Viral Video: ಜೀವಂತ ಕೋಳಿಯ ತಲೆ ಕಚ್ಚಿ ವಿಕೃತಿ ಮೆರೆಯುತ್ತಾ ನೃತ್ಯ ಮಾಡಿದ ಡ್ಯಾನ್ಸರ್​; ವಿಡಿಯೋ ವೈರಲ್​​​

|

Updated on: Jul 12, 2024 | 4:15 PM

ನೃತ್ಯ ಪ್ರದರ್ಶನದ ಸಮಯದಲ್ಲಿ ನೃತ್ಯಗಾರನೊಬ್ಬ ಜೀವಂತ ಕೋಳಿಯನ್ನು ಹಿಡಿದು ಅದರ ಕುತಿಗೆಯನ್ನು ಕಚ್ಚಿ ರಕ್ತ ಹೀರುತ್ತಾ ನೃತ್ಯ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ನೃತ್ಯ ತಂಡದ ವಿರುದ್ದ ಕೇಸು ದಾಖಲಾಗಿದೆ.

Viral Video: ಜೀವಂತ ಕೋಳಿಯ ತಲೆ ಕಚ್ಚಿ ವಿಕೃತಿ ಮೆರೆಯುತ್ತಾ ನೃತ್ಯ ಮಾಡಿದ ಡ್ಯಾನ್ಸರ್​; ವಿಡಿಯೋ ವೈರಲ್​​​
Follow us on

ಆಂಧ್ರಪ್ರದೇಶ: ಅನಕಾಪಲ್ಲಿಯಲ್ಲಿ ವಿಷ್ಣು ಎಂಟರ್‌ಟೈನ್‌ಮೆಂಟ್ ಹೆಸರಿನ ನೃತ್ಯ ತಂಡವೊಂದರ ನೃತ್ಯ ಪ್ರದರ್ಶನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ತಂಡವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅವರ ಅಭಿನಯವು ವಿವಾದವನ್ನು ಹುಟ್ಟುಹಾಕಿದೆ. ಎಬಿಪಿ ದೇಶಂ ವರದಿಯ ಪ್ರಕಾರ, ನೃತ್ಯ ತಂಡವು ನೃತ್ಯ ಪ್ರದರ್ಶನದ ವೇಳೆ ಜೀವಂತ ಕೋಳಿ ತಲೆಯನ್ನು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಪರಿಣಾಮವಾಗಿ ಇದೀಗ ಈ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ನೃತ್ಯ ಪ್ರದರ್ಶನದ ಸಮಯದಲ್ಲಿ ನೃತ್ಯಗಾರನೊಬ್ಬ ಜೀವಂತ ಕೋಳಿಯನ್ನು ಹಿಡಿದು ಅದರ ಕತ್ತಿಗೆ ಕಚ್ಚಿ ರಕ್ತ ಹೀರುತ್ತಿರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೆಲ ಹೊತ್ತಿನಲ್ಲೇ ಎಲ್ಲೆಡೆ ವೈರಲ್​​ ಆಗಿದೆ.

ಇದನ್ನೂ ಓದಿ: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?

ಈ ವೈರಲ್​​​ ವಿಡಿಯೋ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಣಿ ಹಿಂಸೆಗೈದ ನೃತ್ಯಗಾರನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಪರಿಣಾಮ ನೃತ್ಯ ತಂಡದ ವಿರುದ್ದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ರ ಸೆಕ್ಷನ್ 11 (1) (ಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 11 (1) (ಎ) ಅಡಿಯಲ್ಲಿ ಕೇಸು ದಾಖಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Fri, 12 July 24