳಿದ್ದಾರೆ. ಅಧಿಕಾರಿಗಳು ಮತ್ತು ಇಲಾಖೆಗಳು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ ಅವರು, ಎನ್‌ಡಿಆರ್‌ಎಫ್, ಒಡಿಆರ್‌ಎಫ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿಯೂ ಸಿದ್ಧರಾಗಿರಬೇಕು ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Wed, 3 May 23