ಗುಜರಾತ್ ಕರಾವಳಿ ಪ್ರವೇಶಿಸಿದ ತೌಕ್ತೆ ಚಂಡಮಾರುತ

|

Updated on: May 17, 2021 | 10:40 PM

Cyclone Tauktae: ಗುಜರಾತ್​ನಲ್ಲಿ ತೌಕ್ತೆ ಚಂಡಮಾರುತದ ಅಬ್ಬರವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವಲೋಕಿಸುತ್ತಿದ್ದಾರೆ. ಜತೆಗೆ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕರಾವಳಿ ತೀರದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್ ಕರಾವಳಿ ಪ್ರವೇಶಿಸಿದ ತೌಕ್ತೆ ಚಂಡಮಾರುತ
ಸೈಕ್ಲೋನ್ ತೌಕ್ತೆ
Follow us on

ದೆಹಲಿ: ತೌಕ್ತೆ ಚಂಡಮಾರುತವು ಗುಜರಾತ್ ಕರಾವಳಿಯನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗುಜರಾತ್​ನಲ್ಲಿ ತೌಕ್ತೆ ಚಂಡಮಾರುತದ ಅಬ್ಬರವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವಲೋಕಿಸುತ್ತಿದ್ದಾರೆ. ಜತೆಗೆ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕರಾವಳಿ ತೀರದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಸುಮಾರು 1.50 ಲಕ್ಷ ಜನರನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಲಾಗಿದೆ.

ಈಗಾಗಲೇ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕೇರಳ, ಕರ್ನಾಟಕ ಮತ್ದತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ.

ತೌಕ್ತೆಯಿಂದ ಹಾನಿಗೊಳಗಾದವರಿಗೆ ಪರಿಹಾರ
ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದಿಂದ ಸಂಭವಿಸಿದ ಹಾನಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಚಂಡಮಾರುತದಿಂದ ಮನೆ ಸಂಪೂರ್ಣ ಕುಸಿದು ಬಿದ್ದಿದ್ದರೆ 5 ಲಕ್ಷ ಪರಿಹಾರ, ಭಾಗಶಃ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ, ಅರಬ್ಬಿ ಸಮುದ್ರದ ಟಗ್ ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಒದಗಿಸುವುದಾಗಿ ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ. ಜತೆಗೆ ಚಂಡಮಾರುತದಿಂದ ತೊಂದರೆಗೊಳಗಾದ 182 ಕುಟುಂಬಗಳಿಗೆ ತಲಾ 10,000 ರೂಪಾಯಿ ಪರಿಹಾರ ಮನೆಗಳಿಗೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ತೌಕ್ತೆ ಚಂಡಮಾರುತದಿಂದ ರಾಜ್ಯದಲ್ಲಿ ಈವರೆಗೆ 6 ಜನ ಮೃತಪಟ್ಟಿದ್ದಾರೆ. 22 ತಾಲೂಕುಗಳಲ್ಲಿ 57 ಗುಡಿಸಲು, 333 ಮನೆಗಳಿಗೆ ಹಾನಿಯಾಗಿದೆ. 30 ಹೆಕ್ಟೇರ್​ ಕೃಷಿ ಬೆಳೆ, 2.87 ಹೆಕ್ಟೇರ್ ತೋಟಗಾರಿಕಾ ಬೆಳೆ, 57 ಕಿ.ಮೀ ರಸ್ತೆಗೆ ಹಾನಿ ಉಂಟಾಗಿದೆ. 644 ವಿದ್ಯುತ್ ಕಂಬ, 147 ಟ್ರಾನ್ಸ್​ಫಾರ್ಮಾರ್, 104 ಬೋಟ್​ಗಳಿಗೆ ತೌಕ್ತೆಯ ಅಬ್ಬರದಿಂದ ಹಾನಿಗೊಳಗಾಗಿವೆ ಎಂದು ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ ಸರ್ಕಾಕ್ಕೆ ವರದಿ ಸಲ್ಲಿಸಿದೆ.

ಕರ್ನಾಟಕ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿಯ ವರದಿ ಸಲ್ಲಿಸಿದ ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ, ಚಂಡಮಾರುತದಿಂದ ಹಾನಿಗೊಳಗಾದ 547 ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 13 ನೆರೆ ಪರಿಹಾರ ಕೇಂದ್ರಗಳಲ್ಲಿ 290 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಲು ಬಿಡಬೇಡಿ: ಸಿಎಂ ಯಡಿಯೂರಪ್ಪ

ಇದು ಸಾವೋ ಅಥವಾ ಕೊಲೆಯೋ? ಬೆಂಗಳೂರಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ ಬಾಲಿವುಡ್​ ನಟಿ

(Cyclone Tauktae moves towards Gujarat CM Vijay Rupani contact district collector to review the situation)

Published On - 10:35 pm, Mon, 17 May 21