ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ರಾಹುಲ್ ಗಾಂಧಿ ಟ್ವೀಟ್ ಬಗ್ಗೆ ಟ್ಟಿಟರ್​​ನಿಂದ ಉತ್ತರ ಕೇಳಿದ ದೆಹಲಿ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 8:50 PM

Rahul Gandhi: ಸಾಮಾಜಿಕ ಕಾರ್ಯಕರ್ತರಾಗಿರುವ ಅರ್ಜಿದಾರ ಮಕರಂದ್ ಸುರೇಶ್ ಮಡ್ಲೇಕರ್, ರಾಹುಲ್ ಅವರು ಜುವೇನೇಲ್ ಜಸ್ಟೀಸ್ ಕಾಯ್ದೆ 2015 ರ ಸೆಕ್ಷನ್ 74 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 23 (2) ಅನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದಾರೆ, “ಇವೆರಡೂ ಸಂತ್ರಸ್ತ ಮಗುವಿನ ಗುರುತನ್ನು ಬಹಿರಂಗಪಡಿಸಬಾರದು " ಎಂಬುದನ್ನು  ಹೇಳುತ್ತದೆ.

ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ರಾಹುಲ್ ಗಾಂಧಿ ಟ್ವೀಟ್ ಬಗ್ಗೆ ಟ್ಟಿಟರ್​​ನಿಂದ ಉತ್ತರ ಕೇಳಿದ ದೆಹಲಿ ಹೈಕೋರ್ಟ್
ರಾಹುಲ್ ಗಾಂಧಿ
Follow us on

ದೆಹಲಿ: ದೆಹಲಿ ಹೈಕೋರ್ಟ್ ಮಂಗಳವಾರ ಟ್ವಿಟರ್‌ಗೆ ನೋಟಿಸ್ ನೀಡಿದ್ದು ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ 9 ವರ್ಷದ ದಲಿತ ಹುಡುಗಿಯ ಪೋಷಕರ ಭಾವಚಿತ್ರವನ್ನು ಟ್ವೀಟ್ ಮಾಡಿದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಟ್ವಿಟರ್​​ನಿಂದ ಉತ್ತರವನ್ನು ಕೇಳಿದೆ. ಆಗಸ್ಟ್ 1 ರಂದು ನೈರುತ್ಯ ದೆಹಲಿಯಲ್ಲಿ ಸ್ಮಶಾನದಲ್ಲಿ ದುಷ್ಕರ್ಮಿಗಳು ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ರಾಹುಲ್ ಮತ್ತು ಇತರರಿಗೆ ಯಾವುದೇ ನೋಟಿಸ್ ನೀಡುತ್ತಿಲ್ಲ ಎಂದು “ಸ್ಪಷ್ಟವಾಗಿ ಸ್ಪಷ್ಟಪಡಿಸುತ್ತಿದೆ” ಎಂದು ಹೇಳಿದೆ. ಈ ಬಗ್ಗೆ ಇದು ನವೆಂಬರ್ 30 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ಟ್ವೀಟ್‌ನಿಂದಾಗಿ ರಾಹುಲ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್ ನ್ಯಾಯಾಲಯಕ್ಕೆ ಹೇಳಿತ್ತು. “ಆ ನಿರ್ದಿಷ್ಟ ಟ್ವೀಟ್ ಅನ್ನು ತೆಗೆದುಹಾಕಲಾಗಿದೆ ಮತ್ತು ಅವರ ಖಾತೆಯನ್ನು ಮರುಸ್ಥಾಪಿಸಲಾಗಿದೆ” ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತರಾಗಿರುವ  ಅರ್ಜಿದಾರ ಮಕರಂದ್ ಸುರೇಶ್ ಮಡ್ಲೇಕರ್ ರಾಹುಲ್ ಅವರು ಜುವೇನೇಲ್ ಜಸ್ಟೀಸ್ ಕಾಯ್ದೆ 2015 ರ ಸೆಕ್ಷನ್ 74 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 23 (2) ಅನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದಾರೆ, “ಇವೆರಡೂ ಸಂತ್ರಸ್ತ ಮಗುವಿನ ಗುರುತನ್ನು ಬಹಿರಂಗಪಡಿಸಬಾರದು ” ಎಂಬುದನ್ನು  ಹೇಳುತ್ತದೆ.

ಈ ವಿಷಯದಲ್ಲಿ ಕಾನೂನು ನಿಪುನ್ ಸಕ್ಸೇನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣವನ್ನು ಉಲ್ಲೇಖಿಸಿದ್ದು, ಇದರಲ್ಲಿ ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯವು, ಹೆಸರು, ವಿಳಾಸ, ಶಾಲೆ ಅಥವಾ ಇತರ ವಿವರಗಳು ಕಾನೂನು ಹೋರಾಟ ಮಾಡುತ್ತಿರುವ/ಸಂತ್ರಸ್ತ ಮಗುವನ್ನು ಗುರುತಿಸಲು ಕಾರಣವಾಗಬಹುದು. ಇದನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಅಂತಹ ಮಗುವಿನ ಯಾವುದೇ ಚಿತ್ರವನ್ನು ಅಥವಾ ಆಕೆಯ ಗುರುತನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಹಿರಂಗಪಡಿಸುವ ಯಾವುದೇವಿಷಯವನ್ನು ಪ್ರಕಟಿಸಲು ಸಾಧ್ಯವಿಲ್ಲ. ಕಾನೂನಿನೊಂದಿಗೆ ಸಂಘರ್ಷವಿಲ್ಲದ ಆದರೆ ವಿಶೇಷವಾಗಿ ಲೈಂಗಿಕ ಅಪರಾಧದಲ್ಲಿನ ಸಂತ್ರಸ್ತ ಮಗುವಿಗೆ ಈ ರಕ್ಷಣೆಯ ಅಗತ್ಯವಿದೆ ಎಂದು ಅರ್ಜಿದಾರರು ಮನವಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ